ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

18 ವರ್ಷ ಸೋಲದ ಭಾರತಕ್ಕೆ ಈ ಬಾರಿ ಲಂಕಾದಲ್ಲಿ ಅಗ್ನಿಪರೀಕ್ಷೆ!

IND vs SL Test Series 2026: ಕಳೆದ 10 ಟೆಸ್ಟ್‌ ಪಂದ್ಯಗಳಲ್ಲೂ ಭಾರತ ಅಜೇಯವಾಗಿದ್ದು, ಈ ಗೆಲುವಿನ ಓಟವನ್ನು ಈ ಬಾರಿಯೂ ಮುಂದುವರಿಸುವ ನಿರೀಕ್ಷೆಯಲ್ಲಿದೆ. ಆದರೆ ಕಳೆದ 2 ವರ್ಷಗಳಲ್ಲಿ ಎದುರಾಗಿರುವ 3 ಐತಿಹಾಸಿಕ ಸರಣಿ ಸೋಲುಗಳನ್ನು ನೋಡುವಾಗ ಲಂಕಾದಲ್ಲಿ ಸರಣಿ ಗೆಲುವು ಅಷ್ಟು ಸುಲಭವೇನಲ್ಲ ಎಂಬುದನ್ನು ಸೂಚಿಸುತ್ತಿದೆ.

IND vs SL Test Series 2026

ಕೊಲಂಬೊ, ಆ.11: ಭಾರತ ತಂಡವು ಶ್ರೀಲಂಕಾ ವಿರುದ್ಧ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲು ವೇದಿಕೆ ಸಜ್ಜಾಗಿದೆ. ಆಗಸ್ಟ್ 15 ರಂದು ಗಾಲೆ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುವ ಮೊದಲ ಟೆಸ್ಟ್ ಪಂದ್ಯದಿಂದ ಪ್ರಾರಂಭವಾಗುವ ಎರಡು ಟೆಸ್ಟ್ ಪಂದ್ಯಗಳಲ್ಲಿ ಎರಡೂ ತಂಡಗಳು ಪರಸ್ಪರ ಸೆಣಸಾಡಲಿವೆ. ಶುಭಮನ್ ಗಿಲ್ ತಂಡವನ್ನು ಮುನ್ನಡೆಸಲಿದ್ದಾರೆ ಮತ್ತು ಭಾರತ ತಂಡವು ಉತ್ತಮ ಪ್ರದರ್ಶನ ನೀಡುವ ಭರವಸೆಯಲ್ಲಿದೆ. ಆದರೆ ಈ ಸರಣಿಯಲ್ಲಿ ಭಾರತಕ್ಕೆ ಅಗ್ನಿಪರೀಕ್ಷೆ ಎದುರಾಗುವುದು ಖಚಿತ.

18 ವರ್ಷದಿಂದ ಭಾರತ ಸರಣಿ ಸೋತಿಲ್ಲ

2008ರ ಬಳಿಕ ಲಂಕಾದಲ್ಲಿ ಭಾರತ ತಂಡ ಟೆಸ್ಟ್‌ ಸರಣಿ ಸೋತಿಲ್ಲ. 2010ರಲ್ಲಿ ಸರಣಿ ಡ್ರಾಗೊಂಡಿದ್ದರೆ, 2015, 2017ರ ಸರಣಿಗಳಲ್ಲಿ ಭಾರತ ಗೆದ್ದಿತ್ತು. ಒಟ್ಟಾರೆ ಕಳೆದ 18 ವರ್ಷಗಳಲ್ಲಿ ಭಾರತ ತಂಡ ಲಂಕಾದಲ್ಲಿ ಟೆಸ್ಟ್‌ ಸರಣಿ ಸೋತಿಲ್ಲ. ಭಾರತ ಹಾಗೂ ಲಂಕಾ ಎರಡೂ ದೇಶಗಳಲ್ಲಿ 2008ರ ಬಳಿಕ ನಡೆದ ಒಟ್ಟು 6 ಟೆಸ್ಟ್‌ ಸರಣಿಗಳಲ್ಲಿ ಭಾರತ ಅಜೇಯವಾಗಿದೆ. 5 ಸರಣಿಗಳಲ್ಲಿ ಟೀಂ ಇಂಡಿಯಾ ಗೆದ್ದಿದ್ದು, 1 ಸರಣಿ ಡ್ರಾದಲ್ಲಿ ಅಂತ್ಯಗೊಂಡಿದೆ.

ಕಳೆದ 10 ಟೆಸ್ಟ್‌ ಪಂದ್ಯಗಳಲ್ಲೂ ಭಾರತ ಅಜೇಯವಾಗಿದ್ದು, ಈ ಗೆಲುವಿನ ಓಟವನ್ನು ಈ ಬಾರಿಯೂ ಮುಂದುವರಿಸುವ ನಿರೀಕ್ಷೆಯಲ್ಲಿದೆ. ಆದರೆ ಕಳೆದ 2 ವರ್ಷಗಳಲ್ಲಿ ಎದುರಾಗಿರುವ 3 ಐತಿಹಾಸಿಕ ಸರಣಿ ಸೋಲುಗಳನ್ನು ನೋಡುವಾಗ ಲಂಕಾದಲ್ಲಿ ಸರಣಿ ಗೆಲುವು ಅಷ್ಟು ಸುಲಭವೇನಲ್ಲ ಎಂಬುದನ್ನು ಸೂಚಿಸುತ್ತಿದೆ.

2027ರ ವಿಶ್ವಕಪ್‌ ಅರ್ಹತಾ ಸುತ್ತಿನತ್ತ ಮುಖ ಮಾಡಿದ ವೆಸ್ಟ್ ಇಂಡೀಸ್

ಏಷ್ಯಾದ ಈ ಎರಡು ದೈತ್ಯ ತಂಡಗಳು ಕೊನೆಯ ಬಾರಿಗೆ ಮಾರ್ಚ್ 2022 ರಲ್ಲಿ ಮುಖಾಮುಖಿಯಾಗಿದ್ದವು, ಆಗ ಭಾರತವು ತವರಿನಲ್ಲಿ 2-0 ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿತು. ಬೆಂಗಳೂರಿನಲ್ಲಿ ನಡೆದ ಎರಡನೇ ಟೆಸ್ಟ್ ಭಾರತಕ್ಕೆ 238 ರನ್‌ಗಳ ಜಯ ತಂದುಕೊಟ್ಟಿತು ಮತ್ತು ಮೊಹಾಲಿಯಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಭಾರತವು ಇನ್ನಿಂಗ್ಸ್ ಮತ್ತು 222 ರನ್‌ಗಳ ಜಯ ಸಾಧಿಸಿತ್ತು.

ಮುಖಾಮುಖಿ ದಾಖಲೆ

ಭಾರತ ಮತ್ತು ಶ್ರೀಲಂಕಾ ತಂಡಗಳು ಈವರೆಗೆ 46 ಟೆಸ್ಟ್ ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಭಾರತ 22 ಪಂದ್ಯಗಳಲ್ಲಿ ಗೆದ್ದಿದ್ದರೆ, ಶ್ರೀಲಂಕಾ 7 ಬಾರಿ ಜಯಗಳಿಸಿದೆ. 17 ಪಂದ್ಯಗಳು ಡ್ರಾದಲ್ಲಿ ಕೊನೆಗೊಂಡಿವೆ.