ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಜಿಂಬಾಬ್ವೆ ವಿರುದ್ಧ 2ನೇ ಟಿ20 ಗೆದ್ದು ತನ್ನದೇ ವಿಶ್ವ ದಾಖಲೆ ಸರಿಗಟ್ಟಿದ ಭಾರತ

Zimbabwe vs India 2nd T20I: ಸತತ ಏಳು ಪಂದ್ಯಗಳ ಬಳಿಕ ಗೆಲುವಿನ ಹಾದಿಗೆ ಮರಳಿರುವ ಟಿ20 ವಿಶ್ವ ಚಾಂಪಿಯನ್ ಭಾರತ ತಂಡ ಸರಣಿ ಕ್ಲೀನ್‌ಸ್ವೀಪ್‌ನ ತವಕದಲ್ಲಿದ್ದು, ಸತತ ಎರಡು ದಿನ ಎರಡು ಪಂದ್ಯಗಳನ್ನು ಆಡುವ ಸವಾಲು ಹೊಂದಿದೆ.

Ravi Bishnoi

ಹರಾರೆ ಜು.26: ಭಾರತ ತಂಡ ಎರಡನೇ ಟಿ20 ಪಂದ್ಯದಲ್ಲಿ ಆತಿಥೇಯ ಜಿಂಬಾಬ್ವೆ ಎದುರು 90 ರನ್‌ಗಳ ಭರ್ಜರಿ ಗೆಲುವು ದಾಖಲಿಸಿತು. ಇದರೊಂದಿಗೆ ಮೂರು ಪಂದ್ಯಗಳ ಸರಣಿಯಲ್ಲಿ 2-0 ಯಿಂದ ಮೇಲುಗೈ ಸಾಧಿಸಿತು. ಈ ಪಂದ್ಯದಲ್ಲಿ 200 ರನ್‌ ಬಾರಿಸಿದ ಭಾರತ ತನ್ನದೇ ಹೆಸರಿನಲ್ಲಿದ್ದ ವಿಶ್ವ ದಾಲೆಯೊಂದನ್ನು ಸರಿಗಟ್ಟಿತು.

ಹಾಲಿ ವರ್ಷದ ಟಿ20 ಪಂದ್ಯದಲ್ಲಿ 9ನೇ ಬಾರಿಗೆ 200 ಪ್ಲಸ್‌ ಮೊತ್ತವನ್ನು ಪೇರಿಸಿದ ಸಾಧನೆಗೈದಿತು. ಇದಕ್ಕೂ ಮುನ್ನ 2024ರಲ್ಲಿ 9 ಬಾರಿ 200 ಪ್ಲಸ್‌ ಮೊತ್ತವನ್ನು ಬಾರಿಸಿತ್ತು. ಇಂದು ನಡೆಯುವ ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ ಮತ್ತೊಮ್ಮೆ 200 ಮೊತ್ತ ಬಾರಿಸಿದರೆ ತನ್ನದೇ ದಾಖಲೆ ಉತ್ತಮಪಡಿಸಿಕೊಳ್ಳಲುವ ಅವಕಾಶವಿದೆ.

ಸತತ ಏಳು ಪಂದ್ಯಗಳ ಬಳಿಕ ಗೆಲುವಿನ ಹಾದಿಗೆ ಮರಳಿರುವ ಟಿ20 ವಿಶ್ವ ಚಾಂಪಿಯನ್ ಭಾರತ ತಂಡ ಸರಣಿ ಕ್ಲೀನ್‌ಸ್ವೀಪ್‌ನ ತವಕದಲ್ಲಿದ್ದು, ಸತತ ಎರಡು ದಿನ ಎರಡು ಪಂದ್ಯಗಳನ್ನು ಆಡುವ ಸವಾಲು ಹೊಂದಿದೆ. ಜಿಂಬಾಬ್ವೆ ತಂಡದ ವಿರುದ್ಧದ ಗೆಲುವು ಸಾಧನೆ ಎನಿಸದಿದ್ದರೂ, ಯುಕೆ ಪ್ರವಾಸದ ಸತತ ಎರಡು ಸರಣಿ ಸೋತಿರುವ ನಾಯಕ ಶ್ರೇಯಸ್ ಪಾಲಿಗೆ ಮಹತ್ವದಾಗಿದೆ.

ಟಿ20ಐಗಳಲ್ಲಿ ಅತಿ ಹೆಚ್ಚು 200+ ಮೊತ್ತಗಳು

ಭಾರತ- 09 (2026)

ಭಾರತ-09 (2024)

ಭಾರತ-07 (2023)

ಜಪಾನ್-07 (2024)

ಆಸ್ಟ್ರಿಯಾ-07 (2025)

ಜಿಂಬಾಬ್ವೆಯನ್ನು 90 ರನ್‌ಗಳಿಂದ ಸೋಲಿಸಿದ ಭಾರತ, ಬ್ಯಾಟಿಂಗ್‌ನಲ್ಲಿ ಪ್ರಾಬಲ್ಯ ಸಾಧಿಸಿದ ನಂತರ, ಬೌಲರ್‌ಗಳು ಮತ್ತೊಮ್ಮೆ ಅದ್ಭುತ ಪ್ರದರ್ಶನ ನೀಡಿದರು, ಪ್ರಿನ್ಸ್ ಯಾದವ್ ಮತ್ತು ಚೊಚ್ಚಲ ಆಟಗಾರ ಯಶ್ ಠಾಕೂರ್ ಪ್ರವಾಸಿ ತಂಡಕ್ಕೆ ಪರಿಪೂರ್ಣ ಆರಂಭ ನೀಡಿದರು. ಜಿಂಬಾಬ್ವೆ ಪವರ್‌ಪ್ಲೇನಲ್ಲಿ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿತು.

'ಕಳಪೆ ಬ್ಯಾಟಿಂಗ್‌ನಿಂದ ತಂಡವನ್ನು ನಿರಾಸೆಗೊಳಿಸುತ್ತಿದ್ದೇನೆ'; ಸರಣಿ ಸೋಲಿನ ಹೊಣೆ ಹೊತ್ತ ಸಿಕಂದರ್ ರಜಾ

ಪ್ರಿನ್ಸ್ ಮಂಡಿರಜ್ಜು ಗಾಯದ ನಂತರ ಮೈದಾನವನ್ನು ತೊರೆಯಬೇಕಾಯಿತು. ಇದರ ಪರಿಣಾಮವಾಗಿ ನಾಯಕ ಶ್ರೇಯಸ್ ಅವರು ತಿಲಕ್ ಮತ್ತು ಅಭಿಷೇಕ್ ಅವರಂತಹ ಅರೆಕಾಲಿಕ ಆಯ್ಕೆಗಳನ್ನು ಪ್ರಯತ್ನಿಸಬೇಕಾಯಿತು. ಕುತೂಹಲಕಾರಿಯಾಗಿ, ಇಬ್ಬರೂ ಶ್ಲಾಘನೀಯ ಪ್ರದರ್ಶನ ತೋರಿದರು. ತಿಲಕ್ ಒಂದು ವಿಕೆಟ್ ಪಡೆದರೆ, ಅಭಿಷೇಕ್ ಮೂರು ವಿಕೆಟ್ ಗೊಂಚಲು ಪಡೆದು ಭಾರತದ ಗೆಲುವನ್ನು ಖಚಿತಪಡಿಸಿದರು. ಐರ್ಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧ ಸತತ ಸೋಲುಗಳ ನಂತರ ಭಾರತ ನಾಯಕನಾಗಿ ಶ್ರೇಯಸ್ ಅವರ ಮೊದಲ ಸರಣಿ ಗೆಲುವು ಇದಾಗಿದೆ.