ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IPL 2025: ಐಪಿಎಲ್‌ನಲ್ಲಿ 4 ಸಾವಿರ ರನ್‌ ಪೂರೈಸಿ ಎಲೈಟ್‌ ಪಟ್ಟಿ ಸೇರಿದ ಬಟ್ಲರ್‌

ಗುಜರಾತ್‌ ಟೈಟಾನ್ಸ್‌ ವಿರುದ್ಧ 38 ರನ್‌ ಅಂತರದ ಸೋಲು ಕಂಡ ಪ್ಯಾಟ್ ಕಮಿನ್ಸ್ ನಾಯಕತ್ವದ ಸನ್‌ರೈಸರ್ಸ್‌ ಹೈದರಾಬಾದ್ ತಂಡದ ಪ್ಲೇ ಆಫ್‌ ಪ್ರವೇಶದ ಹಾದಿ ಬಹುತೇಕ ಕೊನೆಗೊಂಡಿತು. ಹೈದರಾಬಾದ್ ತಂಡವು ಹೋದ ವರ್ಷದ ಆವೃತ್ತಿಯಲ್ಲಿ ಫೈನಲ್ ಪ್ರವೇಶಿಸಿತ್ತು.

ಅಹಮದಾಬಾದ್‌: ಸನ್‌ರೈಸರ್ಸ್‌ ಹೈದರಾಬಾದ್‌(GT vs SRH) ವಿರುದ್ದ ಅಮೋಘ ಬ್ಯಾಟಿಂಗ್‌ ನಡೆಸಿ ಅರ್ಧಶತಕ ಬಾರಿಸಿದ ಜಾಸ್‌ ಬಟ್ಲರ್‌(Jos Buttler) ಅವರು ಐಪಿಎಲ್‌(IPL 2025)ನಲ್ಲಿ 4 ಸಾವಿರ ರನ್‌ ಪೂರ್ಣಗೊಳಿಸಿದರು. ಈ ಸಾಧನೆ ಮಾಡಿದ ಇಂಗ್ಲೆಂಡ್‌ನ ಮೊದಲ ಆಟಗಾರ ಎಂಬ ದಾಖಲೆ ಬರೆದರು. ಜತೆಗೆ ಅತಿ ಕಡಿಮೆ ಇನಿಂಗ್ಸ್‌ನಲ್ಲಿ ಈ ಸಾಧನೆ ಮಾಡಿದ ನಾಲ್ಕನೇ ಬ್ಯಾಟರ್‌ ಎನಿಸಿಕೊಂಡರು. ಕೆ.ಎಲ್‌ ರಾಹುಲ್‌(105), ಕ್ರಿಸ್‌ ಗೇಲ್‌(112) ಮತ್ತು ಡೇವಿಡ್‌ ವಾರ್ನರ್‌ ಮೊದಲ ಮೂರು ಸ್ಥಾನದಲ್ಲಿದ್ದಾರೆ. ಬಟ್ಲರ್‌ 116 ಇನಿಂಗ್ಸ್‌ ಆಡಿ ಈ ಮೈಲಿಗಲ್ಲು ತಲುಪಿದ್ದಾರೆ.

ನರೇಂದ್ರ ಮೋದಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದಿದ್ದ ಪಂದ್ಯದಲ್ಲಿ ಟಾಸ್ ಗೆದ್ದ ಸನ್‌ರೈಸರ್ಸ್‌ ಹೈದರಾಬಾದ್‌ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಗುಜರಾತ್‌ ತಂಡ ನಾಯಕ ಶುಭಮನ್‌ ಗಿಲ್‌ ಮತ್ತು ಜಾಸ್‌ ಬಟ್ಲರ್‌ ಅವರ ಅರ್ಧಶತಕದ ನೆರವಿನಿಂದ 6 ವಿಕೆಟ್‌ಗೆ 224 ರನ್‌ ಪೇರಿಸಿತು. ಜವಾಬಿತ್ತ ಹೈದರಾಬಾದ್‌ 6 ವಿಕೆಟ್‌ಗೆ 186 ರನ್‌ ಗಳಿಸಲಷ್ಟೇ ಶಕ್ತವಾಗಿ ಸೋಲೊಪ್ಪಿಕೊಂಡಿತು. ಪ್ಯಾಟ್ ಕಮಿನ್ಸ್ ನಾಯಕತ್ವದ ಹೈದರಾಬಾದ್ ತಂಡದ ಪ್ಲೇ ಆಫ್‌ ಪ್ರವೇಶದ ಹಾದಿ ಬಹುತೇಕ ಕೊನೆಗೊಂಡಿತು. ಹೈದರಾಬಾದ್ ತಂಡವು ಹೋದ ವರ್ಷದ ಆವೃತ್ತಿಯಲ್ಲಿ ಫೈನಲ್ ಪ್ರವೇಶಿಸಿತ್ತು.

ಬಟ್ಲರ್‌ 37 ಎಸೆತಗಳಿಂದ 64 ರನ್ ಬಾರಿಸಿದರು. ಅವರ ಈ ಬ್ಯಾಟಿಂಗ್‌ ಇನಿಂಗ್ಸ್‌ನಲ್ಲಿ 4 ಸಿಕ್ಸರ್‌ ಮತ್ತು 3 ಬೌಂಡರಿ ಒಳಗೊಂಡಿತ್ತು. ಹಾಲಿ ಆವೃತ್ತಿಯಲ್ಲಿ ಬಟ್ಲರ್‌ 5 ಅರ್ಧಶತಕ ಬಾರಿಸಿದ್ದಾರೆ.

ಇದನ್ನೂ ಓದಿ IPL 2025 Points Table: ಗುಜರಾತ್‌ ಗೆಲುವಿನಿಂದ ಅಂಕಪಟ್ಟಿಯಲ್ಲಿ ಕುಸಿತ ತಂಡ ಆರ್‌ಸಿಬಿ

ಇದೇ ಪಂದ್ಯದಲ್ಲಿ 48 ರನ್‌ ಬಾರಿಸಿದ ಸಾಯಿ ಸರ್ದರ್ಶನ್‌ ಟಿ20 ಕ್ರಿಕೆಟ್‌ನಲ್ಲಿ ಅತಿ ವೇಗವಾಗಿ 2 ಸಾವಿರ ರನ್‌ ಪೂರ್ತಿಗೊಳಿಸಿದ ಭಾರತದ ಮೊದಲ ಹಾಗೂ ವಿಶ್ವದ ಎರಡನೇ ಆಟಗಾರ ಎಂಬ ದಾಖಲೆ ನಿರ್ಮಿಸಿದರು. ಈ ವೇಳೆ ದಿಗ್ಗಜ ಸಚಿನ್‌ ತೆಂಡೂಲ್ಕರ್‌(Sachin Tendulkar) ಅವರ ದಾಖಲೆಯೊಂದನ್ನು ಮುರಿದರು. ಸಚಿನ್‌ 59 ಇನಿಂಗ್ಸ್‌ನಲ್ಲಿ ಈ ದಾಖಲೆ ಬರೆದಿದ್ದರೆ, ಸುದರ್ಶನ್‌ 54 ಇನಿಂಗ್ಸ್‌ನಲ್ಲಿ ಈ ಮೈಲಿಗಲ್ಲು ತಲುಪಿದ್ದಾರೆ. ವಿಶ್ವ ದಾಖಲೆ ಶಾನ್‌ ಮಾರ್ಷ್‌ (53 ಇನಿಂಗ್ಸ್‌) ಹೆಸರಿನಲ್ಲಿದೆ.