ನವದೆಹಲಿ, ಜ.1: 2026 ಟೀಮ್ ಇಂಡಿಯಾಕ್ಕೆ ಅತ್ಯಂತ ಬ್ಯುಸಿ(India cricket schedule 2026) ವರ್ಷವಾಗಿದೆ. ಪುರುಷರ ಮತ್ತು ಮಹಿಳಾ ಟಿ 20 ವಿಶ್ವಕಪ್(T20 World Cup) ಸೇರಿ ಹಲವು ಮಹತ್ವದ ಸರಣಿಗಳನ್ನು ಆಡಲಿದೆ. ವರ್ಷದ ಮೊದಲ ತಿಂಗಳೇ ಭಾರತ ಪುರುಷರ ತಂಡ ತವರಿನಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಏಕದಿನ ಮತ್ತು ಟಿ20 ಸರಣಿಯನ್ನಾಡುವ ಮೂಲಕ ಕ್ರಿಕೆಟ್ ಅಭಿಯಾನ ಆರಂಭಿಸಲಿದೆ. ಜನವರಿ 15ರಿಂದ 19 ವರ್ಷದೊಳಗಿನವರ ಐಸಿಸಿ ಏಕದಿನ ವಿಶ್ವಕಪ್ ಕೂಡ ನಡೆಯಲಿದೆ.
ಒಟ್ಟಾರೆ ಈ ವರ್ಷ ಭಾರತ ಪುರುಷರ ತಂಡ 21 ಏಕದಿನ ಪಂದ್ಯಗಳನ್ನು ಆಡಲಿದೆ. ಭಾರತ ತಂಡ ಈ ವರ್ಷ ಆಡಲಿರುವ ಸರಣಿಗಳ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ.
2026 ರ ಪ್ರಮುಖ ಕ್ರಿಕೆಟ್ ಈವೆಂಟ್‌ಗಳು
WPL(ಮಹಿಳಾ ಪ್ರೀಮಿಯರ್ ಲೀಗ್): ಜನವರಿ 9 ರಿಂದ ಫೆಬ್ರವರಿ 5 (ನವಿ ಮುಂಬೈ ಮತ್ತು ವಡೋದರಾ)
U19 ಪುರುಷರ ವಿಶ್ವಕಪ್: ಜನವರಿ 15 ರಿಂದ ಫೆಬ್ರವರಿ 6 (ಜಿಂಬಾಬ್ವೆ ಮತ್ತು ನಮೀಬಿಯಾ)
ಐಸಿಸಿ ಪುರುಷರ ಟಿ20 ವಿಶ್ವಕಪ್: ಫೆಬ್ರವರಿ 7 ರಿಂದ ಮಾರ್ಚ್ 8 (ಭಾರತ ಮತ್ತು ಶ್ರೀಲಂಕಾ)
ಐಪಿಎಲ್: ಮಾರ್ಚ್ 26 ರಿಂದ ಮೇ 31
ಐಸಿಸಿ ಮಹಿಳಾ ಟಿ20 ವಿಶ್ವಕಪ್: ಜೂನ್ 12 ರಿಂದ ಜುಲೈ 5 (ಇಂಗ್ಲೆಂಡ್)
ಭಾರತ ಪುರುಷರ ಕ್ರಿಕೆಟ್ ವೇಳಾಪಟ್ಟಿ, ದಿನಾಂಕ ಮತ್ತು ಸ್ಥಳಗಳು
ಜನವರಿ | ನ್ಯೂಜಿಲೆಂಡ್ ಭಾರತ ಪ್ರವಾಸ
ಏಕದಿನ ಪಂದ್ಯಗಳು
ಜನವರಿ 11 - ಮೊದಲ ಏಕದಿನ ಪಂದ್ಯ, ವಡೋದರಾ
ಜನವರಿ 14 - ಎರಡನೇ ಏಕದಿನ ಪಂದ್ಯ, ರಾಜ್‌ಕೋಟ್
ಜನವರಿ 18 - ಮೂರನೇ ಏಕದಿನ ಪಂದ್ಯ, ಇಂದೋರ್
ಇದನ್ನೂ ಓದಿ ಟಿ20 ವಿಶ್ವಕಪ್‌ಗೆ ಪ್ರಾಥಮಿಕ ತಂಡ ಪ್ರಕಟಿಸಿದ ಆಸ್ಟ್ರೇಲಿಯಾ; ಕಮಿನ್ಸ್, ಹ್ಯಾಜಲ್‌ವುಡ್‌ಗೆ ಸ್ಥಾನ
ಟಿ20 ಪಂದ್ಯಗಳು
ಜನವರಿ 21 - ಮೊದಲ ಟಿ20, ನಾಗ್ಪುರ
ಜನವರಿ 23 - ಎರಡನೇ ಟಿ20, ರಾಯ್‌ಪುರ
ಜನವರಿ 25 - ಮೂರನೇ ಟಿ20, ಗುವಾಹಟಿ
ಜನವರಿ 28 - 4ನೇ ಟಿ20, ವಿಶಾಖಪಟ್ಟಣ
ಜನವರಿ 31 - 5ನೇ ಟಿ20, ತಿರುವನಂತಪುರಂ
ಜೂನ್ | ಅಫ್ಘಾನಿಸ್ತಾನದ ಭಾರತ ಪ್ರವಾಸ
1 ಟೆಸ್ಟ್
3 ಏಕದಿನ ಪಂದ್ಯಗಳು
ಜುಲೈ | ಭಾರತದ ಇಂಗ್ಲೆಂಡ್ ಪ್ರವಾಸ
ಟಿ20 ಪಂದ್ಯಗಳು
ಜುಲೈ 1 - ಮೊದಲ ಟಿ20, ಚೆಸ್ಟರ್-ಲೆ-ಸ್ಟ್ರೀಟ್
ಜುಲೈ 4 - ಎರಡನೇ ಟಿ20, ಮ್ಯಾಂಚೆಸ್ಟರ್
ಜುಲೈ 7 - ಮೂರನೇ ಟಿ20, ನಾಟಿಂಗ್ಹ್ಯಾಮ್
ಜುಲೈ 9 - ನಾಲ್ಕನೇ ಟಿ20, ಬ್ರಿಸ್ಟಲ್
ಜುಲೈ 11 - 5ನೇ ಟಿ20, ಸೌತಾಂಪ್ಟನ್
ಏಕದಿನ ಪಂದ್ಯಗಳು
ಜುಲೈ 14 - ಮೊದಲ ಏಕದಿನ ಪಂದ್ಯ, ಬರ್ಮಿಂಗ್ಹ್ಯಾಮ್
ಜುಲೈ 16 - ಎರಡನೇ ಏಕದಿನ ಪಂದ್ಯ, ಕಾರ್ಡಿಫ್
ಜುಲೈ 19 - ಮೂರನೇ ಏಕದಿನ ಪಂದ್ಯ, ಲಾರ್ಡ್ಸ್
ಆಗಸ್ಟ್ | ಭಾರತದ ಶ್ರೀಲಂಕಾ ಪ್ರವಾಸ
2 ಟೆಸ್ಟ್‌ಗಳು
ಸೆಪ್ಟೆಂಬರ್ | ಭಾರತದ ಬಾಂಗ್ಲಾದೇಶ ಪ್ರವಾಸ (2025 ರಲ್ಲಿ ಮುಂದೂಡಿದ್ದು)
3 ಏಕದಿನ ಪಂದ್ಯಗಳು
3 ಟಿ20ಗಳು
ಸೆಪ್ಟೆಂಬರ್–ಅಕ್ಟೋಬರ್ | ಭಾರತದ ಅಫ್ಘಾನಿಸ್ತಾನ ಪ್ರವಾಸ
3 ಟಿ20ಗಳು
ವೆಸ್ಟ್ ಇಂಡೀಸ್ ಭಾರತ ಪ್ರವಾಸ
3 ಏಕದಿನ ಪಂದ್ಯಗಳು
5 ಟಿ20ಗಳು
ಅಕ್ಟೋಬರ್–ನವೆಂಬರ್ | ಭಾರತ ತಂಡ ನ್ಯೂಜಿಲೆಂಡ್ ಪ್ರವಾಸ
2 ಟೆಸ್ಟ್‌ಗಳು
3 ಏಕದಿನ ಪಂದ್ಯಗಳು
5 ಟಿ20ಗಳು
ಡಿಸೆಂಬರ್ | ಶ್ರೀಲಂಕಾ ತಂಡ ಭಾರತ ಪ್ರವಾಸ
3 ಏಕದಿನ ಪಂದ್ಯಗಳು
3 ಟಿ20ಗಳು