ಗಾಲೆ, ಆ.16: ಮಳೆಯ ಅಡಚಣೆಯ ಮಧ್ಯೆಯೂ ಉತ್ತಮ ಬ್ಯಾಟಿಂಗ್ ಪ್ರದರ್ಶನ ತೋರಿದ ಭಾರತ ತಂಡ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಬೃಹತ್ ಮೊತ್ತ ಕಲೆಹಾಕಿದೆ. ಎರಡನೇ ದಿನದಾಟದ ಅಂತ್ಯಕ್ಕೆ 9 ವಿಕೆಟ್‌ಗೆ 460 ರನ್ ಕಲೆಹಾಕಿ ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದೆ.
4 ಗಂಟೆ ಮತ್ತು 30 ನಿಮಿಷ ತಡವಾಗಿ ಆರಂಭವಾದ ದಿನದಾಟವನ್ನು 43 ಓವರ್‌ಗೆ ಸೀಮಿತಗೊಳಿಸಲಾಯಿತು. ಬ್ಯಾಟಿಂಗ್ ಮುಂದುವರಿಸಿದ ಭಾರತ ಆರಂಭದಲ್ಲೇ ರಿಷಭ್ ಪಂತ್ ವಿಕೆಟ್ ಕಳೆದುಕೊಂಡಿತು. 27 ರನ್‌ಗಳಿಸಿದ್ದ ರಿಷಭ್ ಪಂತ್ ಎರಡನೇ ದಿನದಾಟದಲ್ಲಿ 12 ರನ್ ರನ್ ಗಳಿಸಲಷ್ಟೇ ಶಕ್ತರಾಗಿ ಒಟ್ಟಾರೆ 39 ರನ್ ಗಳಿಸಿ ಕೇಶರ ನುವಂಥಗೆ ವಿಕೆಟ್ ಒಪ್ಪಿಸಿದರು.
ಸ್ನಾಯು ಸೆಳೆತದಿಂದ ಮೊದಲ ದಿನದಾಟದಲ್ಲಿ ಅರ್ಧಕ್ಕೆ ಬ್ಯಾಟಿಂಗ್ ಮೊಟಕುಗೊಳಿಸಿದ್ದ ಆರಂಭಿಕ ಬ್ಯಾಟರ್ ಕೆ.ಎಲ್ ರಾಹುಲ್ ಭಾನುವಾರ ಶತಕ ಬಾರಿಸುವ ನಿರೀಕ್ಷೆಯೊಂದಿಗೆ ಬ್ಯಾಟಿಂಗ್‌ಗೆ ಇಳಿದರು. 77 ರನ್‌ಗಳಿಂದ ಬ್ಯಾಟಿಂಗ್ ಮುಂದುವರಿಸಿದ ಅವರು 82 ರನ್ ಗಳಿಸಿದ ವೇಳೆ ವಿಕೆಟ್ ಕಳೆದುಕೊಂಡು ಶತಕ ವಂಚಿತರಾದರು. ಅವರು ಗಳಿಸಿದ್ದು ಕೇವಲ 5 ರನ್ ಮಾತ್ರ.
ನಾಳೆಯಿಂದ ದಿಲ್ಲಿಯಲ್ಲಿ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್
ಮೊದಲ ದಿನದಾಟದಲ್ಲಿ ಶತಕ ಬಾರಿಸಿ ಮಿಂಚಿದ್ದ ಎಡಗೈ ಬ್ಯಾಟರ್ ದೇವದತ್ ಪಡಿಕ್ಕಲ್ ಭಾನುವಾರವೂ ಉತ್ತಮ ಬ್ಯಾಟಿಂಗ್ ನಡೆಸಿದರು. 167 ರನ್ ಗಳಿಸಿದರು. ಮೊದಲ ದಿನದಾಟದಲ್ಲಿ 131 ರನ್ ಗಳಿಸಿದ್ದರು. ಆಲ್‌ರೌಂಡರ್ ರವೀಂದ್ರ ಜಡೇಜಾ 13 ರನ್‌ಗೆ ವಿಕೆಟ್ ಕಳೆದುಕೊಂಡರು.
ಅರ್ಧಶತಕ ಬಾರಿಸಿದ ಜುರೇಲ್
ವಿಕೆಟ್ ಕೀಪರ್ ಬ್ಯಾಟರ್ ಧ್ರುವ್ ಜುರೆಲ್ ಅರ್ಧಶತಕ ಬಾರಿಸಿದರು. 6ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಅವರು 4 ಬೌಂಡರಿ ಮತ್ತು ಒಂದು ಸಿಕ್ಸರ್ ನೆರವಿನಿಂದ 51 ರನ್ ಗಳಿಸಿದರು. ದಿನದಾಟ ಮುಕ್ತಾಯಕ್ಕೆ 7 ಓವರ್ ಬಾಕಿ ಇರುವಾಗ ಔಟಾದರು. ಮಾನವ್ ಸುತಾರ್ ಜತೆಗೂಡಿ 55 ರನ್ ಜತೆಯಾಟ ನಡೆಸಿದರು. ಸುತಾರ್ 24 ಗಳಿಸಿದರು. ಶ್ರೀಲಂಕಾ ಪರ ಪ್ರಭಾತ್ ಜಯಸೂರ್ಯ ನಾಲ್ಕು ವಿಕೆಟ್ ಕಿತ್ತರೆ ಕೇಶರ ನುವಂಥ ಮೂರು ವಿಕೆಟ್ ಪಡೆದರು. ಕುಲ್‌ದೀಪ್ ಯಾದವ್(12*) ಮತ್ತು ಪ್ರಸಿದ್ಧ್ ಕೃಷ್ಣ(1*)
ಸಂಕ್ಷಿಪ್ತ ಸ್ಕೋರ್
ಭಾರತ: ಮೊದಲ ದಿನದಾಟದ ಅಂತ್ಯಕ್ಕೆ 9 ವಿಕೆಟ್‌ಗೆ 460 (ದೇವದತ್ತ ಪಡಿಕ್ಕಲ್ 167, ಕೆ.ಎಲ್ ರಾಹುಲ್ 82, ಧ್ರುವ್ ಜುರೆಲ್ 51, ರಿಷಭ್ ಪಂತ್ 39, ಕೇಶರ ನುವಂಥ 175ಕ್ಕೆ 3, ಪ್ರಭಾತ್ ಜಯಸೂರ್ಯ 109ಕ್ಕೆ 4)