ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಟೆಸ್ಟ್‌ನಲ್ಲಿ ದಾಖಲೆಯ ಗೆಲುವು ಸಾಧಿಸಿದ ಟೀಮ್‌ ಇಂಡಿಯಾ

IND vs AFG: ಮೊದಲ ಇನ್ನಿಂಗ್ಸ್‌ನಲ್ಲಿ ಪದಾರ್ಪಣ ಪಂದ್ಯ ಆಡಿದ ಮಾನವ್‌ ಸುತಾರ್‌ ಆರು ವಿಕೆಟ್‌ಗಳನ್ನು ಕಬಳಿಸಿದರು. ವಾಷಿಂಗ್ಟನ್ ಸುಂದರ್ ಮತ್ತು ಕುಲದೀಪ್ ಯಾದವ್ ಎರಡನೇ ಇನ್ನಿಂಗ್ಸ್‌ನಲ್ಲಿ ಒಟ್ಟು ಏಳು ವಿಕೆಟ್‌ಗಳನ್ನು ಕಬಳಿಸಿ ಭಾರತಕ್ಕೆ ಭರ್ಜರಿ ಗೆಲುವು ತಂದುಕೊಟ್ಟರು.

Team India

ಮುಲ್ಲನ್‌ಪುರ, ಜೂ.8: ಸೋಮವಾರ ನ್ಯೂ ಚಂಡೀಗಢದ ಮುಲ್ಲನ್‌ಪುರದ ಮಹಾರಾಜ ಯಾದವೀಂದ್ರ ಸಿಂಗ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಮುಕ್ತಾಯ ಕಂಡ ಏಕೈಕ ಟೆಸ್ಟ್(IND vs AFG) ಪಂದ್ಯದಲ್ಲಿ ಅಫ್ಘಾನಿಸ್ತಾನವನ್ನು ಇನ್ನಿಂಗ್ಸ್ ಮತ್ತು 300 ರನ್‌ಗಳಿಂದ ಸೋಲಿಸುವ ಮೂಲಕ ಭಾರತ ಸುಲಭ ಜಯ ಸಾಧಿಸಿತು. ಈ ಗೆಲುವಿನೊಂದಿಗೆ ದಾಲೆಯನ್ನು ಕೂಡ ನಿರ್ಮಿಸಿತು.

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ ಭಾರತ 564/8 ರನ್ ಗಳಿಸಿ ಡಿಕ್ಲೇರ್‌ ಘೋಷಿಸಿತು. ನಂತರ ಒಂದೇ ದಿನದ ಅಂತರದಲ್ಲಿ ಆಫ್ಘಾನ್‌ ತಂಡವನ್ನು ಎರಡು ಬಾರಿ ಆಲೌಟ್ ಮಾಡಿ ಮೂರನೇ ದಿನವೇ ಪಂದ್ಯವನ್ನು ಮುಗಿಸಿತು. ಅಫ್ಘಾನಿಸ್ತಾನ ಮೊದಲ ಇನ್ನಿಂಗ್ಸ್‌ನಲ್ಲಿ 152 ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ 112 ರನ್‌ಗಳಿಸಿ ಭಾರಿ ಅಂತರದಿಂದ ಸೋತಿತು.

ಮುಲ್ಲನ್‌ಪುರ ಟೆಸ್ಟ್‌: ಇನಿಂಗ್ಸ್‌ ಹಾಗೂ 300 ರನ್‌ ಅಂತರದ ಗೆಲುವು ಸಾಧಿಸಿದ ಭಾರತ

ಮೊದಲ ಇನ್ನಿಂಗ್ಸ್‌ನಲ್ಲಿ ಪದಾರ್ಪಣ ಪಂದ್ಯ ಆಡಿದ ಮಾನವ್‌ ಸುತಾರ್‌ ಆರು ವಿಕೆಟ್‌ಗಳನ್ನು ಕಬಳಿಸಿದರು. ವಾಷಿಂಗ್ಟನ್ ಸುಂದರ್ ಮತ್ತು ಕುಲದೀಪ್ ಯಾದವ್ ಎರಡನೇ ಇನ್ನಿಂಗ್ಸ್‌ನಲ್ಲಿ ಒಟ್ಟು ಏಳು ವಿಕೆಟ್‌ಗಳನ್ನು ಕಬಳಿಸಿ ಭಾರತಕ್ಕೆ ಭರ್ಜರಿ ಗೆಲುವು ತಂದುಕೊಟ್ಟರು.

ಇನ್ನಿಂಗ್ಸ್ ಮತ್ತು 300 ರನ್‌ಗಳ ಗೆಲುವು ಭಾರತದ ಟೆಸ್ಟ್ ಕ್ರಿಕೆಟ್‌ನ ಅತಿದೊಡ್ಡ ಗೆಲುವಾಗಿದೆ. ಇದಕ್ಕೂ ಮುನ್ನ 2018ರಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧ ಇನಿಂಗ್ಸ್‌ ಮತ್ತು 272 ರನ್‌ ಗೆಲುವು ಸಾಧಿಸಿತ್ತು.



ಭಾರತಕ್ಕೆ ಅತಿ ದೊಡ್ಡ ಟೆಸ್ಟ್ ಗೆಲುವುಗಳು

ಮುಲ್ಲನ್‌ಪುರ, 2026* ರಲ್ಲಿ ಆಪ್ಘಾನ್‌ ವಿರುದ್ಧ ಇನ್ನಿಂಗ್ಸ್ & 300 ರನ್‌ಗಳು

ರಾಜ್‌ಕೋಟ್, 2018 ರಲ್ಲಿ ವಿಂಡೀಸ್‌ ವಿರುದ್ಧ ಇನ್ನಿಂಗ್ಸ್ & 272 ರನ್‌ಗಳು

ಬೆಂಗಳೂರು, 2018 ರಲ್ಲಿ ಆಫ್ಘಾನ್‌ ವಿರುದ್ಧ ಇನ್ನಿಂಗ್ಸ್ & 262 ರನ್‌ಗಳು

ಮಿರ್ಪುರ, 2007ರಲ್ಲಿ ಬಾಂಗ್ಲಾ ವಿರುದ್ಧ ಇನ್ನಿಂಗ್ಸ್ & 239 ರನ್‌ಗಳು

ನಾಗ್ಪುರ, 2017 ರಲ್ಲಿ ಶ್ರೀಲಂಕಾ ವಿರುದ್ಧ ಇನ್ನಿಂಗ್ಸ್ & 239 ರನ್‌ಗಳು

ಮುಂಬೈ ಇಂಡಿಯನ್ಸ್‌ ತೊರೆಯಲು ಮುಂದಾದ ಸೂರ್ಯಕುಮಾರ್‌ ಯಾದವ್‌!

ಸೋಮವಾರ ಮೂರನೇ ದಿನದಾಟ ಆರಂಭಿಸಿದ ಆಫ್ಘಾನ್‌ಗೆ ಸ್ಪಿನ್ನರ್‌ ಮಾನವ್‌ ಸುತಾರ್‌ ಇನ್ನಿಲ್ಲದಂತೆ ಕಾಡಿದರು. ಅಂತಿಮವಾಗಿ ತಂಡ 152 ರನ್‌ಗೆ ಆಲೌಟ್‌ ಆಯಿತು. 412ರನ್‌ ಮುನ್ನಡೆ ಪಡೆದ ಭಾರತ ಫಾಲೋ ಆನ್ ಹೇರಿತು. ದ್ವಿತೀಯ ಇನಿಂಗ್ಸ್‌ನಲ್ಲಿಆಫ್ಘಾನ್‌ ಬ್ಯಾಟಿಂಗ್‌ ಇನ್ನಷ್ಟು ಕಳಪೆ ಮಟ್ಟದಿಂದ ಕೂಡಿತ್ತು. 112 ರನ್‌ಗೆ ಆಲೌಟ್‌ ಆಯಿತು. ದ್ವಿತೀಯ ಇನಿಂಗ್ಸ್‌ ವೇಳೆ ಸಣ್ಣ ಬ್ಯಾಟಿಂಗ್‌ ಹೋರಾಟ ನಡೆಸಿದ ಆರಂಭಕಾರ ಸೇದಿಕುಲ್ಲಾ ಅಟಲ್ 42 ರನ್‌ ಬಾರಿಸಿದರು. ಇವರನ್ನು ಹೊರತುಪಡಿಸಿ ರಹಮಾನುಲ್ಲಾ ಗುರ್ಬಾಜ್ 24 ರನ್‌ ಗಳಿಸಿದರು.