IPL 2025: ಲಕ್ನೋ ತಂಡ ತೊರೆಯಲು ನಿರ್ಧರಿಸಿದ ಮೆಂಟರ್ ಜಹೀರ್ ಖಾನ್
ಇನ್ನೊಂದು ಮೂಲಗಳ ಪ್ರಕಾರ ಭರತ್ ಅರುಣ್ ಅವರನ್ನು ಇತ್ತೀಚೆಗೆ ಲಕ್ನೋ ಸೂಪರ್ ಜೈಂಟ್ಸ್‌ನ ಬೌಲಿಂಗ್ ಕೋಚ್ ಆಗಿ ನೇಮಕಗೊಂಡಿದ್ದರು. ಹೀಗಾಗಿ ಅವರಿಗೆ ಮಾರ್ಗದರ್ಶಕ ಕರ್ತವ್ಯಗಳ ಜೊತೆಗೆ ಬೌಲಿಂಗ್ ಕೋಚ್ ಆಗಿ ಸೇವೆ ಸಲ್ಲಿಸಿದ ಜಹೀರ್ ಖಾನ್ ಅವರ ಸ್ಥಾನ ತುಂಬುವ ಸಾಧ್ಯತೆಯಿದೆ.


ಲಕ್ನೋ: ಭಾರತದ ಮಾಜಿ ವೇಗಿ ಜಹೀರ್ ಖಾನ್ ಐಪಿಎಲ್ 2026(Lucknow Super Giants) ರ ಮುನ್ನ ಲಕ್ನೋ ಸೂಪರ್ ಜೈಂಟ್ಸ್(Lucknow Super Giants) ತಂಡವನ್ನು ತೊರೆಯಲಿದ್ದಾರೆ ಎಂದು ವರದಿಯಾಗಿದೆ. ಟೈಮ್ಸ್ ಆಫ್ ಇಂಡಿಯಾ (ಟಿಒಐ) ವರದಿಯ ಪ್ರಕಾರ, ಜಹೀರ್ ಖಾನ್( Zaheer Khan) ತಂಡದಿಂದ ಬೇರ್ಪಡುವ ಸಾಧ್ಯತೆಯಿದೆ ಎಂದು ತಿಳಿಸಿದೆ. ಹೀಗಾಗಿ ಅವರ ಸ್ಥಾನಕ್ಕೆ ಫ್ರಾಂಚೈಸಿ ಬೇರೊಬ್ಬರನ್ನು ಹುಡುಕಬೇಕಿದೆ.
ಸಂಭಾವ್ಯರ ಪಟ್ಟಿಯಲ್ಲಿ ಅನಿಲ್ ಕುಂಬ್ಳೆ ಹೆಸರು ಮುಂಚೂಣಿಯಲ್ಲಿ ಕಾಣಿಸಿಕೊಂಡಿದೆ. ಕುಂಬ್ಳೆ ಒಬ್ಬ ಯಶಸ್ವಿ ತರಬೇತುದಾರ ಮತ್ತು ಮಾರ್ಗದರ್ಶಕರಾಗಿದ್ದಾರೆ. ಟೀಂ ಇಂಡಿಯಾ ಕೋಚ್ ಆಗಿ, ಐಪಿಎಲ್‌ಎನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ತಂಡದ ಮುಖ್ಯ ತರಬೇತುದಾರರಾಗಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ. ಸದ್ಯ ಅವರು ಯಾವುದೇ ಫ್ರಾಂಚೈಸಿ ಪರ ಕರ್ತವ್ಯ ನಿರ್ವಹಿಸುತ್ತಿಲ್ಲ. ಹೀಗಾಗಿ ಅವರನ್ನು ಲಕ್ನೋ ಫ್ರಾಂಚೈಸಿ ತನ್ನತ್ತ ಸೆಳೆಯುವ ಸಾಧ್ಯತೆ ಅಧಿಕವಾಗಿದೆ.
ಇನ್ನೊಂದು ಮೂಲಗಳ ಪ್ರಕಾರ ಭರತ್ ಅರುಣ್ ಅವರನ್ನು ಇತ್ತೀಚೆಗೆ ಲಕ್ನೋ ಸೂಪರ್ ಜೈಂಟ್ಸ್‌ನ ಬೌಲಿಂಗ್ ಕೋಚ್ ಆಗಿ ನೇಮಕಗೊಂಡಿದ್ದರು. ಹೀಗಾಗಿ ಅವರಿಗೆ ಮಾರ್ಗದರ್ಶಕ ಕರ್ತವ್ಯಗಳ ಜೊತೆಗೆ ಬೌಲಿಂಗ್ ಕೋಚ್ ಆಗಿ ಸೇವೆ ಸಲ್ಲಿಸಿದ ಜಹೀರ್ ಖಾನ್ ಅವರ ಸ್ಥಾನ ತುಂಬುವ ಸಾಧ್ಯತೆಯಿದೆ.
ಭರತ್ ಅರುಣ್ ಅವರು ಐಪಿಎಲ್‌ನ ನಾಲ್ಕು ಆವೃತ್ತಿಗಳಲ್ಲಿ ಕೆಕೆಆರ್ ತಂಡಕ್ಕೆ ಬೌಲಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು. ಇದಕ್ಕೂ ಮುನ್ನ ಟೀಮ್ ಇಂಡಿಯಾದ ಬೌಲಿಂಗ್ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದರು.
ಇದನ್ನೂ ಓದಿ IPL 2026: ʻಅಂದು ದುಡ್ಡಿಗೋಸ್ಕರ ಕೆಕೆಆರ್ ತೊರೆಯಬೇಕಾಗಿತ್ತುʼ-ರಾಬಿನ್ ಉತ್ತಪ್ಪ ಅಚ್ಚರಿ ಹೇಳಿಕೆ!
ಐಪಿಎಲ್ 18ನೇ ಆವೃತ್ತಿಯಲ್ಲಿ ಎಲ್‌ಎಸ್‌ಜಿ ತಂಡವು ಏಳನೇ ಸ್ಥಾನ ಪಡೆದಿತ್ತು. ಅದರಲ್ಲೂ ತಂಡದ ಬೌಲಿಂಗ್ ವಿಭಾಗವು ನೀರಸ ಪ್ರದರ್ಶನ ತೋರಿಸಿತ್ತು. ಹಾಗಾಗಿ ಅನುಭವಿ ಭರತ್ ಅರುಣ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ ಎಂದು ಮೂಲಗಳು ಪಿಟಿಐಗೆ ತಿಳಿಸಿವೆ.
"ಎಲ್‌ಎಸ್‌ಜಿ ಯುವ, ಪ್ರತಿಭಾನ್ವಿತ ಮತ್ತು ಕ್ರಿಯಾಶೀಲ ಭಾರತೀಯ ವೇಗದ ಬೌಲರ್‌ಗಳಾದ ಆಕಾಶ್ ದೀಪ್, ಆವೇಶ್ ಖಾನ್, ಮಾಯಾಂಕ್ ಯಾದವ್, ಪ್ರಿನ್ಸ್ ಯಾದವ್, ಮೊಹ್ಸಿನ್ ಖಾನ್ ಮತ್ತು ಆಕಾಶ್ ಸಿಂಗ್ ಪ್ರತಿಯೊಬ್ಬರಲ್ಲೂ ನಾನು ಅಪಾರ ಸಾಮರ್ಥ್ಯವನ್ನು ಕಾಣುತ್ತೇನೆ. ವಿಶ್ವದ ಅತ್ಯುತ್ತಮ ಬ್ಯಾಟಿಂಗ್ ಲೈನ್‌ಅಪ್‌ಗಳನ್ನು ಸವಾಲು ಮಾಡಬಲ್ಲ ಒಗ್ಗಟ್ಟಿನ, ನಿರ್ಭೀತ ಮತ್ತು ಯುದ್ಧತಂತ್ರದ ತೀಕ್ಷ್ಣವಾದ ವೇಗದ ಘಟಕವಾಗಿ ಅವರನ್ನು ರೂಪಿಸಲು ಸಹಾಯ ಮಾಡುವುದು ನನ್ನ ಧ್ಯೇಯವಾಗಿದೆ" ಎಂದು ಅರುಣ್ ತಿಳಿಸಿದ್ದಾರೆ.