ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Gautam Gambhir: ಇಂಗ್ಲೆಂಡ್‌ ಸರಣಿಗೂ ಮುನ್ನ ಕಾಳಿ ದೇವಿಗೆ ಕೋಚ್‌ ಗಂಭೀರ್‌ ವಿಶೇಷ ಪೂಜೆ

Gautam Gambhir: ಗೌತಮ್‌ ಗಂಭೀರ್‌ ಟೀಮ್‌ ಇಂಡಿಯಾದ ಕೋಚ್‌ ಆದಾಗ ಅವರ ಮೇಲೆ ಭಾರೀ ನಿರೀಕ್ಷೆಗಳನ್ನು ಇರಿಸಲಾಗಿತ್ತು. ಆದರೆ, ಅವರು ಕೋಚ್‌ ಆದ ಬಳಿಕ ಭಾರತ ತಂಡ ಹಲವು ಸರಣಿಗಳಲ್ಲಿ ಸೋಲು ಕಂಡಿತ್ತು. ವಿದೇಶದಲ್ಲಿ ಮಾತ್ರವಲ್ಲದೆ ತವರಿನಲ್ಲಿಯೂ ಕ್ಲೀನ್‌ಸ್ವೀಪ್‌ ಮುಖಭಂಗದ ಅವಮಾನ ಎದುರಿಸಿತ್ತು.

ಕೋಲ್ಕತಾ: ಇಂಗ್ಲೆಂಡ್‌ ವಿರುದ್ಧದ 5 ಪಂದ್ಯಗಳ ಟಿ20 ಹಾಗೂ 3 ಪಂದ್ಯಗಳ ಸರಣಿ ಆರಂಭಕ್ಕೂ ಮುನ್ನವೇ ಟೀಮ್‌ ಇಂಡಿಯಾದ ಹೆಡ್‌ ಕೋಚ್‌ ಗೌತಮ್‌ ಗಂಭೀರ್‌(Gautam Gambhir) ಅವರು ಕೋಲ್ಕತ್ತಾದ ಕಾಳಿಘಾಟ್ ದೇವಸ್ಥಾನಕ್ಕೆ ಭೇಟಿ ನೀಡಿ ಕಾಳಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ದೇವಸ್ಥಾನದಲ್ಲಿ ಗಂಭೀರ್ ಪೂಜೆ ಮಾಡುತ್ತಿರುವ ವಿಡಿಯೊ ಈಗ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ಗಂಭೀರ್‌ ದೇವಸ್ಥಾನಕ್ಕೆ ಭೇಟಿ ನೀಡಿದ ಬಗ್ಗೆ ನೆಟ್ಟಿಗರು ಹಲವು ಕಮೆಂಟ್‌ಗಳನ್ನು ಮಾಡಿದ್ದಾರೆ.

ಕೆಲ ನೆಟ್ಟಿಗರು ಗಂಭೀರ್‌ ತಮ್ಮ ಕೋಚಿಂಗ್‌ ಹುದ್ದೆ ಉಳಿಯುವಂತೆ ಮಾಡಲು ಈ ಪೂಜೆ ಸಲ್ಲಿದ್ದಾರೆ ಎಂದರೆ, ಇನ್ನು ಕೆಲವರು ಇಂಗ್ಲೆಂಡ್‌ ವಿರುದ್ಧ ಭಾರತ ಸರಣಿ ಗೆಲ್ಲುವಂತಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದಾರೆ ಎಂದಿದ್ದಾರೆ. ಭಾರತ ಮತ್ತು ಇಂಗ್ಲೆಂಡ್‌ ನಡುವಣ ಮೊದಲ ಟಿ20 ಇಂದು(ಬುಧವಾರ) ಈಡನ್‌ ಗಾರ್ಡನ್ಸ್‌ನಲ್ಲಿ ನಡೆಯಲಿದೆ.

ಗೌತಮ್‌ ಗಂಭೀರ್‌ ಟೀಮ್‌ ಇಂಡಿಯಾದ ಕೋಚ್‌ ಆದಾಗ ಅವರ ಮೇಲೆ ಭಾರೀ ನಿರೀಕ್ಷೆಗಳನ್ನು ಇರಿಸಲಾಗಿತ್ತು. ಆದರೆ, ಅವರು ಕೋಚ್‌ ಆದ ಬಳಿಕ ಭಾರತ ತಂಡ ಹಲವು ಸರಣಿಗಳಲ್ಲಿ ಸೋಲು ಕಂಡಿತ್ತು. ವಿದೇಶದಲ್ಲಿ ಮಾತ್ರವಲ್ಲದೆ ತವರಿನಲ್ಲಿಯೂ ಕ್ಲೀನ್‌ಸ್ವೀಪ್‌ ಮುಖಭಂಗದ ಅವಮಾನ ಎದುರಿಸಿತ್ತು.



ಇದನ್ನೂ ಓದಿ IND vs ENG: ಇಂದು ಭಾರತ-ಇಂಗ್ಲೆಂಡ್‌ ಮೊದಲ ಟಿ20 ಕದನ; ಹವಾಮಾನ ವರದಿ ಹೇಗಿದೆ?

ಆರಂಭದಲ್ಲಿ ಶ್ರೀಲಂಕಾ ವಿರುದ್ಧದ ಏಕದಿನ ಸರಣಿ ಕಳೆದುಕೊಂಡ ಭಾರತ ಆ ಬಳಿಕ ತವರಿನಲ್ಲಿ ನ್ಯೂಜಿಲೆಂಡ್‌ ವಿರುದ್ಧದ ಟೆಸ್ಟ್‌ನಲ್ಲಿ 0-3ರಲ್ಲಿ ವೈಟ್‌ವಾಶ್‌ ಮುಖಭಂಗ, ಇದಾಗಿ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್‌-ಗವಾಸ್ಕರ್‌ ಟೆಸ್ಟ್‌ ಸರಣಿ ಸೋಲು ಮತ್ತು ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ಗೇರಲು ವಿಫಲವಾದದ್ದು. ಈ ಎಲ್ಲ ಸೋಲಿನಿಂದ ಗೌತಮ್‌ ಗಂಭೀರ್‌ರನ್ನು ಕೋಚಿಂಗ್‌ ಹುದ್ದೆಯಿಂದ ಕೆಳಗಿಸಿ ಎಂಬ ಕೂಗು ಕೂಡ ಜೋರಾಗಿದೆ. ಚಾಂಪಿಯನ್ಸ್‌ ಟ್ರೋಫಿಯಲ್ಲಿಯೂ ಭಾರತ ಸೋತರೆ ಗಂಭೀರ್‌ ಅವರನ್ನು ಕೋಚಿಂಗ್‌ ಹುದ್ದೆಯಿಂದ ಕೆಳಗಿಳಿಸುವ ಸಾಧ್ಯತೆ ಇದೆ. ಹೀಗಾಗಿ ಗಂಭೀರ್‌ ಕಾಳಿ ದೇವಿಗೆ ವಿಶೇಷ ಪೂಜೆ ಸಲ್ಲಿ ತಂಡಕ್ಕೆ ಒಳಿತಾಗಲಿ ಎಂದು ಪ್ರಾರ್ಥಿಸಿದಂತಿದೆ.