ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಪುರುಷರ ಏರ್ ರೈಫಲ್ ಸ್ಪರ್ಧೆಯಲ್ಲಿ ಭಾರತಕ್ಕೆ ಬೆಳ್ಳಿ; ಪಾಕಿಸ್ತಾನ ವಿರುದ್ಧ ಮಹಿಳಾ ಟಿಟಿ ತಂಡಕ್ಕೆ ಜಯ

Asian Games: ಮಹಿಳಾ ಟೇಬಲ್ ಟೆನಿಸ್ ವಿಭಾಗದಲ್ಲಿ ಭಾರತ ಮತ್ತು ಪಾಕಿಸ್ತಾನದ ಆಟಗಾರ್ತಿಯರು ಕ್ರೀಡಾಸ್ಫೂರ್ತಿಯನ್ನು ಮೆರೆದರು. ಪಂದ್ಯದ ವೇಳೆ ಪರಸ್ಪರ ಕೈಕುಲುಕಿದರು. ಪಂದ್ಯದಲ್ಲಿ ಭಾರತವು ಅತ್ಯುತ್ತಮ ಪ್ರದರ್ಶನ ನೀಡಿ ಪಾಕಿಸ್ತಾನವನ್ನು 3-0 ಅಂತರದಿಂದ ಸೋಲಿಸುವ ಮೂಲಕ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿತು.

India Men's 10m Air Rifle Team

ನಗೋಯಾ, ಸೆ.21: ಏಷ್ಯನ್ ಗೇಮ್ಸ್‌ನಲ್ಲಿ ಸೋಮವಾರ ನಡೆದ ಪುರುಷರ 10 ಮೀಟರ್ ಏರ್ ರೈಫಲ್ ತಂಡದ ಸ್ಪರ್ಧೆಯಲ್ಲಿ ಭಾರತದ ಹಿಮಾಂಶು ಧಿಲ್ಲೋನ್, ಪಾರ್ಥ್ ಮಾನೆ ಮತ್ತು ರುದ್ರಾಂಕ್ಷ್ ಪಾಟೀಲ್ ಅವರು ಒಟ್ಟಾಗಿ ಬೆಳ್ಳಿ ಪದಕವನ್ನು ಗೆದ್ದುಕೊಂಡರು. ಇದು ಶೂಟಿಂಗ್‌ನಲ್ಲಿ ಭಾರತಕ್ಕೆ ಒಲಿದ ಮೂರನೇ ಪದಕ. ಭಾನುವಾರ ಮಹಿಳಾ ತಂಡ ಮತ್ತು ವೈಯಕ್ತಿಕ ವಿಭಾಗದಲ್ಲಿ ಎಲವೆನಿಲ್ ವಲರಿವನ್ ಬೆಳ್ಳಿ ಗೆದ್ದಿದ್ದರು.

ರುದ್ರಾಂಕ್ಷ್ ಮತ್ತು ಧಿಲ್ಲೋನ್ ವೈಯಕ್ತಿಕ ಫೈನಲ್‌ಗೆ ಅರ್ಹತೆ ಪಡೆದಿದ್ದಾರೆ. ಹೀಗಾಗಿ ಮತ್ತೊಂದು ಪದಕ ನಿರೀಕ್ಷೆ ಮಾಡಬಹುದು. ರುದ್ರಾಂಕ್ಷ್ 631.8 ಅಂಕಗಳೊಂದಿಗೆ ಮೂರನೇ ಸ್ಥಾನ ಪಡೆದರೆ, ಧಿಲ್ಲೋನ್ 630.0 ಅಂಕಗಳೊಂದಿಗೆ ಏಳನೇ ಸ್ಥಾನ ಗಳಿಸಿದರು. ಮಾನೆ ಒಟ್ಟು 628.3 ಅಂಕಗಳನ್ನು ಗಳಿಸಿ 10ನೇ ಸ್ಥಾನ ಪಡೆದರು.

ಲಿಹಾವೊ 635.4 ಅಂಕಗಳೊಂದಿಗೆ ಅಗ್ರಸ್ಥಾನ ಪಡೆದರು. ಇದು ಏಷ್ಯನ್ ಕ್ರೀಡಾಕೂಟದ ಅರ್ಹತಾ ಸುತ್ತಿನ ದಾಖಲೆಯಾಗಿದೆ. ಸಿಹಾನ್ 633.0 ಅಂಕಗಳೊಂದಿಗೆ ಎರಡನೇ ಸ್ಥಾನ ಪಡೆದರೆ, ಚಾಂಗ್‌ಹಾಂಗ್ 630.6 ಅಂಕಗಳೊಂದಿಗೆ ಐದನೇ ಸ್ಥಾನ ಪಡೆದರು.

ಮಹಿಳಾ ಟೇಬಲ್ ಟೆನಿಸ್‌ನಲ್ಲಿ ಪಾಕ್‌ ಮಣಿಸಿದ ಭಾರತ

ಮಹಿಳಾ ಟೇಬಲ್ ಟೆನಿಸ್ ವಿಭಾಗದಲ್ಲಿ ಭಾರತ ಮತ್ತು ಪಾಕಿಸ್ತಾನದ ಆಟಗಾರ್ತಿಯರು ಕ್ರೀಡಾಸ್ಫೂರ್ತಿಯನ್ನು ಮೆರೆದರು. ಪಂದ್ಯದ ವೇಳೆ ಪರಸ್ಪರ ಕೈಕುಲುಕಿದರು. ಪಂದ್ಯದಲ್ಲಿ ಭಾರತವು ಅತ್ಯುತ್ತಮ ಪ್ರದರ್ಶನ ನೀಡಿ ಪಾಕಿಸ್ತಾನವನ್ನು 3-0 ಅಂತರದಿಂದ ಸೋಲಿಸುವ ಮೂಲಕ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿತು.

ಏಷ್ಯನ್ ಗೇಮ್ಸ್‌ನಲ್ಲಿ ಸೋಮವಾರ ಭಾರತದ ವೇಳಾಪಟ್ಟಿ; ಪದಕ ನಿರೀಕ್ಷೆಯಲ್ಲಿ ಶೂಟರ್‌ಗಳು, ಸುಚಿಕಾ ತರಿಯಾಲ್

ಸಿಂಗಾಪುರ ತಂಡವನ್ನು 3-2 ಅಂತರದಿಂದ ಅಚ್ಚರಿಗೊಳಿಸುವ ರೀತಿಯಲ್ಲಿ ಸೋಲಿಸುವ ಮೂಲಕ ತಮ್ಮ ಅಭಿಯಾನವನ್ನು ಆರಂಭಿಸಿದ ಮಹಿಳಾ ತಂಡದ ಪರವಾಗಿ ಸುತಿರ್ಥಾ ಮುಖರ್ಜಿ, ಸಿಂಡ್ರೆಲಾ ದಾಸ್ ಮತ್ತು ಶ್ರೀಜಾ ಅಕುಲಾ ಜಯ ಸಾಧಿಸಿದರು. ಸುತಿರ್ಥಾ ಅವರು ಅಲೀನಾ ಖಾನ್ ವಿರುದ್ಧ 3-0 (11-3, 11-3, 11-4) ಅಂತರದ ಸ್ಪಷ್ಟ ಗೆಲುವು ಸಾಧಿಸುವ ಮೂಲಕ ಭಾರತಕ್ಕೆ 1-0 ಮುನ್ನಡೆ ಒದಗಿಸಿಕೊಟ್ಟರು. ಈ ಪಂದ್ಯದ ನಂತರವೇ, ಭಾರತೀಯ ಮತ್ತು ಪಾಕಿಸ್ತಾನಿ ಟೇಬಲ್ ಟೆನಿಸ್ ಆಟಗಾರರು ಪರಸ್ಪರ ಹಸ್ತಲಾಘವ ಮಾಡಿಕೊಳ್ಳುತ್ತಿರುವುದು ಕ್ಯಾಮೆರಾಗಳಲ್ಲಿ ಸೆರೆಯಾಯಿತು.