ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಮತ್ತೆ ಸಕ್ರಿಯಗೊಂಡ ಭಾರತೀಯ ಕುಸ್ತಿ ಸಂಸ್ಥೆ; ಸಂಭ್ರಮದಲ್ಲಿ ಕುಸ್ತಿಪಟುಗಳು

ಮಾ. 25ರಿಂದ 30ರ ವರೆಗೆ ಜೋರ್ಡಾನ್‌ನ ಅಮ್ಮಾನ್‌ನಲ್ಲಿ ನಡೆಯಲಿರುವ ಏಷ್ಯಾ ಕುಸ್ತಿ ಚಾಂಪಿಯನ್‌ಶಿಪ್‌ಗೆ ಅರ್ಹತಾ ಕೂಟ ನಡೆಸಲು ದಿನಾಂಕ ಘೋಷಿಸಿದೆ. ನವದೆಹಲಿಯ ಇಂದಿರಾ ಗಾಂಧಿ ಕ್ರೀಡಾ ಸಂಕೀರ್ಣದಲ್ಲಿ ನಡೆಯುವ ಅರ್ಹತಾ ಹಂತದಲ್ಲಿ ಪುರುಷರ ಫ್ರೀಸ್ಟೈಲ್‌, ಮಹಿಳಾ ಕುಸ್ತಿ, ಗ್ರೀಕೋ ರೋಮನ್‌ ವಿಭಾಗಕ್ಕೆ ಸ್ಪರ್ಧಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಸಕ್ರಿಯಗೊಂಡ ಭಾರತೀಯ ಕುಸ್ತಿ ಸಂಸ್ಥೆ; ಸಂಭ್ರಮದಲ್ಲಿ ಕುಸ್ತಿಪಟುಗಳು

Profile Abhilash BC Mar 13, 2025 9:01 AM

ನವದೆಹಲಿ 15 ತಿಂಗಳುಗಳಿಂದ ಅಮಾನತಾಗಿದ್ದ ಭಾರತೀಯ ಕುಸ್ತಿ ಸಂಸ್ಥೆ (WFI) ಮತ್ತೆ ಸಕ್ರಿಯವಾಗಿದೆ. ಎಡರು ದಿನಗಳ ಹಿಂದಷ್ಟೇ ಕೇಂದ್ರ ಕ್ರೀಡಾ ಸಚಿವಾಲಯ(Wrestling Federation of India)ತಕ್ಷಣಕ್ಕೆ ಜಾರಿಗೆ ಬರುವಂತೆ ನಿಷೇಧ ತೆರವುಗೊಳಿಸಿತ್ತು. ಇದೀಗ ಮಾ. 25ರಿಂದ 30ರ ವರೆಗೆ ಜೋರ್ಡಾನ್‌ನ ಅಮ್ಮಾನ್‌ನಲ್ಲಿ ನಡೆಯಲಿರುವ ಏಷ್ಯಾ ಕುಸ್ತಿ ಚಾಂಪಿಯನ್‌ಶಿಪ್‌(Asian Wrestling Championships)ಗೆ ಅರ್ಹತಾ ಕೂಟ ನಡೆಸಲು ದಿನಾಂಕ ಘೋಷಿಸಿದೆ. ನವದೆಹಲಿಯ ಇಂದಿರಾ ಗಾಂಧಿ ಕ್ರೀಡಾ ಸಂಕೀರ್ಣದಲ್ಲಿ ನಡೆಯುವ ಅರ್ಹತಾ ಹಂತದಲ್ಲಿ ಪುರುಷರ ಫ್ರೀಸ್ಟೈಲ್‌, ಮಹಿಳಾ ಕುಸ್ತಿ, ಗ್ರೀಕೋ ರೋಮನ್‌ ವಿಭಾಗಕ್ಕೆ ಸ್ಪರ್ಧಿಗಳನ್ನು ಆಯ್ಕೆ ಮಾಡಲಾಗುತ್ತದೆ.

2023ರ ಡಿ. 24ರಂದು ಕುಸ್ತಿ ಸಂಸ್ಥೆಯನ್ನು ಅಮಾನತು ಮಾಡಲಾಗಿತ್ತು. ಇದೀಗ ಕುಸ್ತಿ ಸಂಸ್ಥೆಯ ಕಚೇರಿಯನ್ನು ಮಾಜಿ ಅಧ್ಯಕ್ಷ, ಬೃಜ್‌ಭೂಷಣ್‌ ಶರಣ್‌ ಸಿಂಗ್‌ಗೆ ಸಂಬಂಧಿಸಿದ ಕಟ್ಟಡದಿಂದ ಪ್ರತ್ಯೇಕ ಸ್ಥಳಕ್ಕೆ ರವಾನಿಸಲಾಗಿದೆ. ಇತರ ಆಡಳಿತಾತ್ಮಕ ಸುಧಾರಣೆ ಮಾಡಲಾಗಿದೆ.

ಕ್ರೀಡಾ ಸಂಹಿತೆಗೆ ಅನುಗುಣವಾಗಿ ಮತ್ತು ಕ್ರೀಡಾಪಟುಗಳನ್ನು ಕಿರುಕುಳ ಮತ್ತು ನಿಂದನೆಯಿಂದ ರಕ್ಷಿಸುವ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ ನೀತಿಗಳಿಗೆ ಹಾಗೂ ಉತ್ತಮ ಆಡಳಿತದ ತತ್ವಗಳಿಗೆ ಮತ್ತು ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳ ತಡೆಗಟ್ಟುವಿಕೆ ಕಾಯ್ದೆ, 2013 ಕ್ಕೆ ಅನುಗುಣವಾಗಿ, ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಹಿಂದಿನ ಐಒಎ ನೇಮಿಸಿದ ತಾತ್ಕಾಲಿಕ ಸಮಿತಿಯು ತೆಗೆದುಕೊಂಡ ಎಲ್ಲಾ ನಿರ್ಧಾರಗಳನ್ನು ರದ್ದುಗೊಳಿಸಲಾಗಿದೆ.

ಇದನ್ನೂ ಓದಿ ಭಾರತೀಯ ಕುಸ್ತಿ ಒಕ್ಕೂಟದ ಅಮಾನತು ರದ್ದುಪಡಿಸಿದ ಕ್ರೀಡಾ ಸಚಿವಾಲಯ

ಭಾರತ ಕ್ರಿಕೆಟ್‌ ತಂಡದ ಮಾಜಿ ಆಲ್‌ರೌಂಡರ್‌ ಸೈಯದ್‌ ಅಬಿದ್‌ ಅಲಿ ವಿಧಿವಶ!

ಭಾರತದ ಮಾಜಿ ಆಲ್‌ರೌಂಡರ್ ಸೈಯದ್ ಅಬಿದ್ ಅಲಿ ದೀರ್ಘಕಾಲದ ಅನಾರೋಗ್ಯದ ಕಾರಣ ಬುಧವಾರ ನಿಧನ ಹೊಂದಿದರು. ಅವರಿಗೆ 83 ವರ್ಷ ವಯಸ್ಸಾಗಿತ್ತು. ಅಬಿದ್ ಅಲಿ ಹೈದರಾಬಾದ್‌ನ ಪ್ರಸಿದ್ಧ ಕ್ರಿಕೆಟಿಗರಾದ ಎಂಎಕೆ ಪಟೌಡಿ, ಎಂ.ಎಲ್. ಜೈಸಿಂಹ ಮತ್ತು ಅಬ್ಬಾಸ್ ಅಲಿ ಬೇಗ್ ಅವರ ಗುಂಪಿಗೆ ಅಬಿದ್‌ ಅಲಿ ಕೂಡ ಸೇರ್ಪಡೆಯಾಗುತ್ತಾರೆ. ಅವರು ಅಮೆರಿಕದಲ್ಲಿ ನಿಧನರಾಗಿದ್ದಾರೆ. ಅಬಿದ್ ಅಲಿಯವರ ನಿಧನದ ಸುದ್ದಿಯನ್ನು ನಾರ್ತ್ ಅಮೇರಿಕನ್ ಕ್ರಿಕೆಟ್ ಲೀಗ್ (NACL) ಹಂಚಿಕೊಂಡಿದೆ.

1967ರಲ್ಲಿ ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ

1967ರ ಡಿಸೆಂಬರ್‌ನಲ್ಲಿ ಅಡಿಲೇಡ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಅಬಿದ್ ಅಲಿ ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು ಮತ್ತು ಪ್ರಥಮ ಇನಿಂಗ್ಸ್‌ನಲ್ಲಿ 55ಕ್ಕೆ ತಮ್ಮ ವೃತ್ತಿಜೀವನದ ಅತ್ಯುತ್ತಮ 6 ವಿಕೆಟ್ ಪಡೆದರು. ಅದೇ ಸರಣಿಯಲ್ಲಿ ಅವರು ಸಿಡ್ನಿ ಟೆಸ್ಟ್‌ನಲ್ಲಿ 78 ಮತ್ತು 81 ರನ್‌ಗಳನ್ನು ಗಳಿಸುವ ಮೂಲಕ ತಮ್ಮ ಬ್ಯಾಟಿಂಗ್ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದರು.

1967 ರಿಂದ 1974 ರವರೆಗೆ ಭಾರತ ಪರ 29 ಟೆಸ್ಟ್ ಪಂದ್ಯಗಳನ್ನು ಆಡಿರುವ ಅಬಿದ್ ಅಲಿ, 1018 ರನ್ ಗಳಿಸಿ 47 ವಿಕೆಟ್ ಪಡೆದಿದ್ದಾರೆ. ಅವರು ವಿಕೆಟ್‌ಗಳ ನಡುವೆ ವೇಗವಾಗಿ ಓಡುವುದಕ್ಕೆ ಹೆಸರುವಾಸಿಯಾಗಿದ್ದರು ಮತ್ತು ಅವರ ಕಾಲದ ಅತ್ಯುತ್ತಮ ಕ್ಷೇತ್ರರಕ್ಷಣೆಗಾರರಲ್ಲಿ ಒಬ್ಬರಾಗಿದ್ದರು.