ಕೋಲ್ಕತಾ, ಮಾ.1: ಟಿ20 ವಿಶ್ವಕಪ್‌ನ ಕ್ವಾರ್ಟರ್ಫೈನಲ್ ಆಗಿ ಮಾರ್ಪಟ್ಟಿರುವ ಸೂಪರ್-8 ಹಂತದ ಕೊನೇ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಟಾಸ್ ಗೆದ್ದ ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಭಾರತ ಈ ಪಂದ್ಯಕ್ಕೆ ತನ್ನ ಆಡುವ ಬಳಗದಲ್ಲಿ ಯಾವುದೇ ಬದಲಾವಣೆ ಮಾಡಲಿಲ್ಲ.
ಪಿಚ್ ರಿಪೋರ್ಟ್
ಈ ಹೈ-ವೋಲ್ಟೇಜ್ ಪಂದ್ಯಕ್ಕಾಗಿ ಒಣ ಪಿಚ್ ಸಿದ್ಧಪಡಿಸಲಾಗಿದೆ. ಆದಾಗ್ಯೂ, ಪಂದ್ಯ ಸಾಗಿದಂತೆ ಇಬ್ಬನಿ ಸಮಸ್ಯೆ ಕಾಣಿಸಬಹುದು. ಪಂದ್ಯದಲ್ಲಿ ಸ್ಪಿನ್ನರ್‌ಗಳು ಪ್ರಮುಖ ಪಾತ್ರ ವಹಿಸುವ ಸಾಧ್ಯತೆಯಿದೆ. ಉಭಯ ತಂಡಗಳ ಬ್ಯಾಟಿಂಗ್ ಘಟಕದ ಆಕ್ರಮಣಕಾರಿ ಮನಸ್ಥಿತಿಯನ್ನು ಗಮನಿಸಿದರೆ, ದೊಡ್ಡ ಮೊತ್ತ ದಾಖಲಾಗುವ ನಿರೀಕ್ಷಿಯಿದೆ. 180 ರನ್ ಮೊದಲ ಇನಿಂಗ್ಸ್‌ನ ಸರಾಸರಿ ಮೊತ್ತವಾಗಿದೆ.
ಟಿ20ಐಗಳಲ್ಲಿ ಭಾರತ vs ವೆಸ್ಟ್ ಇಂಡೀಸ್ ಮುಖಾಮುಖಿ ದಾಖಲೆ
ಆಡಿದ ಪಂದ್ಯಗಳು: 30
ಭಾರತ ಜಯ :19
ವೆಸ್ಟ್ ಇಂಡೀಸ್ ಜಯ - 10
ಫಲಿತಾಂಶವಿಲ್ಲ - 1
ಟಿ20 ವಿಶ್ವಕಪ್ ಮುಖಾಮುಖಿ
ಆಡಿರುವ ಪಂದ್ಯಗಳು - 4
ಭಾರತ ಗೆಲುವು - 1
ವೆಸ್ಟ್ ಇಂಡೀಸ್ ಗೆಲುವು - 3
ಉಭಯ ತಂಡಗಳು
ಭಾರತ: ಸಂಜು ಸ್ಯಾಮ್ಸನ್(ವಿ.ಕೀ.), ಅಭಿಷೇಕ್ ಶರ್ಮಾ, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್(ನಾಯಕ), ಹಾರ್ದಿಕ್ ಪಾಂಡ್ಯ, ತಿಲಕ್ ವರ್ಮಾ, ಶಿವಂ ದುಬೆ, ಅಕ್ಷರ್ ಪಟೇಲ್, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ, ಜಸ್ಪ್ರೀತ್ ಬುಮ್ರಾ
ವೆಸ್ಟ್ ಇಂಡೀಸ್: ಶಾಯ್ ಹೋಪ್(ನಾಯಕ), ರೋಸ್ಟನ್ ಚೇಸ್, ಶಿಮ್ರಾನ್ ಹೆಟ್ಮೆಯರ್, ರೋವ್‌ಮನ್ ಪೊವೆಲ್, ಶೆರ್ಫೇನ್ ರುದರ್‌ಫೋರ್ಡ್, ರೊಮಾರಿಯೋ ಶೆಫರ್ಡ್, ಜೇಸನ್ ಹೋಲ್ಡರ್, ಮ್ಯಾಥ್ಯೂ ಫೋರ್ಡ್, ಅಕೇಲ್ ಹೊಸೈನ್, ಗುಡಕೇಶ್ ಮೋಟಿ, ಶಮರ್ ಜೋಸೆಫ್.