ಹರಾರೆ ಜು.23: ಆತಿಥೇಯ ಜಿಂಬಾಬ್ವೆ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡ ಬೌಲಿಂಗ್ ಆಯ್ದುಕೊಂಡಿದೆ. ಭಾರತ ಪರ ಅಶೋಕ್ ಶರ್ಮಾ ಪದಾರ್ಪಣೆ ಮಾಡಿದರು. ʼನಾನು ಇಲ್ಲಿಗೆ ಮೊದಲ ಬಾರಿಗೆ ಬಂದಿದ್ದೇನೆ, ಆದ್ದರಿಂದ ವಿಕೆಟ್ ಹೇಗೆ ಆಡುತ್ತದೆ ಎಂದು ನನಗೆ ತಿಳಿದಿಲ್ಲʼ ಎಂದು ಟಾಸ್ ವೇಳೆ ನಾಯಕ ಶ್ರೇಯಸ್ ಅಯ್ಯರ್ ಹೇಳಿದರು.
ಪಿಚ್ ವರದಿ
ಇಲ್ಲಿನ ಮೈದಾನವು ಬ್ಯಾಟ್ಸ್‌ಮನ್‌ಗಳು ಮತ್ತು ಬೌಲರ್‌ಗಳಿಗೆ ಸಮತೋಲಿತ ಮೈದಾನವಾಗುವ ಸಾಧ್ಯತೆಯಿದೆ. ಬ್ಯಾಟ್ಸ್‌ಮನ್‌ಗಳು ಸ್ಪಿನ್ ವಿರುದ್ಧ ಎಚ್ಚರಿಕೆಯಿಂದ ಆಡಬೇಕಾಗುತ್ತದೆ ಮತ್ತು ಕ್ರೀಸ್‌ನಲ್ಲಿ ಸ್ವಲ್ಪ ಸಮಯ ಕಳೆದ ನಂತರ ಅವರು ಉತ್ತಮ ಸ್ಕೋರ್ ಗಳಿಸಲು ಸಾಧ್ಯವಾಗುತ್ತದೆ. ಮೊದಲ ಇನ್ನಿಂಗ್ಸ್‌ನ ಸರಾಸರಿ ಮೊತ್ತ ಸುಮಾರು 160 ಆಗುವ ಸಾಧ್ಯತೆಯಿದೆ.
ಕಳೆದ ಐರ್ಲೆಂಡ್ ವಿರುದ್ಧ ಭಾರತ (2-0) ಅಂತರದ ಸೋಲು ಕಂಡಿತ್ತು. ನಂತರ ಇಂಗ್ಲೆಂಡ್ ವಿರುದ್ಧ (0-4) ವೈಟ್‌ವಾಶ್ ಆಗಿತ್ತು, ಆರು ಪಂದ್ಯಗಳಲ್ಲಿ ಒಂದೇ ಒಂದು ಪಂದ್ಯವನ್ನು ಗೆಲ್ಲಲು ವಿಫಲವಾಗಿತ್ತು. ಹೀಗಾಗಿ ಈ ಸರಣಿ ಭಾರತದ ಪಾಲಿಗೆ ಮತ್ತು ನೂತನ ನಾಯಕ ಅಯ್ಯರ್‌ಗೆ ನಿಜವಾದ ಅಗ್ನಿಪರೀಕ್ಷೆ ಎಂದರೂ ತಪ್ಪಾಗಲಾರದು.
5 ವರ್ಷಗಳ ಬಳಿಕ ಏಕದಿನ ಸರಣಿಗೆ ಪಾಕ್ ತಂಡದ ಇಂಗ್ಲೆಂಡ್ ಪ್ರವಾಸ
ಹರಾರೆ ಸ್ಪೋರ್ಟ್ಸ್ ಕ್ಲಬ್ ಇಲ್ಲಿಯವರೆಗೆ ಒಟ್ಟು 75 ಪಂದ್ಯಗಳನ್ನು ಆಯೋಜಿಸಿದ್ದು, ಇದರಲ್ಲಿ ಮೊದಲು ಬ್ಯಾಟ್ ಮಾಡಿದ ತಂಡಗಳು 39 ಪಂದ್ಯಗಳನ್ನು ಗೆದ್ದಿದ್ದರೆ, ಎರಡನೇ ಬಾರಿಗೆ ಬ್ಯಾಟಿಂಗ್ ಮಾಡಿದ ತಂಡಗಳು 34 ಪಂದ್ಯಗಳನ್ನು ಗೆದ್ದಿವೆ.
ಉಭಯ ಆಡುವ ಬಳಗ
ಜಿಂಬಾಬ್ವೆ (ಪ್ಲೇಯಿಂಗ್ XI): ಬ್ರಿಯಾನ್ ಬೆನೆಟ್, ತಡಿವಾನಾಶೆ ಮರುಮಾನಿ(ವಿ.ಕೀ.), ಬೆನ್ ಕರ್ರಾನ್, ಡಿಯೋನ್ ಮೈಯರ್ಸ್, ಸಿಕಂದರ್ ರಜಾ(ನಾಯಕ), ರಿಯಾನ್ ಬರ್ಲ್, ವೆಸ್ಲಿ ಮಾಧೆವೆರೆ, ಬ್ರಾಡ್ ಇವಾನ್ಸ್, ನ್ಯೂಮನ್ ನ್ಯಾಮ್ಹುರಿ, ರಿಚರ್ಡ್ ನಾಗರವಾ, ಬ್ಲೆಸಿಂಗ್ ಮುಜರಬಾನಿ.
ಭಾರತ (ಆಡುವ XI): ವೈಭವ್ ಸೂರ್ಯವಂಶಿ, ಅಭಿಷೇಕ್ ಶರ್ಮಾ, ಇಶಾನ್ ಕಿಶನ್ (ವಿ.ಕೀ.), ಶ್ರೇಯಸ್ ಅಯ್ಯರ್ (ನಾಯಕ), ತಿಲಕ್ ವರ್ಮಾ, ರಿಂಕು ಸಿಂಗ್, ಶಿವಂ ದುಬೆ, ರವಿ ಬಿಷ್ಣೋಯ್, ಪ್ರಿನ್ಸ್ ಯಾದವ್, ಅಶೋಕ್ ಶರ್ಮಾ, ಮಯಾಂಕ್ ಯಾದವ್