ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

India Squad Announcement: ವಿಂಡೀಸ್‌ ಟೆಸ್ಟ್‌ ಸರಣಿಗೆ ಇಂದು ಮಧ್ಯಾಹ್ನ ಭಾರತ ತಂಡ ಪ್ರಕಟ

India Squad For West Indies Tests: 8 ವರ್ಷದ ಬಳಿಕ ಮತ್ತೆ ತಂಡದಲ್ಲಿ ಅವಕಾಶ ಪಡೆದಿದ್ದ ಕರುಣ್‌, ಇಂಗ್ಲೆಂಡ್ ಪ್ರವಾಸದಲ್ಲಿ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದರು. ಹೀಗಾಗಿ ವಿಂಡೀಸ್ ಎದುರಿನ ಟೆಸ್ಟ್ ಸರಣಿಯಲ್ಲಿ ಅವರಿಗೆ ಸ್ಥಾನ ಸಿಗಲಿದೆಯಾ ಎಂದು ಕಾದು ನೋಡಬೇಕಿದೆ. ಭಾರತವು ಕರುಣ್‌ಗಿಂತ ಮುಂದೆ ಯೋಚಿಸಲು ಸಿದ್ಧವಾದರೆ, ಹಲವು ಆಯ್ಕೆಗಳಿವೆ.

ಮುಂಬಯಿ: ವೆಸ್ಟ್‌ ಇಂಡೀಸ್‌ ವಿರುದ್ಧದ ತವರಿನ ಟೆಸ್ಟ್‌ ಸರಣಿಗೆ ಭಾರತ ತಂಡ(India Squad For West Indies Tests) ಬುಧವಾರ ಪ್ರಕಟಗೊಳ್ಳಬೇಕಿತ್ತು. ಆದರೆ ಕಾರಣಾಂತರಗಳಿಂದ ಒಂದು ದಿನ ಮುಂದೂಡಲಾಗಿತ್ತು. ಇಂದು(ಗುರುವಾರ) ಮಧ್ಯಾಹ್ನ 12.30ಕ್ಕೆ ತಂಡವನ್ನು(India Squad Announcement) ಅಧಿಕೃತವಾಗಿ ಪ್ರಕಟಿಸಲಾಗುವುದು ಎಂದು ಬಿಸಿಸಿಐ(bcci) ಮೂಲಗಳು ತಿಳಿಸಿದೆ. 15 ಆಟಗಾರರ ತಂಡ ಪ್ರಕಟಗೊಳ್ಳಲಿದೆ. ಹೀಗಾಗಿ ಆಯ್ಕೆಸಮಿತಿ ಅಳೆದು ತೂಗಿ ಕೆಲ ಹೆಸರುಗಳನ್ನು ಕೈಬಿಡುವುದು ಅನಿವಾರ್ಯವಾಗಿದೆ. ತಂಡ ಆಯ್ಕೆಯ ನಂತರ ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್‌ ಅಗರ್ಕರ್‌(Ajit Agarkar) ದುಬೈನಲ್ಲಿ ಸುದಿಗೋಷ್ಠಿಗೆ ಹಾಜರಾಗಲಿದ್ದಾರೆ ಎನ್ನಲಾಗಿದೆ.

ಆಯ್ಕೆಗೆ ಲಭ್ಯ ಎಂದ ಬುಮ್ರಾ

ಭಾರತದ ವೇಗಿ ಜಸ್‌ಪ್ರೀತ್‌ ಬುಮ್ರಾ ಅವರು ವಿಂಡೀಸ್‌ ವಿರುದ್ಧದ ಸರಣಿಗೆ ಸಂಪೂರ್ಣವಾಗಿ ಲಭ್ಯವಿರುವುದಾಗಿ ಬಿಸಿಸಿಐಗೆ ತಿಳಿಸಿದ್ದಾರೆ. ಪ್ರಸ್ತುತ ಯುಎಇಯಲ್ಲಿ ಭಾರತದ ಏಷ್ಯಾ ಕಪ್ ತಂಡದ ಭಾಗವಾಗಿರುವ ಬುಮ್ರಾ ಅವರಿಗೆ ಕಾರ್ಯದೊತ್ತಡ ಕಡಿಮೆ ಮಾಡುವ ನಿಟ್ಟಿನಲ್ಲಿ ವಿಂಡೀಸ್‌ ಸರಣಿಗೆ ವಿಶ್ರಾಂತಿ ನೀಡಲು ಆಯ್ಕೆ ಸಮಿತಿ ಚಿಂತಿಸಿತ್ತು. ಆದರೆ ಬುಮ್ರಾ ಸರಣಿ ಆಡುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ.

ವಿಶ್ರಾಂತಿ ಕೇಳಿದ ಅಯ್ಯರ್‌

ಇಂಗ್ಲೆಂಡ್‌ ವಿರುದ್ಧದ ಮತ್ತು ಏಷ್ಯಾಕಪ್‌ ಟೂರ್ನಿಯಲ್ಲಿ ಅವಕಾಶ ಸಿಗದಿದ್ದ ಶ್ರೇಯಸ್‌ ಅಯ್ಯರ್‌ ಅವರಿಗೆ ವಿಂಡೀಸ್‌ ಸರಣಿಯಲ್ಲಿ ಸ್ಥಾನ ಸಿಗುವುದು ಖಚಿತವಾಗಿತ್ತು. ಆದರೆ ಬೆನ್ನು ನೋವಿನ ಸಮಸ್ಯೆಯಿಂದಾಗಿ ಅವರು ರೆಡ್‌ಬಾಲ್‌ ಕ್ರಿಕೆಟ್‌ನಿಂ ವಿರಾದ ಪಡೆದುಕೊಂಡಿದ್ದು, ವಿಂಡೀಸ್‌ ಸರಣಿಗೆ ತನ್ನನ್ನು ಪರಿಗಣಿಸದಂತೆ ಆಯ್ಕೆಗಾರರನ್ನು ಕೇಳಿಕೊಂಡಿದ್ದಾರೆ ಎನ್ನಲಾಗಿದೆ. ಆಸ್ಟ್ರೇಲಿಯಾ ಎ ವಿರುದ್ಧದ 2ನೇ ಚತುರ್ದಿನ ಪಂದ್ಯದಿಂದ ಕೊನೆ ಕ್ಷಣದಲ್ಲಿ ಅಯ್ಯರ್‌ ಬೆನ್ನು ನೋವಿನ ಕಾರಣದಿಂದ ಹಿಂದೆ ಸರಿದಿದ್ದರು.

ಕರುಣ್‌ಗೆ ಸಿಗುತ್ತಾ ಮತ್ತೊಂದು ಅವಕಾಶ

8 ವರ್ಷದ ಬಳಿಕ ಮತ್ತೆ ತಂಡದಲ್ಲಿ ಅವಕಾಶ ಪಡೆದಿದ್ದ ಕರುಣ್‌, ಇಂಗ್ಲೆಂಡ್ ಪ್ರವಾಸದಲ್ಲಿ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದರು. ಹೀಗಾಗಿ ವಿಂಡೀಸ್ ಎದುರಿನ ಟೆಸ್ಟ್ ಸರಣಿಯಲ್ಲಿ ಅವರಿಗೆ ಸ್ಥಾನ ಸಿಗಲಿದೆಯಾ ಎಂದು ಕಾದು ನೋಡಬೇಕಿದೆ. ಭಾರತವು ಕರುಣ್‌ಗಿಂತ ಮುಂದೆ ಯೋಚಿಸಲು ಸಿದ್ಧವಾದರೆ, ಹಲವು ಆಯ್ಕೆಗಳಿವೆ. ದೇವದತ್ ಪಡಿಕ್ಕಲ್, ಸರ್ಫರಾಜ್‌ ಖಾನ್‌ ಮತ್ತು ಎನ್. ಜಗದೀಶನ್ ಮುಂಚೂಣಿಯಲ್ಲಿದ್ದಾರೆ.

ಇದನ್ನೂ ಓದಿ Asia Cup 2025: 2007ರ ಘಟನೆ ನೆನೆದ ಪಾಕಿಸ್ತಾನವನ್ನು ಟೀಕಿಸಿದ ಇರ್ಫಾನ್‌ ಪಠಾಣ್!