ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಮಾನವ್ ಸ್ಪಿನ್ ಜಾದೂ; ಆಫ್ಘಾನ್‌ಗೆ ಫಾಲೋ-ಆನ್‌ ಹೇರಿದ ಭಾರತ

5 ವಿಕೆಟ್‌ ನಷ್ಟದಲ್ಲಿ 113 ರನ್‌ ಗಳಿಸಿದ್ದಲ್ಲಿಂದ ಸೋಮವಾರ ಆಟ ಮುಂದುವರಿಸಿದ ಆಫ್ಘಾನ್‌ಗೆ ಸ್ಪಿನ್ನರ್‌ ಮಾನವ್‌ ಸುತಾರ್‌ ಇನ್ನಿಲ್ಲದಂತೆ ಕಾಡಿದರು. ಭಾನುವಾರ ಮೂರು ವಿಕೆಟ್‌ ಕಿತ್ತಿದ್ದ ಅವರು 3ನೇ ದಿನದಾಟದಲ್ಲಿಯೂ ಮತ್ತೆ 3 ವಿಕೆಟ್‌ ಕಿತ್ತರು. 43 ರನ್‌ ಗಳಿಸಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದ ರಹ್ಮತ್‌ ಶಾ ಅರ್ಧಶತಕ ಪೂರ್ತಿಗೊಳಿಸಿದರು. 135 ಎಸೆತ ಎದುರಿಸಿದ ಅವರು 60 ರನ್‌ ಬಾರಿಸಿದರು. ತಂಡದ ಪರ ಅವರದ್ದೇ ಅತ್ಯಧಿಕ ಗಳಿಕೆ.

Manav Suthar

ಮುಲ್ಲನ್‌ಪುರ, ಜೂ.8: ನಿರೀಕ್ಷೆಯಂತೆ ಭಾರತ ವಿರುದ್ಧದ ಏಕೈಕ ಟೆಸ್ಟ್‌ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡ ಫಾಲೋ ಆನ್ ಸಂಕಷ್ಟಕ್ಕೆ ಸಿಲುಕಿತು. ಮೂರನೇ ದಿನದಾಟದಲ್ಲಿ 152 ರನ್‌ಗೆ ಆಲೌಟ್‌ ಆದ ಆಫ್ಘಾನ್‌ ತಂಡದ ಮೇಲೆ ಭಾರತ ಫಾಲೋ ಆನ್ ಹೇರಿತು. ಪದಾರ್ಪಣ ಪಂದ್ಯವಾಡಿದ ಮಾನವ್ ಸುತಾರ್ 6 ವಿಕೆಟ್‌ ಕಿತ್ತು ಚೊಚ್ಚಲ ಪಂದ್ಯವನ್ನು ಅವಿಸ್ಮರಣೀಯವಾಗಿಸಿಕೊಂಡರು.

5 ವಿಕೆಟ್‌ ನಷ್ಟದಲ್ಲಿ 113 ರನ್‌ ಗಳಿಸಿದ್ದಲ್ಲಿಂದ ಸೋಮವಾರ ಆಟ ಮುಂದುವರಿಸಿದ ಆಫ್ಘಾನ್‌ಗೆ ಸ್ಪಿನ್ನರ್‌ ಮಾನವ್‌ ಸುತಾರ್‌ ಇನ್ನಿಲ್ಲದಂತೆ ಕಾಡಿದರು. ಭಾನುವಾರ ಮೂರು ವಿಕೆಟ್‌ ಕಿತ್ತಿದ್ದ ಅವರು 3ನೇ ದಿನದಾಟದಲ್ಲಿಯೂ ಮತ್ತೆ 3 ವಿಕೆಟ್‌ ಕಿತ್ತರು. 43 ರನ್‌ ಗಳಿಸಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದ ರಹ್ಮತ್‌ ಶಾ ಅರ್ಧಶತಕ ಪೂರ್ತಿಗೊಳಿಸಿದರು. 135 ಎಸೆತ ಎದುರಿಸಿದ ಅವರು 60 ರನ್‌ ಬಾರಿಸಿದರು. ತಂಡದ ಪರ ಅವರದ್ದೇ ಅತ್ಯಧಿಕ ಗಳಿಕೆ.

ಬಾಂಗ್ಲಾ ಸರಣಿಗೆ ಆಸ್ಟ್ರೇಲಿಯಾ ತಂಡ ಪ್ರಕಟ; ಹೆಡ್‌, ಮಾರ್ಷ್‌ಗೆ ವಿಶ್ರಾಂತಿ

ಕುಲದೀಪ್ ತಮ್ಮ ನೈಜ ಸಾಮರ್ಥ್ಯ ತೋರುವಲ್ಲಿ ಯಶಸ್ವಿಯಾಗಲಿಲ್ಲ. ಪಿಚ್ ಸತ್ವ ಅರಿತು ಬುದ್ಧಿವಂತಿಕೆಯಿಂದ ಎಸೆತಗಳನ್ನು ಹಾಕಿದರು. 23 ವರ್ಷ ವಯಸ್ಸಿನ ಮಾನವ್ ಎಸೆತಗಳಲ್ಲಿ ವೈವಿಧ್ಯತೆ, ತಿರುವು ಮತ್ತು ಚುರುಕಾದ ಚಲನೆ ಇದ್ದವು. ಕನ್ನಡಿಗ ವೇಗಿ ಪ್ರಸಿದ್ಧಕೃಷ್ಣ (37ಕ್ಕೆ3) ಅವರು ಉತ್ತಮ ಬೌಲಿಂಗ್ ಮಾಡಿದರು. ವೇಗದ ಜೊತೆಗೆ ನಿಖರವಾದ ಲೈನ್ ಮತ್ತು ಲೆಂಗ್ತ್‌ ನಿರ್ವಹಿಸಿ ಮೂರು ಎರಡು ವಿಕೆಟ್‌ ಪಡೆದರು.

ಮಾನವ್‌ ಸುತಾರ್‌ 6 ವಿಕೆಟ್‌ ಕೀಳುವ ಮೂಲಕ ಭಾರತದ ಪರ ಚೊಚ್ಚಲ ಟೆಸ್ಟ್ ಇನ್ನಿಂಗ್ಸ್‌ನಲ್ಲಿ ಅತ್ಯುತ್ತಮ ಬೌಲಿಂಗ್‌ ಪ್ರದರ್ಶನ ತೋರಿದ ಎರಡನೇ ಭಾರತೀಯ ಆಟಗಾರ ಎನಿಸಿದರು. 1988ರಲ್ಲಿ ಚೆನ್ನೈನಲ್ಲಿ ನಡೆದಿದ್ದ ವೆಸ್ಟ್‌ ಇಂಡೀಸ್‌ ವಿರುದ್ಧ ನರೇಂದ್ರ ಹಿರ್ವಾನಿ 8/61 ವಿಕೆಟ್‌ ಕಿತ್ತದ್ದು ದಾಖಲೆ. ಸುತಾರ್ ಅವರು ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಐದು ವಿಕೆಟ್ ಪಡೆದ 10ನೇ ಭಾರತೀಯ ಬೌಲರ್ ಮತ್ತು ಏಳನೇ ಸ್ಪಿನ್ನರ್ ಎನಿಸಿಕೊಂಡರು.

ಭಾನುವಾರದ ಆಟದಲ್ಲಿ ತಂಡದ ಮೊತ್ತ 416 ರನ್‌ ಆಗಿದ್ದಾಗ ಗಿಲ್(126 ರನ್‌) ಔಟಾದರು. ಶತಕದತ್ತ ಮುನ್ನುಗ್ಗುತ್ತಿದ್ದ ರಿಷಭ್‌ ಪಂತ್‌ 81 ರನ್‌ ಗಳಿಸಿ ನಿರ್ಗಮಿಸಿದರು. ಆ ಬಳಿಕ ತಂಡಕ್ಕೆ ನೆರವಾಗಿದ್ದು ವಾಷಿಂಗ್ಟನ್‌ ಸುಂದರ್‌. ಅವರು 52 ರನ್ ಗಳಿಸಿ ಔಟಾಗದೆ ಉಳಿದರು. ಧ್ರುವ್‌ ಜುರೆಲ್‌ 19, ಮಾನವ್‌ ಸುತಾರ್‌ 28, ಮೊಹಮ್ಮದ್‌ ಸಿರಾಜ್‌ 22 ರನ್‌ ಕೊಡುಗೆ ನೀಡಿದರು. ಮೊಹಮ್ಮದ್‌ ಸಲೀಂ 6 ವಿಕೆಟ್‌ ಪಡೆದರು.