ಬೆಂಗಳೂರು: ವಿಶ್ವ ಕ್ರಿಕೆಟ್‌ನಲ್ಲಿ ಅತ್ಯಂತ ಶ್ರೀಮಂತ ಲೀಗ್ ಎಂದು ಕರೆಸಿಕೊಳ್ಳುವ ಐಪಿಎಲ್‌ನ(IPL 2025) 18 ನೇ ಆವೃತ್ತಿ ಇದೇ ಶನಿವಾರ(ಮಾ.22) ದಿಂದ ಆರಂಭವಾಗಲಿದೆ. ಈಗಾಗಲೇ ಟೂರ್ನಿಗಾಗಿ 10 ಫ್ರಾಂಚೈಸಿಗಳು ಬಲಿಷ್ಠ ತಂಡವನ್ನು ಸಜ್ಜುಗೊಳಿಸಿ, ಟೂರ್ನಿಯಲ್ಲಿ ಕಣಕ್ಕಿಳಿಯಲು ಕಾತರದಿಂದ ಕಾಯುತ್ತಿದೆ. ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೆಕೆಆರ್ ಮತ್ತು ಆರ್‌ಸಿಬಿ(KKR vs RCB) ಮುಖಾಮುಖಿಯಾಗಲಿವೆ. ಟೂರ್ನಿಯ ಆರಂಭಕ್ಕೂ ಮುನ್ನ ಇದುವರೆಗಿನ ಟೂರ್ನಿಯ ಇತಿಹಾಸದಲ್ಲಿ ಅತಿ ಹೆಚ್ಚು(most catches taken in IPL) ಕ್ಯಾಚ್ ಪಡೆದ ಟಾಪ್ 5 ಫೀಲ್ಡರ್ ಯಾರೆಂಬ ಮಾಹಿತಿ ಇಲ್ಲಿದೆ.
ವಿರಾಟ್ ಕೊಹ್ಲಿ
ಐಪಿಎಲ್ ಆರಂಭದಿಂದಲೂ ಆರ್‌ಸಿಬಿ ಏಕೈಕ ಫ್ರಾಂಚೈಸಿ ಪರ ಆಡುತ್ತಿರುವ ಕಿಂಗ್ ಖ್ಯಾತಿಯ ವಿರಾಟ್ ಕೊಹ್ಲಿ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಕ್ಯಾಚ್ ಪಡೆದ ಸಾಧಕರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. 252* ಪಂದ್ಯಗಳನ್ನಾಡಿ 114 ಕ್ಯಾಚ್‌ಗಳನ್ನು ಹಿಡಿದಿದ್ದಾರೆ.
ಸುರೇಶ್ ರೈನಾ
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ಆಟಗಾರ ಸುರೇಶ್ ರೈನಾ ಅವರು ಈ ಯಾದಿಯಲ್ಲಿ ದ್ವಿತೀಯ ಸ್ಥಾನದಲ್ಲಿದ್ದಾರೆ. ರೈನಾ 205 ಪಂದ್ಯವನ್ನಾಡಿ 109 ಕ್ಯಾಚ್ ಹಿಡಿದಿದ್ದಾರೆ. ಎಲ್ಲ ಮಾದರಿಯ ಕ್ರಿಕೆಟ್‌ನಿಂದ ನೀವೃತ್ತಿಯಾಗಿರುವ ರೈನಾ ಕಾಮೆಂಟ್ರಿ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ.
ಕೈರನ್ ಪೊಲಾರ್ಡ್
ವೆಸ್ಟ್ ಇಂಡೀಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡದ ಮಾಜಿ ಆಲ್‌ರೌಂಡರ್ ಕೈರನ್ ಪೊಲಾರ್ಡ್ ಅವರು ಐಪಿಎಲ್‌ನಲ್ಲಿ ಅತಿ ಹೆಚ್ಚು ಕ್ಯಾಚ್ ಪಡೆದವರ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದಿದ್ದಾರೆ. 189 ಪಂದ್ಯಗಳಿಂದ 103 ಕ್ಯಾಚ್ ಹಿಡಿದಿದ್ದಾರೆ.
ರವೀಂದ್ರ ಜಡೇಜಾ
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸ್ಟಾರ್ ಆಲ್‌ರೌಂಡರ್ ರವೀಂದ್ರ ಜಡೇಜಾ ಅವರು 103* ಕ್ಯಾಚ್‌ಗಳನ್ನು ಹಿಡಿದು ಸದ್ಯ ನಾಲ್ಕನೇ ಸ್ಥಾನದಲ್ಲಿದ್ದಾರೆ. ಈ ಆವೃತ್ತಿಯಲ್ಲಿ ಒಂದು ಕ್ಯಾಚ್ ಹಿಡಿದರೆ ಪೊಲಾರ್ಡ್ ಹಿಂದಿಕ್ಕಿ ಮೂರನೇ ಸ್ಥಾನಕ್ಕೇರಳಿದ್ದಾರೆ. 7 ಕ್ಯಾಚ್ ಹಿಡಿದರೆ ರೈನಾ ದಾಖಲೆ ಕೂಡ ಪತನಗೊಳ್ಳಲಿದೆ. ಆಗ ಜಡೇಜಾ 2ನೇ ಸ್ಥಾನಕ್ಕೇರಲಿದ್ದಾರೆ.
ರೋಹಿತ್ ಶರ್ಮ
ಮುಂಬೈ ಇಂಡಿಯನ್ಸ್ ತಂಡದ ಮಾಜಿ ನಾಯಕ ರೋಹಿತ್ ಶರ್ಮ ಅವರು ಇದುವರೆಗೆ 101* ಕ್ಯಾಚ್‌ಗಳನ್ನು ಹಿಡಿದು ಸದ್ಯ 5ನೇ ಸ್ಥಾನದಲ್ಲಿದ್ದಾರೆ. ಈ ಆವೃತ್ತಿಯಲ್ಲಿ ಅವರು ಕನಿಷ್ಠ 10 ಕ್ಯಾಚ್‌ಗಳನ್ನು ಹಿಡೆದರೆ ಕೆಲವು ಆಟಗಾರರ ದಾಖಲೆ ಮುರಿಯುವ ಅವಕಾಶವಿದೆ.