ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಭಾರತ ಮಹಿಳಾ ತಂಡದ ದಕ್ಷಿಣ ಆಫ್ರಿಕಾ ಪ್ರವಾಸದ ಪರಿಷ್ಕೃತ ವೇಳಾಪಟ್ಟಿ ಪ್ರಕಟ

India Women’s tour of South Africa: ಏಕದಿನ ಪಂದ್ಯಗಳ ಸರಣಿ ಡಿಸೆಂಬರ್ 16 ರಿಂದ 22ರ ಅವಧಿಯಲ್ಲಿ ನಿಗದಿಯಾಗಿದೆ. ಭಾರತ ತಂಡ ಒಂದು ವಾರ ಹೆಚ್ಚು ಉಳಿದುಕೊಳ್ಳಲಿದ್ದು, ಡಿಸೆಂಬರ್ 26 ರಿಂದ 30ರ ನಡುವೆ ಮೂರು ಟಿ20 ಪಂದ್ಯಗಳನ್ನು ಆಡಲಿದೆ. ಟಿ20 ಪಂದ್ಯಗಳನ್ನು ಬೆನೋನಿ ಮತ್ತು ಪೊಚೆಫ್‌ಸ್ಟ್ರೂಮ್‌ನಲ್ಲಿ ಆಡಲಾಗುವುದು.

India Women’s tour of South Africa

ಜೊಹಾನ್ಸ್‌ಬರ್ಗ್‌, ಆ. 7: ಕ್ರಿಕೆಟ್ ದಕ್ಷಿಣ ಆಫ್ರಿಕಾ (CSA) ಪ್ರವಾಸಿ ಭಾರತ ಮಹಿಳಾ ಕ್ರಿಕೆಟ್‌ ತಂಡದ ವಿರುದ್ಧದ ಸರಣಿಯ ಪರಿಷ್ಕೃತ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಇದೀಗ ಸರಣಿಯು ಡಿಸೆಂಬರ್‌ನಲ್ಲಿ ಮೂರು ಪಂದ್ಯಗಳ T20 ಅಂತರರಾಷ್ಟ್ರೀಯ ಸರಣಿಯೊಂದಿಗೆ ಮುಕ್ತಾಯಗೊಳ್ಳುತ್ತದೆ.

ಈ ಮೊದಲು ಪ್ರವಾಸದಲ್ಲಿ ಒಂದು ಟೆಸ್ಟ್‌ ಮತ್ತು ಮೂರು ಏಕದಿನ ಪಂದ್ಯಗಳನ್ನು ಮಾತ್ರ ನಿಗದಿಮಾಡಲಾಗಿತ್ತು. ಇದೀಗ ಮೂರು ಪಂದ್ಯಗಳ ಟಿ20 ಸರಣಿಗೂ ಅವಕಾಶ ಕಲ್ಪಿಸಿದೆ. ಪರಿಷ್ಕೃತ ವೇಳಾಪಟ್ಟಿಯ ಪ್ರಕಾರ ಈ ವರ್ಷದ ಡಿಸೆಂಬರ್ 9 ರಿಂದ 12ರವರೆಗೆ ಏಕೈಕ ಟೆಸ್ಟ್‌ ಪಂದ್ಯ ನಡೆಯಲಿದೆ.

ಏಕದಿನ ಪಂದ್ಯಗಳ ಸರಣಿ ಡಿಸೆಂಬರ್ 16 ರಿಂದ 22ರ ಅವಧಿಯಲ್ಲಿ ನಿಗದಿಯಾಗಿದೆ. ಭಾರತ ತಂಡ ಒಂದು ವಾರ ಹೆಚ್ಚು ಉಳಿದುಕೊಳ್ಳಲಿದ್ದು, ಡಿಸೆಂಬರ್ 26 ರಿಂದ 30ರ ನಡುವೆ ಮೂರು ಟಿ20 ಪಂದ್ಯಗಳನ್ನು ಆಡಲಿದೆ. ಟಿ20 ಪಂದ್ಯಗಳನ್ನು ಬೆನೋನಿ ಮತ್ತು ಪೊಚೆಫ್‌ಸ್ಟ್ರೂಮ್‌ನಲ್ಲಿ ಆಡಲಾಗುವುದು.

600ನೇ ಟೆಸ್ಟ್‌ ಆಡಲಿರುವ ಭಾರತ ತಂಡ; ವಿಶ್ವ ದಾಖಲೆ ಯಾರ ಹೆಸರಿನಲ್ಲಿದೆ?

‘ಭಾರತ ಮಹಿಳಾ ತಂಡದ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಟಿ20 ಸರಣಿ ಸೇರ್ಪಡೆ ಮಾಡಿರುವುದನ್ನು ಖಚಿತಪಡಿಸಲು ನಮಗೆ ಸಂಸತವಾಗುತ್ತಿದೆ’ ಎಂದು ಸಿಎಸ್‌ಎ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಫೊಲೆಟ್ಸಿ ಮೊಸೆಕಿ ಹೇಳಿಕೆಯಲ್ಲಿ ತಿಳಿಸಿದ್ದಾರೆ

ಭಾರತ ತಂಡ ಈ ವರ್ಷದ ಮಾರ್ಚ್‌– ಏಪ್ರಿಲ್‌ನಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿದ್ದು, ಐದು ಪಂದ್ಯಗಳ ಟಿ20 ಸರಣಿ ಆಡಿತ್ತು. ದಕ್ಷಿಣ ಆಫ್ರಿಕಾ ತಂಡ 4–1 ರಿಂದ ಸರಣಿ ಗೆದ್ದಿತ್ತು.

ಪರಿಷ್ಕೃತ ವೇಳಾಪಟ್ಟಿ

ಏಕೈಕ ಟೆಸ್ಟ್‌: ಡಿಸೆಂಬರ್ 9-12: ದಕ್ಷಿಣ ಆಫ್ರಿಕಾ vs ಭಾರತ, ಸೇಂಟ್ ಜಾರ್ಜ್ ಪಾರ್ಕ್.

ಏಕದಿನ ಸರಣಿ

ಮೊದಲ ಏಕದಿನ ಪಂದ್ಯ: ಡಿಸೆಂಬರ್ 16: ಬೋಲ್ಯಾಂಡ್ ಪಾರ್ಕ್, ಪಾರ್ಲ್.

2ನೇ ಏಕದಿನ ಪಂದ್ಯ: ಡಿಸೆಂಬರ್ 19: ನ್ಯೂಲ್ಯಾಂಡ್ಸ್, ಕೇಪ್ ಟೌನ್.

3ನೇ ಏಕದಿನ ಪಂದ್ಯ: ಡಿಸೆಂಬರ್ 22: ಮಂಗಾಂಗ್ ಓವಲ್, ಬ್ಲೋಮ್‌ಫಾಂಟೈನ್.

T20I ಸರಣಿ

ಮೊದಲ T20I: ಡಿಸೆಂಬರ್ 26: ವಿಲ್ಲೋಮೂರ್ ಪಾರ್ಕ್, ಬೆನೋನಿ.

2ನೇ T20I: ಡಿಸೆಂಬರ್ 29: NWC ಓವಲ್, ಪೊಚೆಫ್‌ಸ್ಟ್ರೂಮ್.

3ನೇ T20I: ಡಿಸೆಂಬರ್ 30: NWC ಓವಲ್, ಪೊಚೆಫ್‌ಸ್ಟ್ರೂಮ್.