ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಭಾರತ ವಿರುದ್ಧ ಟಾಸ್‌ ಗೆದ್ದು ಬೌಲಿಂಗ್‌ ಆಯ್ದುಕೊಂಡ ನ್ಯೂಜಿಲೆಂಡ್‌

Ind vs Nez Live Score: ಟಿ20 ವಿಶ್ವಕಪ್‌ ಸಮೀಪಿಸುತ್ತಿರುವ ಕಾರಣ ಪ್ರಮುಖವಾಗಿ ನಾಯಕ ಸೂರ್ಯಕುಮಾರ್‌ ತೀರಾ ಕಳಪೆ ಆಟದಿಂದ ಹೊರಬರಬೇಕಿದೆ. ಕಳೆದ ವರ್ಷ 21 ಪಂದ್ಯಗಳಲ್ಲಿ 13.62ರ ಸರಾಸರಿಯಲ್ಲಿ ಕೇವಲ 218 ರನ್‌ ಗಳಿಸಿದ್ದು, ಒಂದೇ ಒಂದು ಅರ್ಧಶತಕ ಬಾರಿಸಿಲ್ಲ. ಉಳಿದಂತೆ ಬುಮ್ರಾ, ಹಾರ್ದಿಕ್‌ ಪಾಂಡ್ಯ, ವರುಣ್‌ ಚಕ್ರವರ್ತಿ ಮರಳಿದ್ದು ತಂಡದ ಆತ್ಮವಿಶ್ವಾಸ ಹೆಚ್ಚಿಸಿದೆ.

India vs New Zealand 1st T20I

ನಾಗ್ಪುರ, ಜ.21: ಭಾರತ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಟಾಸ್‌ ಗೆದ್ದ ನ್ಯೂಜಿಲ್ಯಾಂಡ್‌(Ind vs Nez Live Score) ನಾಯಕ ಮಿಚೆಲ್‌ ಸ್ಯಾಂಟ್ನರ್‌ ಬೌಲಿಂಗ್‌ ಆಯ್ದುಕೊಂಡರು. ವಿಶ್ವಕಪ್‌ಗೂ ಮುನ್ನ ಸರಣಿ ಗೆದ್ದು ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳುವುದು ಸದ್ಯ ಸೂರ್ಯಕುಮಾರ್‌ ಯಾದವ್‌ ನಾಯಕತ್ವ ಭಾರತ ತಂಡದ ಪ್ರಮುಖ ಗುರಿ.

ನಾಗ್ಪುರ ಪಿಚ್ ಹೆಚ್ಚಿನ ಬೌನ್ಸ್‌, ವೇಗಕ್ಕೆ ಹೆಸರುವಾಸಿ. ಇಲ್ಲಿ ವೇಗಿಗಳು ಹೆಚ್ಚಿನ ನೆರವು ಪಡೆಯಲಿದ್ದಾರೆ. ಈ ಕ್ರೀಡಾಂಗಣದಲ್ಲಿ ಮೊದಲ ಇನ್ನಿಂಗ್ಸ್‌ ಸರಾಸರಿ ಮೊತ್ತ 160ರಿಂದ 175. 3ನೇ ಕ್ರಮಾಂಕದಲ್ಲಿ ಆಡುತ್ತಿದ್ದ ತಿಲಕ್‌ ವರ್ಮಾ ಗಾಯಗೊಂಡು ಮೊದಲ ಎರಡು ಪಂದ್ಯಗಳಿಂದ ಹೊರಬಿದ್ದಿದ್ದ ಕಾರಣ ಅವರ ಸ್ಥಾನದಲ್ಲಿ ಇಶಾನ್‌ ಕಿಶನ್ ಆಡುವ ಅವಕಾಶ ಪಡೆದುಕೊಂಡರು. ರಿಂಕು ಸಿಂಗ್‌ ಕೂಡ ತಂಡದಲ್ಲಿ ಕಾಣಿಸಿಕೊಂಡರು.

ಟಿ20 ವಿಶ್ವಕಪ್‌ ಸಮೀಪಿಸುತ್ತಿರುವ ಕಾರಣ ಪ್ರಮುಖವಾಗಿ ನಾಯಕ ಸೂರ್ಯಕುಮಾರ್‌ ತೀರಾ ಕಳಪೆ ಆಟದಿಂದ ಹೊರಬರಬೇಕಿದೆ. ಕಳೆದ ವರ್ಷ 21 ಪಂದ್ಯಗಳಲ್ಲಿ 13.62ರ ಸರಾಸರಿಯಲ್ಲಿ ಕೇವಲ 218 ರನ್‌ ಗಳಿಸಿದ್ದು, ಒಂದೇ ಒಂದು ಅರ್ಧಶತಕ ಬಾರಿಸಿಲ್ಲ. ಉಳಿದಂತೆ ಬುಮ್ರಾ, ಹಾರ್ದಿಕ್‌ ಪಾಂಡ್ಯ, ವರುಣ್‌ ಚಕ್ರವರ್ತಿ ಮರಳಿದ್ದು ತಂಡದ ಆತ್ಮವಿಶ್ವಾಸ ಹೆಚ್ಚಿಸಿದೆ.

ಏಕದಿನ ನಂ.1 ಸ್ಥಾನ ಕಳೆದುಕೊಂಡ ವಿರಾಟ್‌ ಕೊಹ್ಲಿ

ಟೀಮ್‌ ಇಂಡಿಯಾ 2024ರಲ್ಲಿ ಟಿ20 ವಿಶ್ವಕಪ್‌ ಗೆದ್ದಿತ್ತು. ಆ ಬಳಿಕ ತಂಡ ಒಟ್ಟು 36 ಟಿ20 ಪಂದ್ಯಗಳನ್ನಾಡಿದೆ. ಇದರಲ್ಲಿ 29ರಲ್ಲಿ ಗೆದ್ದಿದ್ದರೆ, ಕೇವಲ 5 ಪಂದ್ಯಗಳಲ್ಲಿ ಮಾತ್ರ ಸೋಲನುಭವಿಸಿದೆ. ಇನ್ನು, ವಿಶ್ವಕಪ್‌ ಬಳಿಕ ನಡೆದ ಟಿ20 ಸರಣಿಗಳಲ್ಲೂ ಭಾರತ ಗೆಲುವು ತನ್ನದಾಗಿಸಿಕೊಂಡಿದೆ. 2026ರ ವಿಶ್ವಕಪ್‌ಗೂ ಮುನ್ನ ಅಜೇಯ ದಾಖಲೆ ಕಾಯ್ದುಕೊಳ್ಳುವುದು ಭಾರತದ ಮುಂದಿರುವ ಪ್ರಮುಖ ಗುರಿ.

ಉಭಯ ತಂಡಗಳು

ಭಾರತ: ಸಂಜು ಸ್ಯಾಮ್ಸನ್(ವಿ.ಕೀ.), ಅಭಿಷೇಕ್ ಶರ್ಮಾ, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್(ನಾಯಕ), ರಿಂಕು ಸಿಂಗ್, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ, ಜಸ್ಪ್ರೀತ್ ಬುಮ್ರಾ.

ನ್ಯೂಜಿಲೆಂಡ್‌: ಟಿಮ್ ರಾಬಿನ್ಸನ್, ಡೆವೊನ್ ಕಾನ್ವೇ(ವಿ.ಕೀ.), ರಾಚಿನ್ ರವೀಂದ್ರ, ಗ್ಲೆನ್ ಫಿಲಿಪ್ಸ್, ಮಾರ್ಕ್ ಚಾಪ್ಮನ್, ಡ್ಯಾರಿಲ್ ಮಿಚೆಲ್, ಮಿಚೆಲ್ ಸ್ಯಾಂಟ್ನರ್(ನಾಯಕ), ಕ್ರಿಸ್ಟಿಯನ್ ಕ್ಲಾರ್ಕ್, ಕೈಲ್ ಜೇಮಿಸನ್, ಇಶ್ ಸೋಧಿ, ಜಾಕೋಬ್ ಡಫಿ.