ಬೆಂಗಳೂರು: ಮಂಗಳವಾರ ನಡೆದಿದ್ದ ಗುಜರಾತ್ ಟೈಟಾನ್ಸ್ ಮತ್ತು ಪಂಜಾಬ್ ಕಿಂಗ್ಸ್ ನಡುವಣ ಪಂದ್ಯದೊಂದಿಗೆ 18ನೇ ಆವೃತ್ತಿಯ ಐಪಿಎಲ್(IPL 2025)ನಲ್ಲಿ ಎಲ್ಲಾ ತಂಡಗಳು ತಲಾ ಒಂದು ಲೀಗ್ ಪಂದ್ಯವನ್ನು ಆಡಿದಂತಾಯಿತು. ಇದೀಗ ಅಂಕಪಟ್ಟಿಯ(IPL 2025 Points Table) ರೇಸ್ ಆರಂಭವಾಗಿದೆ. ಸದ್ಯ ಸನ್‌ರೈಸರ್ಸ್ ಹೈದರಾಬಾದ್(Sunrisers Hyderabad) ತಂಡ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. ಆರ್‌ಸಿಬಿ(RCB) ದ್ವಿತೀಯ, ಪಂಜಾಬ್ ಕಿಂಗ್ಸ್ ಮೂರನೇ ಸ್ಥಾನದಲ್ಲಿದೆ.
ಲೀಗ್ ಹಂತದಲ್ಲಿ ಅಗ್ರ-2 ಸ್ಥಾನ ಪಡೆದ ತಂಡಗಳು ಕ್ವಾಲಿಫೈರ್-1 ಪ್ರವೇಶಿಸಲಿದ್ದು, ಅದರಲ್ಲಿ ಗೆದ್ದ ತಂಡ ನೇರವಾಗಿ ಫೈನಲ್‌ಗೇರಲಿದೆ. 3 ಮತ್ತು 4ನೇ ಸ್ಥಾನ ಪಡೆದ ತಂಡಗಳು ಎಲಿಮಿನೇಟರ್‌ನಲ್ಲಿ ಮುಖಾಮುಖಿಯಾಗಲಿವೆ. ಅದರಲ್ಲಿ ಗೆದ್ದ ತಂಡ ಕ್ವಾಲಿಫೈರ್-1ರಲ್ಲಿ ಸೋತ ತಂಡದ ವಿರುದ್ಧ ಆಡಬೇಕು. ಗೆದ್ದ ತಂಡ ಫೈನಲ್‌ಗೇರಲಿದೆ. ಅಗ್ರ-2 ಸ್ಥಾನ ಪಡೆಯಲು ಈಗಾಗಲೇ ತಂಡಗಳ ಮಧ್ಯೆ ಪೈಪೋಟಿ ಏರ್ಪಟ್ಟಿದೆ. ಗೆಲುವೊಂದೆ ಸಾಲದು ಉತ್ತಮ ರನ್ ರೇಟ್ ಕೂಡ ಇಲ್ಲಿ ಮುಖ್ಯವಾಗಿರುತ್ತದೆ.
ಅಂಕಪಟ್ಟಿ
ತಂಡ | ಪಂದ್ಯ | ಗೆಲುವು | ಸೋಲು | ಅಂಕ | ರನ್‌ರೇಟ್ |
ಸನ್‌ರೈಸರ್ಸ್ | 1 | 1 | 0 | 2 | +2.200 |
ಆರ್‌ಸಿಬಿ | 1 | 1 | 0 | 2 | +2.137 |
ಪಂಜಾಬ್ | 1 | 1 | 0 | 2 | +0.550 |
ಚೆನ್ನೈ | 1 | 1 | 0 | 2 | +0.493 |
ಡೆಲ್ಲಿ | 1 | 1 | 0 | 2 | +0.371 |
ಲಕ್ನೋ | 1 | 0 | 1 | 0 | -0.371 |
ಮುಂಬೈ | 1 | 0 | 1 | 0 | -0.493 |
ಗುಜರಾತ್ | 1 | 0 | 1 | 0 | -0.550 |
ಕೋಲ್ಕತಾ | 1 | 0 | 1 | 0 | -2.137 |
ರಾಜಸ್ಥಾನ್ | 1 | 0 | 1 | 0 | -2.200 |