ನವದೆಹಲಿ: ವೆಸ್ಟ್ ಇಂಡೀಸ್ ವಿರುದ್ಧದ ತವರಿನ ಟೆಸ್ಟ್(IND vs WI 2nd Test) ಸರಣಿಯಲ್ಲಿ ಅಮೋಘ ಪರಾಕ್ರಮಗೈದ ಭಾರತ, ದ್ವಿತೀಯ ಹಾಗೂ ಅಂತಿಮ ಟೆಸ್ಟ್ ಪಂದ್ಯವನ್ನು 7 ವಿಕೆಟ್‌ಗಳಿಂದ ಗೆದ್ದು ಸರಣಿಯನ್ನು ಕ್ಲೀನ್‌ಸ್ವಿಪ್ ಆಗಿ ವಶಪಡಿಸಿಕೊಂಡಿದೆ. ಇದರೊಂದಿಗೆ ಶುಭಮನ್ ಗಿಲ್ ನಾಯಕನಾಗಿ ಚೊಚ್ಚಲ ಸರಣಿ ಗೆದ್ದ ಕೀರ್ತಿಗೆ ಭಾಜನರಾದರು.
121 ರನ್ ಗುರಿ ಪಡೆದ ಭಾರತ, ನಾಲ್ಕನೇ ದಿನದಾಟದ ಅಂತ್ಯಕ್ಕೆ 1 ವಿಕೆಟ್‌ಗೆ 63 ರನ್ ಬಾರಿಸಿತ್ತು. ಮಂಗಳವಾರ ಮೊದಲ ಅವಧಿಯಲ್ಲೇ ಬಾಕಿ ಇರುವ 58 ರನ್ ಗಳಿಸಿದ ಭಾರತ ಸರಣಿಯನ್ನು 2-0ಯಲ್ಲಿ ವಶಪಡಿಸಿಕೊಂಡಿತು. ಆದರೆ ಅಂತಿಮ ದಿನದಾಟದಲ್ಲಿ ಭಾರತ(124/3) ಎರಡು ವಿಕೆಟ್ ಕಳೆದುಕೊಂಡಿತು. ಕೆ.ಎಲ್ ರಾಹುಲ್ ಅಜೇಯ 58 ರನ್ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. 30 ರನ್ ಗಳಿಸಿದ್ದ ಸುದರ್ಶನ್ ಅಂತಿಮ ದಿನ 9 ರನ್ ಗಳಿಸಿ 39ರನ್‌ಗೆ ವಿಕೆಟ್ ಒಪ್ಪಿಸಿದರು. ನಾಯಕ ಗಿಲ್ 13 ರನ್ ಗಳಿಸಿದರು. ವಿಂಡೀಸ್ ಪರ ನಾಯಕ ರೋಸ್ಟನ್ ಚೇಸ್ 2, ಜೋಮೆಲ್ ವಾರಿಕನ್ ಒಂದು ವಿಕೆಟ್ ಪಡೆದರು.
ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಈ ಟೆಸ್ಟ್‌ನಲ್ಲಿ ಮೊದಲ ಇನಿಂಗ್ಸ್‌ನಲ್ಲಿ ಕಳೆದ ಬ್ಯಾಟಿಂಗ್ ನಡೆಸಿದ್ದ ವಿಂಡೀಸ್ ದ್ವಿತೀಯ ಇನಿಂಗ್ಸ್‌ನಲ್ಲಿ ಅಮೋಘವಾಗಿ ಬ್ಯಾಟಿಂಗ್ ನಡೆಸಿತು. ಕ್ಯಾಂಪ್‌ಬೆಲ್ ಮತ್ತು ಹೋಪ್ಸ್ ತಮ್ಮ ಬ್ಯಾಟಂಗ್ ಪರಾಕ್ರಮದ ಮೂಲಕ ಶತಕ ಬಾರಿಸಿ ‘ಅತಿ ಆತ್ಮವಿಶ್ವಾಸ’ದಲ್ಲಿದ್ದ ಭಾರತಕ್ಕೆ ನಿರಾಸೆ ಮೂಡಿಸುವಲ್ಲಿ ಈ ಇಬ್ಬರೂ ಬ್ಯಾಟರ್‌ಗಳು ಯಶಸ್ವಿಯಾದರು. ಕ್ಯಾಂಪ್‌ಬೆಲ್ 199 ಎಸೆತಗಳಲ್ಲಿ 115 ಮತ್ತು ಹೋಪ್ 214 ಎಸೆತಗಳಲ್ಲಿ 103 ರನ್ ಗಳಿಸಿದರು. ಮೂರನೇ ವಿಕೆಟ್ ಜೊತೆಯಾಟದಲ್ಲಿ 177 ರನ್ ಕಲೆಹಾಕಿದರು. ಇದರಿಂದ ವಿಂಡೀಸ್, ಭಾರತದ ಫಾಲೋ ಆನ್ ಗೆರೆ ದಾಟಿ 220 ರನ್ ಮುನ್ನಡೆ ಸಾಧಿಸಿತು.
ಇದನ್ನೂ ಓದಿ IND vs WI: ದಕ್ಷಿಣ ಆಫ್ರಿಕಾ ವಿರುದ್ದದ ಟೆಸ್ಟ್ ಸರಣಿಗೂ ಮುನ್ನ ಭಾರತಕ್ಕೆ ಆಕಾಶ್ ಚೋಪ್ರಾ!
ಸ್ಕೋರ್: ಭಾರತ 518/5 ಡಿ. ಹಾಗೂ 124/3 (ರಾಹುಲ್ 59*, ಸುದರ್ಶನ್ 39, ವಾರಿಕನ್ 1-39, ರೋಸ್ಟನ್ ಚೇಸ್ 36-2), ವಿಂಡೀಸ್ 248 ಹಾಗೂ 390 (ಕ್ಯಾಂಬೆಲ್ 115, ಹೋಪ್ 103, ಗ್ರೀವ್ಸ್ 50*, ಬೂಮ್ರಾ 3-44, ಕುಲ್ದೀಪ್ 3-104, ಸಿರಾಜ್ 2-43)