ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಟಾಸ್‌ ಗೆದ್ದ ಭಾರತ; ಏಕದಿನಕ್ಕೆ ಪದಾರ್ಪಣೆ ಮಾಡಿದ ಜಮ್ಮು-ಕಾಶ್ಮೀರದ ವೇಗಿ ನಬಿ

IND vs WI, 2nd ODI LIVE score: ವೆಸ್ಟ್‌ ಇಂಡೀಸ್‌ ತಂಡ ಈ ಪಂದ್ಯಕ್ಕೆ ಬರೋಬ್ಬರಿ ನಾಲ್ಕು ಬದಲಾವಣೆ ಮಾಡಿಕೊಂಡಿತು. ಮೊದಲ ಏಕದಿನ ಪಂದ್ಯದಲ್ಲಿ ನಮನ್ ಧೀರ್ ಅವರಿಗೆ ಅವಕಾಶ ಸಿಕ್ಕಿತ್ತು. ಎರಡನೇ ಪಂದ್ಯದಲ್ಲಿ ಆಕಿಬ್ ನಬಿ ಅವರು ಕೆ.ಎಲ್. ರಾಹುಲ್ ಅವರಿಂದ ಭಾರತ ತಂಡದ ತಮ್ಮ ಚೊಚ್ಚಲ ಕ್ಯಾಪ್ ಸ್ವೀಕರಿಸಿದರು.

IND vs WI 2nd ODI LIVE

ಗುವಾಹಟಿ, ಸೆ.30: ವೆಸ್ಟ್‌ ಇಂಡೀಸ್‌ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಟಾಸ್‌ ಗೆದ್ದ ಟೀಮ್‌ ಇಂಡಿಯಾ ನಾಯಕ ಶುಭಮನ್‌ ಗಿಲ್‌ ಮೊದಲು ಬೌಲಿಂಗ್‌ ಮಾಡುವ ನಿರ್ಧಾರ ಕೈಗೊಂಡಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ವೇಗದ ಬೌಲರ್‌ ಆಕೀಬ್ ನಬಿ ಈ ಪಂದ್ಯದ ಮೂಲಕ ಟೀಮ್‌ ಇಂಡಿಯಾಗೆ ಪದಾರ್ಪಣೆ ಮಾಡಿದರು. ಅವರಿಗಾಗಿ ನಿತೀಶ್‌ ಕುಮಾರ್‌ ರೆಡ್ಡಿ ಜಾಗ ಬಿಡಬೇಕಾಯಿತು.

ಮೊದಲ ಏಕದಿನ ಪಂದ್ಯದಲ್ಲಿ ನಮನ್ ಧೀರ್ ಅವರಿಗೆ ಅವಕಾಶ ಸಿಕ್ಕಿತ್ತು. ಎರಡನೇ ಪಂದ್ಯದಲ್ಲಿ ಆಕಿಬ್ ನಬಿ ಅವರು ಕೆ.ಎಲ್. ರಾಹುಲ್ ಅವರಿಂದ ಭಾರತ ತಂಡದ ತಮ್ಮ ಚೊಚ್ಚಲ ಕ್ಯಾಪ್ ಸ್ವೀಕರಿಸಿದರು. ವೆಸ್ಟ್‌ ಇಂಡೀಸ್‌ ತಂಡ ಈ ಪಂದ್ಯಕ್ಕೆ ಬರೋಬ್ಬರಿ ನಾಲ್ಕು ಬದಲಾವಣೆ ಮಾಡಿಕೊಂಡಿತು.



ಗುವಾಹಟಿಯ ಹವಾಮಾನದ ಬಗ್ಗೆ ಹೇಳುವುದಾದರೆ, ವಾತಾವರಣವು ತುಂಬಾ ಬಿಸಿಯಾಗಿ ಹಾಗೂ ತೇವಾಂಶದಿಂದ ಕೂಡಿದೆ ಮತ್ತು ತಾಪಮಾನವು ಇನ್ನೂ ಹೆಚ್ಚಾಗುವ ನಿರೀಕ್ಷೆಯಿದೆ. ರಾತ್ರಿಯ ವೇಳೆ ಇಬ್ಬನಿ ಹೆಚ್ಚಾಗಿ ಬೀಳುವ ಸಾಧ್ಯತೆಯಿದೆ. ಮೈದಾನದ ಅಳತೆಗಳ ಬಗ್ಗೆ ಹೇಳುವುದಾದರೆ, ಬಲಗಡೆಗೆ ಇರುವ ಬೌಂಡರಿ ತುಂಬಾ ಚಿಕ್ಕದಾಗಿದೆ (61 ಮೀಟರ್), ಮತ್ತು ಎಡಗಡೆಗೆ 69 ಮೀಟರ್ ಇದೆ. ನೇರವಾಗಿ ಮೈದಾನದ ಒಳಗೆ ಹೊಡೆಯುವ ಶಾಟ್ (ಡೌನ್ ದಿ ಗ್ರೌಂಡ್) 74 ಮೀಟರ್ ದೂರದಲ್ಲಿದೆ.

ಕಾಂಪೌಂಡ್ ಆರ್ಚರಿಯಲ್ಲಿ ಚಿನ್ನದ ಹ್ಯಾಟ್ರಿಕ್; ಭಾರತದ ಪದಕಗಳ ಸಂಖ್ಯೆ 59ಕ್ಕೆ ಏರಿಕೆ

ಉಭಯ ತಂಡಗಳು

ಭಾರತ: ರೋಹಿತ್ ಶರ್ಮಾ, ಶುಭಮನ್ ಗಿಲ್(ನಾಯಕ), ವಿರಾಟ್ ಕೊಹ್ಲಿ, ರುತುರಾಜ್ ಗಾಯಕ್ವಾಡ್, ಕೆಎಲ್ ರಾಹುಲ್(ವಿ.ಕೀ.), ನಮನ್ ಧೀರ್, ರವೀಂದ್ರ ಜಡೇಜಾ, ಔಕಿಬ್ ನಬಿ, ಗುರ್ನೂರ್ ಬ್ರಾರ್, ಕುಲದೀಪ್ ಯಾದವ್, ಪ್ರಸಿದ್ಧ್ ಕೃಷ್ಣ.

ವೆಸ್ಟ್‌ ಇಂಡೀಸ್‌: ಜಾನ್ ಕ್ಯಾಂಪ್ಬೆಲ್, ಕೀಸಿ ಕಾರ್ಟಿ, ಶಾಯ್ ಹೋಪ್(ನಾಯಕ), ಅಮೀರ್ ಜಂಗೂ, ಶೆರ್ಫೇನ್ ರುದರ್ಫೋರ್ಡ್, ರೋಸ್ಟನ್ ಚೇಸ್, ಕೀಮೋ ಪಾಲ್, ಅಲ್ಜಾರಿ ಜೋಸೆಫ್, ಶಮರ್ ಜೋಸೆಫ್, ಜೇಡನ್ ಸೀಲ್ಸ್, ವಿಟೆಲ್ ಲಾವ್ಸ್.