ನವದೆಹಲಿ, ಫೆ.12: ಭಾರತ ತಂಡವು ಗುರುವಾರದ ಟಿ20 ವಿಶ್ವಕಪ್(T20 World Cup) ಪಂದ್ಯದಲ್ಲಿ ನಮಿಬಿಯಾ(IND vs NAM Live Streaming) ವಿರುದ್ಧ ಆಡಲಿದೆ. ಎದರಾಳಿ ಅಷ್ಟಾಗಿ ಬಲಿಷ್ಠವಾಗಿರದಿದ್ದರೂ ಭಾರತಕ್ಕೆ ಹಲವು ಆಟಗಾರರ ಅಸೌಖ್ಯ ಮತ್ತು ಗಾಯ ಆತಂಕ ತರಿಸಿದೆ. ಸ್ಫೋಟಕ ಶೈಲಿಯ ಬ್ಯಾಟರ್ ಅಭಿಷೇಕ್ ಅವರು ಎರಡು ದಿನ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆದ ನಂತರ ಬುಧವಾರ ತಂಡಕ್ಕೆ ಮರಳಿದ್ದಾರೆ. ಅವರು ನಮಿಬಿಯಾ ಎದುರು ಕಣಕ್ಕಿಳಿಯುವ ಕುರಿತು ಪಂದ್ಯದ ಆರಂಭಕ್ಕೂ ಮುನ್ನ ನಿರ್ಧರಿಸಲಾಗುವುದು ಎಂದು ಭಾರತ ತಂಡದ ಬ್ಯಾಟರ್ ತಿಲಕ್ ವರ್ಮಾ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಇನ್ನೊಂದೆಡೆ ಪ್ರಧಾನ ವೇಗಿ ಜಸ್‌ಪ್ರೀತ್ ಬುಮ್ರಾ ಜ್ವರದಿಂದ ಚೇತರಿಕೆ ಕಂಡಿದ್ದರೂ ಈ ಪಂದ್ಯದಲ್ಲಿ ಆಡುವ ಅನುಮಾನವಿದೆ. ಇಶಾನ್ ಕಿಶನ್ ಕೂಡ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಒಟ್ಟಾರೆ ಪ್ರಧಾನ ಪಂದ್ಯಗಳು ಮುಂದಿರುವಾಗ ಆಟಗಾರರು ಗಾಯಗೊಳ್ಳುತ್ತಿರುವುದು ತಂಡಕೆ ದೊಡ್ಡ ಆತಂಕ ಉಂಟು ಮಾಡಿದೆ.
'ದೇವರೇ ಧನ್ಯವಾದಗಳು'; ವೆಸ್ಟ್ ಇಂಡೀಸ್ ವಿರುದ್ಧ ಸೋತ ಇಂಗ್ಲೆಂಡ್ ನಾಯಕ ಹ್ಯಾರಿ ಬ್ರೂಕ್ ಅಚ್ಚರಿಯ ಹೇಳಿಕೆ
2021 ರ ಯುಎಇಯಲ್ಲಿ ನಡೆದ ಟಿ 20 ವಿಶ್ವಕಪ್‌ನಲ್ಲಿ ಉಭಯ ತಂಡಗಳು ಈ ಹಿಂದೆ ಒಮ್ಮೆ ಮಾತ್ರ ಮುಖಾಮುಖಿಯಾಗಿವೆ. ಆಗ ವಿರಾಟ್ ಕೊಹ್ಲಿ ನೇತೃತ್ವದ ಭಾರತ ಒಂಬತ್ತು ವಿಕೆಟ್‌ಗಳಿಂದ ಜಯಗಳಿಸಿತ್ತು.
ಪ್ರಸಾರ
ಭಾರತ ಮತ್ತು ನಮೀಬಿಯಾ ನಡುವಿನ ಟಿ20 ವಿಶ್ವಕಪ್ 2026 ಪಂದ್ಯವು ಫೆಬ್ರವರಿ 12 ರ ಗುರುವಾರ ನಡೆಯಲಿದೆ. ಭಾರತೀಯ ಕಾಲಮಾನ ಸಂಜೆ 7 ಗಂಟೆಗೆ ಪಂದ್ಯ ಆರಂಭವಾಗುತ್ತದೆ. ಸಂಜೆ 6:30 ಕ್ಕೆ ಟಾಸ್ ನಡೆಯಲಿದೆ. ಪಂದ್ಯವನ್ನು ಭಾರತದಲ್ಲಿ ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಟಿವಿ ಚಾನೆಲ್‌ಗಳಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ.
ತಂಡಗಳು
ಭಾರತ: ಇಶಾನ್ ಕಿಶನ್ (ವಿ.ಕೀ.), ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್ (ನಾಯಕ), ಶಿವಂ ದುಬೆ, ರಿಂಕು ಸಿಂಗ್, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ, ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ, ಕುಲದೀಪ್ ಯಾದವ್, ಸಂಜು ಸ್ಯಾಮ್ಸನ್, ವಾಷಿಂಗ್ಟನ್ ಸುಂದರ್.
ನಮೀಬಿಯಾ: ಲೌರೆನ್ ಸ್ಟೀನ್‌ಕ್ಯಾಂಪ್, ಜಾನ್ ಫ್ರಿಲಿಂಕ್, ಜಾನ್ ನಿಕೋಲ್ ಲಾಫ್ಟಿ-ಈಟನ್, ಗೆರ್ಹಾರ್ಡ್ ಎರಾಸ್ಮಸ್ (ನಾಯಕ), ಜೆಜೆ ಸ್ಮಿಟ್, ಜೇನ್ ಗ್ರೀನ್ (ವಿ.ಕೀ.), ರೂಬೆನ್ ಟ್ರಂಪೆಲ್‌ಮನ್, ಡೈಲನ್ ಲೀಚರ್, ವಿಲ್ಲೆಮ್ ಮೈಬರ್ಗ್, ಬರ್ನಾರ್ಡ್ ಸ್ಕೋಲ್ಟ್ಜ್, ಮ್ಯಾಕ್ಸ್ ಹೀಂಗೊ, ಮಲನ್ ಕ್ರುಗರ್, ಬೆನ್ ಶಿಕೊಂಗೊ, ಜ್ಯಾಕ್ ಬ್ರಾಸೆಲ್, ಜಾನ್ ಬಾಲ್ಟ್.