ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಮಹಿಳಾ ಹಾಕಿ ವಿಶ್ವಕಪ್; ಉದ್ಘಾಟನಾ ಪಂದ್ಯದಲ್ಲಿ ಚೀನಾ ವಿರುದ್ಧ 2-2 ಅಂತರದ ಡ್ರಾ ಸಾಧಿಸಿದ ಭಾರತ

Women's Hockey World Cup 2026: ಅಂತಿಮ ಕ್ವಾರ್ಟರ್‌ನಲ್ಲಿ ಎರಡೂ ತಂಡಗಳು ಗೆಲುವಿಗಾಗಿ ತೀವ್ರ ಹೋರಾಟ ನಡೆಸಿತು. 51 ನೇ ನಿಮಿಷದಲ್ಲಿ ನವನೀತ್ ಗೋಲಿಗೆ ಅಡ್ಡಲಾಗಿ ಕ್ರಾಸ್ ಕಳುಹಿಸಿದಾಗ ಭಾರತವು ಗೋಲು ಗಳಿಸುವ ಸಮೀಪಕ್ಕೆ ಬಂದಿತು, ಆದರೆ ಲಾಲ್ರೆಮ್ಸಿಯಾಮಿ ಸಂಪರ್ಕವನ್ನು ಸಾಧಿಸುವಲ್ಲಿ ವಿಫಲರಾದರು.

India Women’s Hockey

ಆ್ಯಮ್‌ಸ್ಟಿಲ್‌ವೀನ್(ನೆದರ್ಲೆಂಡ್ಸ್), ಆ.16: ಭಾನುವಾರ ನಡೆದ ಹಾಕಿ ವಿಶ್ವಕಪ್‌ ಪಂದ್ಯದಲ್ಲಿ ಭಾರತದ ಮಹಿಳಾ ತಂಡ ಒಲಿಂಪಿಕ್ ಬೆಳ್ಳಿ ಪದಕ ವಿಜೇತ ಚೀನಾ ವಿರುದ್ಧ 2-2 ಡ್ರಾ ಸಾಧಿಸುವ ಮೂಲಕ ತಮ್ಮ ಅಭಿಯಾನವನ್ನು ಆರಂಭಿಸಿತು. ಭಾರತ ಪರ ನವನೀತ್ ಕೌರ್ ಮತ್ತು ದೀಪಿಕಾ ಸೆಹ್ರಾವತ್ ಗೋಲು ಬಾರಿಸಿ ಮಿಂಚಿದರು.

ಪಂದ್ಯ ಆರಂಭಗೊಂಡ 5 ನಿಮಿಷಕ್ಕೆ ಭಾರತಕ್ಕೆ ಪೆನಾಲ್ಟಿ ಕಾರ್ನರ್‌ ಅವಕಾಶ ಲಭಿಸಿತು. ಆದರೆ ಇದರ ಲಾಭವೆತ್ತಲು ವಿಫಲವಾಯಿತು. ಇದಾಗಿ ಮೂರನೇ ನಿಮಿಷದ ಅಂತದಲ್ಲಿ ಮತ್ತೊಂದು ಪೆನಾಲ್ಟಿ ದೊರಕಿತು. ಇದರಲ್ಲಿ ನವನೀತ್ ಕೌರ್ ಯಶಸ್ಸು ಕಂಡರು. ಭಾರತ 1-0 ಮುನ್ನಡೆ ಸಾಧಿಸಿತು. ಆದರೆ ಮೊದಲ ಕ್ವಾರ್ಟರ್‌ನ ಕೊನೆಯ ಸೆಕೆಂಡುಗಳಲ್ಲಿ ಚೀನಾ ತಂಡವು ಸಮಬಲ ಸಾಧಿಸಿತು, ಜಾಂಗ್ ಯಿಂಗ್ 15 ನೇ ನಿಮಿಷದಲ್ಲಿ ಪೆನಾಲ್ಟಿ ಸ್ಟ್ರೋಕ್ ಅನ್ನು ಗೋಲಾಗಿ ಪರಿವರ್ತಿಸಿದರು.

ದೀಪಿಕಾ 25 ನೇ ನಿಮಿಷದಲ್ಲಿ ಎರಡನೇ ಗೋಲು ಗಳಿಸಿದರು. ಪೆನಾಲ್ಟಿ ಕಾರ್ನರ್ ಅನ್ನು ಗೋಲಾಗಿ ಪರಿವರ್ತಿಸಿದ ದೀಪಿಕಾ ಭಾರತದ ಮುನ್ನಡೆಯನ್ನು ಮರಳಿ ತಂದರು. 2-1 ಮುನ್ನಡೆಯೊಂದಿಗೆ ಈ ಕ್ವಾರ್ಟರ್‌ ಅಂತಗೊಂಡಿತು. ಚೀನಾದ ರಕ್ಷಣೆಯನ್ನು ಒತ್ತಡಕ್ಕೆ ಒಳಪಡಿಸಿದರು ಮತ್ತು ತ್ವರಿತವಾಗಿ ಎರಡು ಪೆನಾಲ್ಟಿ ಕಾರ್ನರ್‌ಗಳಲ್ಲಿ ಯಶಸ್ಸು ಕಂಡರು.

ಮೂರನೇ ಕ್ವಾರ್ಟರ್‌ನಲ್ಲಿ ತಿರುಗಿಬಿದ್ದ ಚೀನಾ ಮತ್ತೆ ಪಂದ್ಯದಲ್ಲಿ ಹಿಡಿತ ಸಾಧಿಸಿತು. 39ನೇ ನಿಮಿಷದಲ್ಲಿ ಮಾ ನಿಂಗ್ ಗೋಲು ಬಾರಿಸಿ 2-2 ಸಮಬಲಕ್ಕೆ ತಂದರು. ಆ ಬಳಿಕ ಉಭಯ ತಂಡಗಳ ರಕ್ಷಾಣ ವಿಭಾಗ ಬಲಿಷ್ಠಗೊಂಡಿತು. ಹೀಗಾಗಿ ಗೋಲು ದಾಖಲಾಗಲಿಲ್ಲ.

ಅಂತಿಮ ಕ್ವಾರ್ಟರ್‌ನಲ್ಲಿ ಎರಡೂ ತಂಡಗಳು ಗೆಲುವಿಗಾಗಿ ತೀವ್ರ ಹೋರಾಟ ನಡೆಸಿತು. 51 ನೇ ನಿಮಿಷದಲ್ಲಿ ನವನೀತ್ ಗೋಲಿಗೆ ಅಡ್ಡಲಾಗಿ ಕ್ರಾಸ್ ಕಳುಹಿಸಿದಾಗ ಭಾರತವು ಗೋಲು ಗಳಿಸುವ ಸಮೀಪಕ್ಕೆ ಬಂದಿತು, ಆದರೆ ಲಾಲ್ರೆಮ್ಸಿಯಾಮಿ ಸಂಪರ್ಕವನ್ನು ಸಾಧಿಸುವಲ್ಲಿ ವಿಫಲರಾದರು. ಝೌ ಮೀರೋಂಗ್ ಗ್ರೀನ್ ಕಾರ್ಡ್ ಪಡೆದ ನಂತರ ಚೀನಾ ತಂಡದ ಆಟಗಾರರ ಸಂಖ್ಯೆ 10ಕ್ಕೆ ಇಳಿದರೂ, ಭಾರತಕ್ಕೆ ಇದರ ಲಾಭ ದೊರೆಯಲಿಲ್ಲ.

ಭಾರತವು ಮುಂದಿನ ಪಂದ್ಯ ಆಗಸ್ಟ್ 18, ಮಂಗಳವಾರ ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ. ನಂತರ ಆಗಸ್ಟ್ 20 ರಂದು ತಮ್ಮ ಅಂತಿಮ ಪೂಲ್ ಪಂದ್ಯದಲ್ಲಿ ಇಂಗ್ಲೆಂಡ್ ಅನ್ನು ಎದುರಿಸಲಿದೆ.