ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಮಹಿಳಾ ಜೂನಿಯರ್ ಏಷ್ಯಾ ಕಪ್; ಪಾಕಿಸ್ತಾನ ವಿರುದ್ಧ 19-0 ಅಂತರದಿಂದ ಗೆದ್ದು ಸೆಮಿಫೈನಲ್‌ ಪ್ರವೇಶಿಸಿದ ಭಾರತ

Women’s Hockey Asia Cup 2026: ಪಾಕಿಸ್ತಾನ ವಿರುದ್ಧದ ಪಂದ್ಯದ ಏಳನೇ ನಿಮಿಷದಲ್ಲಿ ಪೂಜಾ ಸಾಹು ಭಾರತಕ್ಕೆ ಗೋಲು ಗಳಿಸಿಕೊಟ್ಟರು. ಆ ಬಳಿಕವೂ ನಿಯಮಿತವಾಗಿ ಗೋಲುಗಳು ಬರುತ್ತಲೇ ಇದ್ದವು. ಸಾನಿಕಾ ಮಾನೆ ಎರಡು ಗೋಲು ಗಳಿಸಿದರು. ಅರ್ಧಾವಧಿಯ ವೇಳೆಗೆ ಭಾರತವು 10 ಗೋಲುಗಳನ್ನು ಗಳಿಸಿತ್ತು.

Women’s Junior Asia Cup

ನವದೆಹಲಿ, ಸೆ.10: ಗುರುವಾರ ಚೀನಾದಲ್ಲಿ ನಡೆದ 2026 ರ ಮಹಿಳಾ ಜೂನಿಯರ್ ಏಷ್ಯಾ ಕಪ್ ಕ್ವಾರ್ಟರ್ ಫೈನಲ್‌ನಲ್ಲಿ ಭಾರತ ತಂಡ ಪಾಕಿಸ್ತಾನವನ್ನು 19-0 ಅಂತರದಿಂದ ಸೋಲಿಸಿ ಸೆಮಿಫೈನಲ್‌ ಸ್ಥಾನವನ್ನು ಸುಲಭವಾಗಿ ಖಚಿತಪಡಿಸಿಕೊಂಡಿತು.

ಹಾಲಿ ಚಾಂಪಿಯನ್‌ ಭಾರತ ತಂಡ ಜಪಾನ್, ಮಲೇಷ್ಯಾ ಮತ್ತು ದಕ್ಷಿಣ ಕೊರಿಯಾ ತಂಡಗಳನ್ನು ಸೋಲಿಸಿ ತನ್ನ ಗುಂಪಿನಲ್ಲಿ ಅಗ್ರಸ್ಥಾನ ಪಡೆದಿತ್ತು. ಭಾರತದ ಮುಂದಿನ ಪಂದ್ಯ ಸೆಮಿಫೈನಲ್ ಆಗಿದ್ದು, ಅಲ್ಲಿ ಅವರು ದಕ್ಷಿಣ ಕೊರಿಯಾ ಅಥವಾ ಮಲೇಷ್ಯಾವನ್ನು ಎದುರಿಸಲಿದ್ದಾರೆ. ಎರಡೂ ತಂಡಗಳು ಇನ್ನೊಂದು ಕ್ವಾರ್ಟರ್ ಫೈನಲ್‌ನಲ್ಲಿ ಸ್ಪರ್ಧಿಸಲಿದ್ದು, ವಿಜೇತರು ಭಾರತದ ವಿರುದ್ಧ ಆಡಲಿದ್ದಾರೆ.

ಪಾಕಿಸ್ತಾನ ವಿರುದ್ಧದ ಪಂದ್ಯದ ಏಳನೇ ನಿಮಿಷದಲ್ಲಿ ಪೂಜಾ ಸಾಹು ಭಾರತಕ್ಕೆ ಗೋಲು ಗಳಿಸಿಕೊಟ್ಟರು. ಆ ಬಳಿಕವೂ ನಿಯಮಿತವಾಗಿ ಗೋಲುಗಳು ಬರುತ್ತಲೇ ಇದ್ದವು. ಸಾನಿಕಾ ಮಾನೆ ಎರಡು ಗೋಲು ಗಳಿಸಿದರು. ಅರ್ಧಾವಧಿಯ ವೇಳೆಗೆ ಭಾರತವು 10 ಗೋಲುಗಳನ್ನು ಗಳಿಸಿತ್ತು.

ಪಂದ್ಯ ಪುನರಾರಂಭವಾದಾಗ ಪೂಕಾ ಮಲಿಕ್ ಅವರ ಹ್ಯಾಟ್ರಿಕ್ ಮತ್ತು ಸುಪ್ರಿಯಾ ಮತ್ತು ಪೂರ್ಣಿಮಾ ಯಾದವ್ ಅವರ ತಲಾ ಎರಡು ಗೋಲುಗಳು ಸೇರಿದಂತೆ ಒಂಬತ್ತು ಗೋಲುಗಳು ದಾಖಲಾದವು. ಭಾರತದ ಸ್ಥಿರ ದಾಳಿಗೆ ಪಾಕಿಸ್ತಾನ ಉತ್ತರ ಕಂಡುಕೊಳ್ಳುವಲ್ಲಿ ವಿಫಲವಾಯಿತು. 2023 ಮತ್ತು 2024 ರಲ್ಲಿ ಪ್ರಶಸ್ತಿಯನ್ನು ಗೆದ್ದಿರುವ ಭಾರತ, ಹ್ಯಾಟ್ರಿಕ್ ಮಹಿಳಾ ಜೂನಿಯರ್ ಏಷ್ಯಾ ಕಪ್ ಪ್ರಶಸ್ತಿಗಳನ್ನು ಪೂರ್ಣಗೊಳಿಸಲು ಎದುರು ನೋಡುತ್ತಿದೆ.



ಭಾರತದ ಗೋಲು ಗಳಿಸಿದವರು

ಪೂಜಾ ಸಾಹೂ - 7(ನಿಮಿಷ)

ರೋಶ್ನಿ ಐಂಡ್ – 9, 60+(ನಿಮಿಷ)

ತನುಶ್ರೀ ದಿನೇಶ್ ಕಾಡು – 11' (ನಿಮಿಷ)

ಸುಖವೀರ್ ಕೌರ್ – 13 (ನಿಮಿಷ)

ಸಾನಿಕಾ ಚಂದ್ರಕಾಂತ್ ಮಾನೆ – 13, 23 (ನಿಮಿಷ)

ಮಧು ಸಿದರ್ – 16, 39 (ನಿಮಿಷ)

ಗೀತಾ ಯಾದವ್ – 18 (ನಿಮಿಷ)

ತನುಜಾ ಟೊಪ್ಪೊ – 25 (ನಿಮಿಷ)

ಪೂಜಾ ಮಲಿಕ್ - 27, 49, 51 (ನಿಮಿಷ)

ಪೂರ್ಣಿಮಾ ಯಾದವ್ – 33 (ನಿಮಿಷ)

ಸುಪ್ರಿಯಾ – 40, 54 (ನಿಮಿಷ)

ಕೃಷ್ಣ ಶರ್ಮಾ – 48 (ನಿಮಿಷ)

ಬಿನಿಮಾ ಧನ್ – 55 (ನಿಮಿಷ)