ಕೊಲಂಬೊ, ಆ. 26: ಭರ್ಜರಿ ಬ್ಯಾಟಿಂಗ್ ಬಳಿಕ ಬೌಲಿಂಗ್‌ನಲ್ಲೂ ಅಮೋಘ ಪ್ರದರ್ಶನ ತೋರಿದ ಟೀಂ ಇಂಡಿಯಾ, ಎರಡನೇ ಟೆಸ್ಟ್ ಪಂದ್ಯದಲ್ಲಿ ಮೇಲುಗೈ ಸಾಧಿಸಿದ್ದು ಶ್ರೀಲಂಕಾಗೆ ಫಾಲೋ ಆನ್ ಹೇರಿದೆ. ಕೊಲಂಬೊ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 9 ವಿಕೆಟ್‌ಗೆ 503 ರನ್ ಗಳಿಸಿ ಡಿಕ್ಲೇರ್ ಘೋಷಿಸಿತು. ಇದಕ್ಕೆ ಉತ್ತರವಾಗಿ ಲಂಕಾ 290 ರನ್‌ಗೆ ಸರ್ವಪತನ ಕಂಡಿತು. ಇದೀಗ ಲಂಕಾ 213 ರನ್ ಬಾರಿಸಬೇಕಿದೆ.
8 ವಿಕೆಟ್‌ಗೆ 265 ರನ್ ಗಳಿಸಿದ್ದಲ್ಲಿಂದ ನಾಲ್ಕನೇ ದಿನವಾದ ಬುಧವಾರ ಬ್ಯಾಟಿಂಗ್ ಮುಂದುವರಿಸಿದ ಶ್ರೀಲಂಕಾಗೆ ಫಾಲೋ ಆನ್ ತಪ್ಪಿಸಿಕೊಂಡು ಭಾರತ ಮತ್ತೆ ಬ್ಯಾಟ್ ಮಾಡುವಂತೆ ಮಾಡಲು ಕೇವಲ 39 ರನ್ ಬೇಕಿತ್ತು. ಆದರೆ ಕೇವಲ 25 ರನ್‌ಗಳಷ್ಟೇ ಕಲೆ ಹಾಕಿತು. 14 ರನ್ ಹಿನ್ನಡೆಯಲ್ಲಿ ಫಾಲೋ ಆನ್ ಸಂಕಷ್ಟ ಎದುರಿಸಿತು. 85 ರನ್ ಗಳಿಸಿದ್ದ ಸೋನಲ್ ದಿನುಶಾ ಚೊಚ್ಚಲ ಶತಕ ಬಾರಿಸಿದರು. 103 ರನ್ ಗಳಿಸಿದರು. ಅವರ ವಿಕೆಟ್ ಪದಾರ್ಪಣ ಪಂದ್ಯವಾಡಿದ ಸರಾಂಶ್ ಜೈನ್ ಪಾಲಾಯಿತು. ಒಟ್ಟು ಅವರು 2 ವಿಕೆಟ್ ಕಿತ್ತರು.
ಭಾರತ ಪರ ಘಾತಕ ಬೌಲಿಂಗ್ ದಾಳಿ ನಡೆಸಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ 52 ರನ್ ವೆಚ್ಚದಲ್ಲಿ ಮೂರು ವಿಕೆಟ್ ಕಿತ್ತರು. ಸ್ಪಿನ್ನರ್ ಮಾನವ್ ಸುತಾರ್ ಕೂಡ 3 ವಿಕೆಟ್ ಕಡೆದರು. ಉಳಿದಂತೆ ಸರಾಂಶ್ ಜೈನ್ ಎರಡು, ಮೊಹಮ್ಮದ್ ಸಿರಾಜ್ ಮತ್ತು ರವೀಂದ್ರ ಜಡೇಜಾ ತಲಾ ಒಂದು ವಿಕೆಟ್ ಪಡೆದರು.
ಪುರುಷರ ವಿರುದ್ಧ ಟಿ20 ಪಂದ್ಯ ಆಡುವ ಮೂಲಕ ಏಷ್ಯಾಕಪ್‌ಗೆ ಸಿದ್ಧತೆ ನಡೆಸಿದ ಪಾಕಿಸ್ತಾನ ಮಹಿಳಾ ತಂಡ
ಮಂಗಳವಾರ ಆಟಕ್ಕೆ ಮಳೆ ಕಾಡಿತಾದರೂ, ದಿನದಾಟದಲ್ಲಿ 80.4 ಓವರ್ ಬೌಲ್ ಮಾಡಲು ಸಾಧ್ಯವಾಯಿತು. 2ನೇ ದಿನದಾಟದಂತ್ಯಕ್ಕೆ 8 ರನ್‌ಗೆ 2 ವಿಕೆಟ್ ಕಳೆದುಕೊಂಡಿದ್ದ ಲಂಕಾ, ದಿನದ ಆರಂಭದಲ್ಲೇ ಆರಂಭಿಕ ಬ್ಯಾಟರ್ ಕಮಿಲ್ ಮಿಶಾರಾ (19)ರ ವಿಕೆಟ್ ಪತನಗೊಂಡಿದ್ದರಿಂದ ಸಂಕಷ್ಟಕ್ಕೆ ಸಿಲುಕಿತು. ಅಂತಿಮ ದಿನದಾಟಕ್ಕೆ ಭಾರೀ ಮಳೆ ಭೀತಿ ಇರುವುದರಿಂದ ಭಾರತೀಯ ಬೌಲರ್‌ಗಳು ಲಂಕಾ ಬ್ಯಾಟರ್‌ಗಳನ್ನು ಬೇಗನೆ ಔಟ್ ಮಾಡಿದರೆ ಗೆಲುವು ಸಾಧ್ಯ.