ಲೀಡ್ಸ್, ಜೂ.16: ಮಹಿಳಾ ಟಿ20 ವಿಶ್ವಕಪ್(women t20 world cup) ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧದ ಆರಂಭಿಕ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಭಾರತ ತಂಡ ಮತ್ತೊಂದು ಪಂದ್ಯವನ್ನಾಡಲು ಸಜ್ಜಾಗಿದೆ. ಬುಧವಾರ ನಡೆಯುವ ಪಂದ್ಯದಲ್ಲಿ ನೆದರ್ಲೆಂಡ್ಸ್(IND-W vs NL-W) ಸವಾಲು ಎದುರಿಸಲಿದೆ.
ನೆದರ್ಲೆಂಡ್ಸ್ ತಂಡ ತಾನಾಡಿದ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಸೋಲು ಕಂಡಿತ್ತು. ಹೀಗಾಗಿ ತಂಡಕ್ಕೆ ಗೆಲುವು ಅತ್ಯಗತ್ಯ. ಪಾಕ್ ವಿರುದ್ಧ ಗೆದ್ದರೂ ಭಾರತ ತನ್ನ ಬ್ಯಾಟಿಂಗ್ ವಿಭಾಗದಲ್ಲಿ ಹಲವು ಸುಧಾರಣೆ ಕಾಣುವ ಅಗತ್ಯವಿದೆ. ಪಾಕ್ ವಿರುದ್ಧ ಮಂಧಾನ ಏಕಾಂಗಿ ಹೋರಾಟ ನಡೆಸದೇ ಹೋಗಿದ್ದರೆ ತಂಡ ಸೋಲು ಕಾಣುವ ಸಾಧ್ಯತೆಯೂ ಇತ್ತು.
ಆರಂಭಿಕ ಆಟಗಾರ್ತಿ ಶಫಾಲಿ ವರ್ಮ ಎಲ್ಲ ಎಸೆತಗಳಿಗೆ ದೊಡ್ಡ ಹೊಡೆತವನ್ನು ಬಾರಿಸಲು ಮುಂದಾಗಬಾರದು. ಜೆಮೀಮಾ ರಾಡ್ರಿಗಸ್ ಕೂಡ ನಿರೀಕ್ಷಿತ ಬ್ಯಾಟಿಂಗ್ ನಡೆಸಬೇಕಿದೆ. ಯುವ ಆಟಗಾರ್ತಿ ಭಾರತಿ ಫುಲ್ಮಾಲಿ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಬೇಕಿದೆ. ಪಾಕ್ ವಿರುದ್ಧ ಒಂದು ರನ್‌ಗೆ ಸೀಮಿತರಾಗಿದ್ದರು.
ಫಿಫಾ ವಿಶ್ವಕಪ್; ನ್ಯೂಜಿಲೆಂಡ್ ವಿರುದ್ಧ 2-2 ಡ್ರಾ ಸಾಧಿಸಿದ ಇರಾನ್
ಬೌಲಿಂಗ್ ವಿಭಾಗದಲ್ಲಿ ಸ್ಪಿನ್ನರ್‌ಗಳಾದ ದೀಪ್ತಿ ಶರ್ಮಾ ಮತ್ತು ಶ್ರೀ ಚರಣಿ ಉತ್ತಮ ಲಯದಲ್ಲಿದ್ದಾರೆ. ದೀಪ್ತಿ ಕಳೆದ ಪಂದ್ಯದಲ್ಲಿ 5 ವಿಕೆಟ್ ಕಿತ್ತಿದ್ದರು. ಚರಣಿ ಮೂರು ವಿಕೆಟ್ ಪಡೆದಿದ್ದರು. ಹೀಗಾಗಿ ಉಭಯ ಆಟಗಾರ್ತಿಯರ ಮೇಲೆ ಈ ಪಂದ್ಯದಲ್ಲಿಯೂ ತಂಡ ಭಾರೀ ಭರವಸೆ ಇರಿಸಿದೆ.
ಪಿಚ್ ರಿಪೋರ್ಟ್
ಹೆಡಿಂಗ್ಲಿಯ ಲೀಡ್ಸ್ ಕ್ರೀಡಾಂಗಣವು ಬ್ಯಾಟಿಂಗ್ ಸ್ನೇಹಿ ಪಿಚ್ ಆಗಿದೆ. ಅದರಲ್ಲೂ ಟಿ20 ಕ್ರಿಕೆಟ್‌ಗೆ ಹೇಳಿ ಮಾಡಿಸಿದ ಪಿಚ್ ಇದಾಗಿದೆ. ಇಲ್ಲಿ ನಡೆದ ಪಂದ್ಯಗಳು ಅತಿ ಹೆಚ್ಚು ಸ್ಕೋರ್ ಗಳಿಸಿದ ಸ್ಥಳವಾಗಿದೆ. ಇದು ಮೊದಲ ಇನ್ನಿಂಗ್ಸ್‌ನಲ್ಲಿ ಸರಾಸರಿ 188 ರನ್‌ಗಳನ್ನು ದಾಲಾಗುತ್ತದೆ. ಇಲ್ಲಿ ನಡೆದ ಏಕೈಕ ಮಹಿಳಾ ಟಿ20 ಪಂದ್ಯದಲ್ಲಿ ಇಂಗ್ಲೆಂಡ್ ತಂಡ ವೆಸ್ಟ್ ಇಂಡೀಸ್ ವಿರುದ್ಧ 176ರನ್ ಗಳಿಸಿತ್ತು. ಪಂದ್ಯ ಹಗಲು ನಡೆಯುವ ಕಾರಣ ಸ್ವಿಂಗ್ ಬಾಲರ್‌ಗಳಿಗೆ ಹೆಚ್ಚಿನ ನೆರವು ಸಿಗುವ ಸಾಧ್ಯತೆಯಿದೆ. ಯಾವುದೇ ಮಳೆ ಭೀತಿ ಇಲ್ಲದ ಕಾರಣ ಸಂಪೂರ್ಣವಾಗಿ ಪಂದ್ಯ ನಡೆಯಲಿದೆ.
ಸಂಭಾವ್ಯ ತಂಡಗಳು
ಭಾರತ: ಸ್ಮೃತಿ ಮಂಧಾನ, ಶಫಾಲಿ ವರ್ಮಾ, ಜೆಮಿಮಾ ರಾಡ್ರಿಗಸ್, ಹರ್ಮನ್‌ಪ್ರೀತ್ ಕೌರ್ (ನಾಯಕಿ), ಭಾರತಿ ಫುಲ್ಮಾಲಿ, ರಿಚಾ ಘೋಷ್ (ವಿ.ಕೀ.), ದೀಪ್ತಿ ಶರ್ಮಾ, ಅರುಂಧತಿ ರೆಡ್ಡಿ, ಶ್ರೇಯಾಂಕ ಪಾಟೀಲ್, ಶ್ರೀ ಚರಣಿ, ಕ್ರಾಂತಿ ಗೌಡ್.
ನೆದರ್ಲೆಂಡ್ಸ್: ಸ್ಟೆರ್ರೆ ಕಾಲಿಸ್, ಸನ್ಯಾ ಖುರಾನಾ, ಫೆಬೆ ಮೊಲ್ಕೆನ್‌ಬೋರ್, ಬಾಬೆಟ್ಟೆ ಡಿ ಲೀಡೆ (ನಾಯಕ), ರೋಬಿನ್ ರಿಜ್ಕೆ, ಐರಿಸ್ ಜ್ವಿಲ್ಲಿಂಗ್, ಹೀದರ್ ಸೀಗರ್ಸ್, ಫ್ರೆಡೆರಿಕ್ ಓವರ್ಡಿಜ್ಕ್, ಕ್ಯಾರೋಲಿನ್ ಡಿ ಲ್ಯಾಂಗ್, ಸಿಲ್ವರ್ ಸೀಗರ್ಸ್, ಇಸಾಬೆಲ್ ವೋನಿಂಗ್.