ಬೆಂಗಳೂರು, ಅ.16: ಕಳೆದ ವರ್ಷ ಜೂ.4ರಂದು ಆರ್ಸಿಬಿ ಸಂಭ್ರಮಾಚರಣೆ ವೇಳೆ ನಡೆದಿದ್ದ ಕಾಲ್ತುಳಿತದ ಬಳಿಕ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮೊದಲ ಬಾರಿಗೆ ಅಂತಾರಾಷ್ಟ್ರಿಯ ಕ್ರಿಕೆಟ್ ಪಂದ್ಯವೊಂದು ನಡೆಯಲಿದೆ. ಶನಿವಾರ ಭಾರತ-ವೆಸ್ಟ್ ಇಂಡೀಸ್ ನಡುವಣ 5ನೇ ಹಾಗೂ ಅಂತಿಮ ಟಿ20 ಪಂದ್ಯ ನಡೆಯಲಿದೆ. ಇದು ಸರಣಿ ನಿರ್ಣಾಯಕ ಪಂದ್ಯವಾಗಿದೆ. ಸದ್ಯ ಸರಣಿ 2-2 ಸಮಬಲ ಸಾಧಿಸಿದೆ.
ಪಂದ್ಯದ ಹಿನ್ನೆಲೆಯಲ್ಲಿ ತಜ್ಞರ ಸಮಿತಿಯು ಕ್ರೀಡಾಂಗಣದ ಭದ್ರತೆ ಮತ್ತು ಸುರಕ್ಷತಾ ವ್ಯವಸ್ಥೆಗಳನ್ನು ಈಗಾಗಲೇ ಪರಿಶೀಲಿಸಿದೆ. ರಾಜ್ಯ ಸರ್ಕಾರ ರಚಿಸಿರುವ ಉನ್ನತ ತಜ್ಞರ ಸಮಿತಿ ಈಗಾಗಲೇ ಕ್ರೀಡಾಂಗಣಕ್ಕೆ ಆಗಮಿಸಿ ಪರಿಶೀಲನೆ ನಡೆಸಿದೆ.
ಜಿಬಿಎ ಆಯುಕ್ತ ಮಹೇಶ್ವರ ರಾವ್, ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್, ಕ್ರೀಡಾ ಇಲಾಖೆ, ಪೊಲೀಸ್, ಆರೋಗ್ಯ, ಅಗ್ನಿಶಾಮಕ, ಬೆಸ್ಕಾಂ, ಲೋಕೋಪಯೋಗಿ ಇಲಾಖೆ ಮತ್ತು ಸಂಬಂಧಪಟ್ಟ ಇತರ ಇಲಾಖೆಗಳ ಹಿರಿಯ ಅಧಿಕಾರಿಗಳು ಸಿದ್ಧತೆಯನ್ನು ಅವಲೋಕಿಸಿದರು. ಕ್ರೀಡಾಂಗಣದಲ್ಲಿ ಭದ್ರತೆ, ಪ್ರವೇಶ, ನಿರ್ಗಮನ, ಜನಸಂದಣಿ ನಿರ್ವಹಣೆ, ಸಿಸಿಟಿವಿ, ಅಗ್ನಿ ಸುರಕ್ಷತೆ ಸೇರಿ ಪ್ರಮುಖ ಸುರಕ್ಷತಾ ವ್ಯವಸ್ಥೆಗಳನ್ನು ಪರಿಶೀಲಿಸಿದರು.
ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ದಿಗ್ಗಜ ಆಟಗಾರ್ತಿ ಪೂನಂ ರಾವತ್
ಉಚಿತ ಮೆಟ್ರೋ ಸೇವೆ
ಪಂದ್ಯದ ಟಿಕೆಟ್ ಹೊಂದಿರುವ ಕ್ರಿಕೆಟ್ ಅಭಿಮಾನಿಗಳಿಗೆ ಉಚಿತ ಮೆಟ್ರೋ ಪ್ರಯಾಣದ ವ್ಯವಸ್ಥೆ ಕಲ್ಪಿಸಲಾಗಿದೆ. ಮಾತ್ರವಲ್ಲದೆ ಮೆಟ್ರೋ ನಿಲ್ದಾಣದಲ್ಲಿ ಪಾರ್ಕಿಂಗ್ ವ್ಯವಸ್ಥೆಯೂ ಇದೆ ಎಂದು ಕೆಎಸ್ಸಿಎ ತಿಳಿಸಿದೆ.
ಭಾರತದ ದಾಖಲೆ
ವೆಸ್ಟ್ ಇಂಡೀಸ್ ವಿರುದ್ಧ ನಡೆಯಲಿರುವ ಪಂದ್ಯವು, ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರತ ಆಡಲಿರುವ ಒಂಬತ್ತನೇ ಟಿ20 ಅಂತರರಾಷ್ಟ್ರೀಯ (T20I) ಪಂದ್ಯವಾಗಲಿದ್ದು, ಈ ಮೈದಾನದಲ್ಲಿ ವೆಸ್ಟ್ ಇಂಡೀಸ್ ಪಾಲ್ಗೊಳ್ಳುತ್ತಿರುವ ಮೊದಲ ಪಂದ್ಯವೂ ಇದಾಗಲಿದೆ.
ಈ ಕ್ರೀಡಾಂಗಣದಲ್ಲಿ ಭಾರತವು ಈ ಹಿಂದೆ ಎಂಟು ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದು, ಇಲ್ಲಿ ಭಾರತದ ಒಟ್ಟಾರೆ ದಾಖಲೆಯು ನಾಲ್ಕು ಗೆಲುವುಗಳು, ಮೂರು ಸೋಲುಗಳು ಮತ್ತು ಒಂದು ಫಲಿತಾಂಶವಿಲ್ಲದ ಪಂದ್ಯವನ್ನು ಒಳಗೊಂಡಿದೆ.
ಕೆಲಸದೊತ್ತಡ ನಿರ್ವಹಣೆ; ನ್ಯೂಜಿಲೆಂಡ್ ಏಕದಿನ ಸರಣಿಯಿಂದ ಬುಮ್ರಾಗೆ ಕೊಕ್
ಭಾರತವು ಆ ಎಲ್ಲಾ ಪಂದ್ಯಗಳಲ್ಲಿ ಮೊದಲು ಬ್ಯಾಟಿಂಗ್ ಮಾಡಿದೆ ಮತ್ತು ಅಂತಹ ನಾಲ್ಕು ಸಂದರ್ಭಗಳಲ್ಲೂ ಗೆಲುವು ಸಾಧಿಸಿದೆ. ಈ ಎಂಟು ಪಂದ್ಯಗಳ ಪೈಕಿ ಕೇವಲ ಎರಡು ಬಾರಿ ಮಾತ್ರ ಭಾರತವು ಟಾಸ್ ಗೆದ್ದಿದ್ದರೂ, ಈ ಮೈದಾನದಲ್ಲಿ ಎದುರಾಳಿ ತಂಡಕ್ಕೆ ಗುರಿಯನ್ನು ನಿಗದಿಪಡಿಸುವಾಗ ಭಾರತದ ಪ್ರದರ್ಶನವು ಅತ್ಯುತ್ತಮವಾಗಿದೆ.