IPL 2025: ಐಪಿಎಲ್ ಆಡಲು ಸಜ್ಜಾದ ನಿತೀಶ್ ಕುಮಾರ್ ರೆಡ್ಡಿ
Nitish Kumar Reddy: 21 ವರ್ಷದ ನಿತೀಶ್ ಕುಮಾರ್ ಅವರನ್ನು ಕಳೆದ ಮೆಗಾ ಹಾರಾಜಿನಲ್ಲಿ ಹೈದರಾಬಾದ್ ತಂಡ 6 ಕೋಟಿ ನೀಡಿ ರೀಟೈನ್ ಮಾಡಿತ್ತು. ಒಟ್ಟು 13 ಐಪಿಎಲ್ ಪಂದ್ಯ ಆಡಿರುವ ಅವರು,143ರ ಸ್ಟ್ರೈಕ್‌ರೇಟ್‌ನಲ್ಲಿ 303 ರನ್ ಸಿಡಿಸಿದ್ದಾರೆ.


ಹೈದರಾಬಾದ್: ಬ್ಯಾಟಿಂಗ್ ಆಲ್‌ರೌಂಡರ್ ನಿತೀಶ್ ಕುಮಾರ್ ರೆಡ್ಡಿ(Nitish Kumar Reddy) ಅವರು ಗಾಯದಿಂದ ಚೇತರಿಸಿಕೊಂಡಿದ್ದು, ಐಪಿಎಲ್‌ನಲ್ಲಿ(IPL 2025) ಆಡಲು ಸಜ್ಜಾಗಿದ್ದಾರೆ. ಸನ್‌ರೈಸರ್ಸ್ ಹೈದರಾಬಾದ್ (SRH) ತಂಡದ ಆಟಗಾರನಾಗಿರುವ ಅವರು ಇನ್ನೆರಡು ದಿನಗಳಲ್ಲಿ ತಂಡವನ್ನು ಕೂಡಿಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ. 'ನಿತೀಶ್ ಕುಮಾರ್ ಯೋ-ಯೋ ಟೆಸ್ಟ್ ಸೇರಿದಂತೆ ಎಲ್ಲಾ ಫಿಟ್‌ನೆಸ್ ಪರೀಕ್ಷೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಐಪಿಎಲ್‌ನಲ್ಲಿ ಆಡಲು ಅವರಿಗೆ ಫಿಸಿಯೊ ಅನುಮತಿ ನೀಡಿದ್ದಾರೆ' ಎಂದು ಎಸ್‌ಆರ್‌ಎಚ್ ತಂಡದ ಅಧಿಕಾರಿಯೊಬ್ಬರು ಮಾಹಿತಿ ನೀಡಿರುವುದಾಗಿ ವರದಿಯಾಗಿದೆ.
ಇದೇ ವರ್ಷದ ಜನವರಿಯಲ್ಲಿ ಇಂಗ್ಲೆಂಡ್ ವಿರುದ್ಧ ನಡೆದಿದ್ದ ಟಿ20 ಪಂದ್ಯದಲ್ಲಿ ಕಣಕ್ಕಿಳಿದಿದ್ದ ನಿತೀಶ್, ಫೀಲ್ಡಿಂಗ್ ವೇಳೆ ಗಾಯದ ಸಮಸ್ಯೆಗೆ ತುತ್ತಾಗಿದ್ದರು. ಈ ಪಂದ್ಯದಲ್ಲಿ ಬ್ಯಾಟಿಂಗ್ ಮಾಡಿರಲಿಲ್ಲ. ಐದು ಪಂದ್ಯಗಳ ಸರಣಿಯ ಎರಡನೇ ಪಂದ್ಯಕ್ಕಾಗಿ ನೆಟ್ಸ್‌ನಲ್ಲಿ ಅಭ್ಯಾಸ ನಡೆಸಿದ್ದರೂ, ಕಣಕ್ಕಿಳಿಯಲು ಸಾಧ್ಯವಾಗಿರಲಿಲ್ಲ. ಹೀಗಾಗಿ, ತಂಡದಿಂದಲೇ ಹೊರಗುಳಿದಿದ್ದರು. ಇದೀಗ ಸಂಪೂರ್ಣ ಚೇತರಿಕೆ ಕಂಡು ಐಪಿಎಲ್‌ನಲ್ಲಿ ಬ್ಯಾಟ್ ಬೀಸಲು ರೆಡಿಯಾಗಿದ್ದಾರೆ. ಕಳೆದ ಆಸ್ಟ್ರೇಲಿಯಾ ಪ್ರವಾಸದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ 114 ರನ್ ಬಾರಿಸಿ ಮಿಂಚಿದ್ದರು.
ಇದನ್ನೂ ಓದಿ IPL 2025: ಬುಮ್ರಾ, ಹಾರ್ದಿಕ್ ಔಟ್! ಸಿಎಸ್‌ಕೆ ಪಂದ್ಯಕ್ಕೆ ಮುಂಬೈ ಇಂಡಿಯನ್ಸ್ ಸಂಭಾವ್ಯ ಪ್ಲೇಯಿಂಗ್ XI
21 ವರ್ಷದ ನಿತೀಶ್ ಕುಮಾರ್ ಅವರನ್ನು ಕಳೆದ ಮೆಗಾ ಹಾರಾಜಿನಲ್ಲಿ ಹೈದರಾಬಾದ್ ತಂಡ 6 ಕೋಟಿ ನೀಡಿ ರೀಟೈನ್ ಮಾಡಿತ್ತು. ಒಟ್ಟು 13 ಐಪಿಎಲ್ ಪಂದ್ಯ ಆಡಿರುವ ಅವರು,143ರ ಸ್ಟ್ರೈಕ್‌ರೇಟ್‌ನಲ್ಲಿ 303 ರನ್ ಸಿಡಿಸಿದ್ದಾರೆ. ಕಳೆದ ಬಾರಿಯ ರನ್ನರ್ ಅಪ್ ಹೈದರಾಬಾದ್ ತಂಡ ಈ ಬಾರಿ ತನ್ನ ಮೊದಲ ಪಂದ್ಯವನ್ನು ರಾಜಸ್ಥಾನ ರಾಯಲ್ಸ್ ಎದುರು ಆಡಲಿದೆ. ಈ ಪಂದ್ಯ ಮಾರ್ಚ್ 23ರಂದು ನಡೆಯಲಿದೆ.
ಹೈದರಾಬಾದ್ ತಂಡ
ಪ್ಯಾಟ್ ಕಮ್ಮಿನ್ಸ್ (ನಾಯಕ), ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ, ಹೆನ್ರಿಚ್ ಕ್ಲಾಸೆನ್, ನಿತೀಶ್ ರೆಡ್ಡಿ, ಇಶಾನ್ ಕಿಶನ್, ಮೊಹಮ್ಮದ್ ಶಮಿ, ಹರ್ಷಲ್ ಪಟೇಲ್, ರಾಹುಲ್ ಚಾಹರ್, ಆಡಮ್ ಜಂಪಾ, ಅಥರ್ವ ಟೈಡೆ, ಅಭಿನವ್ ಮನೋಹರ್, ಸಿಮರ್ಜೀತ್ ಸಿಂಗ್, ಜೀಶನ್ ಅನ್ಸಾರಿ, ಜಯದೇವ್ ಉನದ್ಕತ್, ಕಾಮಿಂದು ಮೆಂಡಿಸ್, ಅನಿಕೇತ್ ವರ್ಮಾ, ಈಶಾನ್ ಮಾಲಿಂಗ, ಸಚಿನ್ ಬೇಬಿ.