ಮಹಿಳಾ ಏಕದಿನ ವಿಶ್ವಕಪ್‌ಗೆ ಸಿದ್ಧತಾ ಶಿಬಿರ ಪೂರೈಸಿದ ಭಾರತ ತಂಡ
ಭಾರತ ವಿಶ್ವಕಪ್‌ಗೆ ಮೊದಲು ಆಸ್ಟ್ರೇಲಿಯಾದಲ್ಲಿ ಮೂರು ಪಂದ್ಯಗಳ ಏಕದಿನ ಸರಣಿ ಆಡಲಿದೆ. ಈ ಸರಣಿ ಸೆಪ್ಟೆಂಬರ್ 14ರಂದು ಶುರುವಾಗಲಿದೆ. ಮಹಿಳಾ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿ ಸೆಪ್ಟೆಂಬರ್ 30ರಂದು ಬೆಂಗಳೂರಿನಲ್ಲಿ ಆರಂಭವಾಗಲಿದೆ. ಜಂಟಿ ಆತಿಥ್ಯ ಹೊಂದಿರುವ ಭಾರತ ತಂಡವು ಬೆಂಗಳೂರಿನಲ್ಲಿ ನಡೆಯುವ ಉದ್ಘಾಟನಾ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ಎದುರಿಸಲಿದೆ.

ಬೆಂಗಳೂರು: ಈ ಹಿಂದೆ ಎರಡು ಬಾರಿ ‘ಅಂತಿಮ ಹಂತ’ದಲ್ಲಿ ಕೈತಪ್ಪಿದ ಐಸಿಸಿ ಮಹಿಳಾ ವಿಶ್ವಕಪ್ ಕ್ರಿಕೆಟ್(Women's Cricket World Cup) ಪ್ರಶಸ್ತಿಯನ್ನು ಈ ಬಾರಿ ಗೆದ್ದೇಗೆಲ್ಲುವ ದೃಢನಿರ್ಧಾರವನ್ನು ತಂಡದ ಭಾರತ ತಂಡ ಹೊಂದಿದೆ ಎಂದು ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್(harmanpreet kaur) ಇತ್ತೀಚೆಗೆ ವಿಶ್ವಕಪ್ ಟ್ರೋಫಿ ಅನಾವಾವರಣ ಕಾರ್ಯಕ್ರಮದಲ್ಲಿ ಹೇಳಿದ್ದರು. ಇದೀಗ ಚೊಚ್ಚಲ ವಿಶ್ವಕಪ್ ಮೇಲೆ ಕಣ್ಣಿಟ್ಟಿರುವ ಭಾರತ ಮಹಿಳಾ ತಂಡ ಟೂರ್ನಿಗೆ ಪೂರ್ವಭಾವಿಯಾಗಿ ಬಿಸಿಸಿಐ ಶ್ರೇಷ್ಠತಾ ಕೇಂದ್ರದಲ್ಲಿ ಹತ್ತು ದಿನಗಳ ಸಿದ್ಧತಾ ಶಿಬಿರವನ್ನು ಪೂರ್ಣಗೊಳಿಸಿ ಸಜ್ಜಾಗಿದೆ.
ಶಿಬಿರದಲ್ಲಿ ಫಿಟ್ನೆಸ್‌ಗೆ ಒತ್ತು ನೀಡಲಾಯಿತು ಮತ್ತು ಪಂದ್ಯ ಸನ್ನಿವೇಶ ಗಮನದಲ್ಲಿಟ್ಟುಕೊಂಡು ಅಭ್ಯಾಸ ನಡೆಸಲಾಯಿತು. ಭಾರತ ವನಿತೆಯರು ಎರಡು ಬಾರಿ ವಿಶ್ವಕಪ್ ಫೈನಲ್‌ನಲ್ಲಿ ಸೋಲನುಭವಿಸಿದ್ದಾರೆ. ಕೊನೆಯ ಬಾರಿ– 2017ರಲ್ಲಿ ಆಸ್ಟ್ರೇಲಿಯಾ ಎದುರು 9 ರನ್‌ಗಳಿಂದ ಸೋಲನುಭವಿಸಿತ್ತು. ಆ ಬಾರಿ ಲಾರ್ಡ್ಸ್‌ನಲ್ಲಿ ಹರ್ಮನ್‌ಪ್ರೀತ್ ಅವರ ವೀರೋಚಿತ 51 ರನ್‌ಗಳ ಆಟ ಫಲ ನೀಡಲಿಲ್ಲ. ಈ ಬಾರಿ ಅವರು ತಂಡವನ್ನು ಮುನ್ನಡೆಸಲಿದ್ದಾರೆ.
ಭಾರತ ವಿಶ್ವಕಪ್‌ಗೆ ಮೊದಲು ಆಸ್ಟ್ರೇಲಿಯಾದಲ್ಲಿ ಮೂರು ಪಂದ್ಯಗಳ ಏಕದಿನ ಸರಣಿ ಆಡಲಿದೆ. ಈ ಸರಣಿ ಸೆಪ್ಟೆಂಬರ್ 14ರಂದು ಶುರುವಾಗಲಿದೆ. ಮಹಿಳಾ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿ ಸೆಪ್ಟೆಂಬರ್ 30ರಂದು ಬೆಂಗಳೂರಿನಲ್ಲಿ ಆರಂಭವಾಗಲಿದೆ. ಜಂಟಿ ಆತಿಥ್ಯ ಹೊಂದಿರುವ ಭಾರತ ತಂಡವು ಬೆಂಗಳೂರಿನಲ್ಲಿ ನಡೆಯುವ ಉದ್ಘಾಟನಾ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ಎದುರಿಸಲಿದೆ.
ಇದನ್ನೂ ಓದಿ ತಿರುವನಂತಪುರಕ್ಕೆ ಮಹಿಳಾ ವಿಶ್ವಕಪ್ ಟೂರ್ನಿ ಸ್ಥಳಾಂತರ?
ಕೌರ್ ನಾಯಕತ್ವದ ತಂಡ ಇತ್ತೀಚಿನ ಇಂಗ್ಲೆಂಡ್ ಪ್ರವಾಸದ ವೇಳೆ 3–2 ರಿಂದ ಟಿ20 ಸರಣಿಯನ್ನು ಮತ್ತು 2–1 ರಿಂದ ಏಕದಿನ ಪಂದ್ಯಗಳ ಸರಣಿ ಗೆದ್ದುಕೊಂಡು ಉತ್ಸಾಹದಲ್ಲಿದೆ.