ನವದೆಹಲಿ: ಸರಣಿ ಕ್ಲೀನ್‌ಸ್ವೀಪ್ ಗುರಿ ಹೊಂದಿರುವ ಭಾರತ ತಂಡ ವೆಸ್ಟ್ ಇಂಡೀಸ್(IND vs WI 2nd Test) ವಿರುದ್ಧದ ದ್ವಿತೀಯ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ನಾಯಕ ಶುಭಮನ್ ಗಿಲ್(Shubman Gill) ಬ್ಯಾಟಿಂಗ್ ಆಯ್ದುಕೊಂಡರು. ಇದು ನಾಯಕನಾಗಿ ಗಿಲ್ ಗೆದ್ದ ಮೊದಲ ಟಾಸ್ ಆಗಿದೆ. ಭಾರತ ತಂಡವು ಯಾವುದೇ ಬದಲಾವಣೆ ಇಲ್ಲದೇ ಕಣಕ್ಕಿಳಿಯಿತು. ವಿಂಡೀಸ್ ತನ್ನ ಆಡುವ ಬಳಗದಲ್ಲಿ ಎರಡು ಬದಲಾವಣೆ ಮಾಡಿತು.
ಇಂಗ್ಲೆಂಡ್ ಪ್ರವಾಸದಲ್ಲಿ ಅವರು ಎರಡು ಶತಕ ಮತ್ತು ಎರಡು ಅರ್ಧಶತಕ ದಾಖಲಿಸಿದ್ದ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಅವರು ತಮ್ಮ ಲಯಕ್ಕೆ ಮರಳಬೇಕಿದೆ. ಅಹಮದಾಬಾದ್ ಟೆಸ್ಟ್‌ನಲ್ಲಿಯೂ 36 ರನ್ ಮಾತ್ರ ಗಳಿಸಿದ್ದರು. ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಏಕದಿನ ಕ್ರಿಕೆಟ್ ಸರಣಿಯಲ್ಲಿ ಆಡುವ ತಂಡದಲ್ಲಿಯೂ ಸ್ಥಾನ ಪಡೆದಿರುವ ಯಶಸ್ವಿ ಲಯಕ್ಕೆ ಮರಳಬೇಕಿದೆ.
ಭಾರತದ ನೆಲದಲ್ಲಿ ವಿಂಡೀಸ್ 1994ರಲ್ಲಿ ಕೊನೆಯದಾಗಿ ಗೆದ್ದಿದ್ದು. ಅಲ್ಲಿಂದ ಇಲ್ಲಿಯವರೆಗೂ ಭಾರತದ ನೆಲದಲ್ಲಿ ಕೆರಿಬಿಯನ್ ಪಡೆ ಜಯದ ಮುಖವನ್ನೇ ನೋಡಿಲ್ಲ. 2002ರಲ್ಲಿ ಜಮೈಕಾದ ಸಬೀನಾ ಪಾರ್ಕ್‌ನಲ್ಲಿ ವಿಂಡೀಸ್ ಟೆಸ್ಟ್ ಜಯಿಸಿತ್ತು. ಅದರ ನಂತರ 26 ಟೆಸ್ಟ್‌ಗಳಲ್ಲಿ ಭಾರತ 16 ಜಯಿಸಿದೆ. ಉಳಿದವು ಡ್ರಾ ಆಗಿವೆ.
ಇದನ್ನೂ ಓದಿ IND vs SA: ಟಾಪ್ ಆರ್ಡರ್ ಜವಾಬ್ದಾರಿಯುತವಾಗಿ ಆಡಬೇಕು; ದಕ್ಷಿಣ ಆಫ್ರಿಕಾ ಸೋಲಿನ ಬಳಿಕ ನಾಯಕಿ ಕೌರ್ ಎಚ್ಚರಿಕೆ
ಉಭಯ ಆಡುವ ಬಳಗ
ಭಾರತ: ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ಸಾಯಿ ಸುದರ್ಶನ್, ಶುಭಮನ್ ಗಿಲ್ (ನಾಯಕ), ಧ್ರುವ ಜುರೆಲ್ (ವಿ.ಕೀ.), ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ನಿತೀಶ್ ಕುಮಾರ್ ರೆಡ್ಡಿ, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.
ವೆಸ್ಟ್ ಇಂಡೀಸ್: ಜಾನ್ ಕ್ಯಾಂಪ್‌ಬೆಲ್, ಟಗೆನರೈನ್ ಚಂದ್ರಪಾಲ್, ಅಲಿಕ್ ಅಥನಾಜೆ, ಶೈ ಹೋಪ್, ರೋಸ್ಟನ್ ಚೇಸ್ (ನಾಯಕ), ಟೆವಿನ್ ಇಮ್ಲಾಚ್ (ವಿಕೆಟ್ ಕೀಪರ್), ಜಸ್ಟಿನ್ ಗ್ರೀವ್ಸ್, ಜೋಮೆಲ್ ವಾರಿಕನ್, ಖಾರಿ ಪಿಯರೆ, ಆಂಡರ್ಸನ್ ಫಿಲಿಪ್, ಜೇಡನ್ ಸೀಲ್ಸ್.