ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IPL 2025: ಸಚಿನ್‌ ತೆಂಡೂಲ್ಕರ್‌ ಐಪಿಎಲ್‌ ದಾಖಲೆ ಮುರಿದ ಜೈಸ್ವಾಲ್‌

ಸಚಿನ್‌ ತೆಂಡೂಲ್ಕರ್‌ 63 ಇನಿಂಗ್ಸ್‌ನಲ್ಲಿ ಈ ದಾಖಲೆ ನಿರ್ಮಿಸಿದ್ದರು. ಇದೀಗ ಜೈಸ್ವಾಲ್‌ 62 ಇನಿಂಗ್ಸ್‌ನಲ್ಲಿ ಈ ಗುರಿ ತಲುಪಿ ಸಚಿನ್‌ ಅವರನ್ನು ಹಿಂದಿಕ್ಕಿದ್ದಾರೆ. ಭಾರತೀಯ ದಾಖಲೆ ಋತುರಾಜ್‌ ಗಾಯಕ್ವಾಡ್‌(57 ಇನಿಂಗ್ಸ್‌) ಹೆಸರಿನಲ್ಲಿದೆ. ಕನ್ನಡಿಗ ಕೆ.ಎಲ್‌ ರಾಹುಲ್‌(60 ಇನಿಂಗ್ಸ್‌) ದ್ವಿತೀಯ ಸ್ಥಾನದಲ್ಲಿದ್ದಾರೆ.

ಜೈಪುರ: ರಾಜಸ್ಥಾನ್‌ ತಂಡದ ಯುವ ಎಡಗೈ ಬ್ಯಾಟರ್‌ ಯಶಸ್ವಿ ಜೈಸ್ವಾಲ್‌(Yashasvi Jaiswal) ಅವರು ಸೋಮವಾರ ನಡೆದಿದ್ದ ಐಪಿಎಲ್‌ನ(IPL 2025) ಗುಜರಾತ್‌ ಟೈಟಾನ್ಸ್‌(RR vs GT) ವಿರುದ್ಧದ ಪಂದ್ಯದಲ್ಲಿ ಅಜೇಯ ಅರ್ಧಶತಕ ಬಾರಿಸುವ ಮೂಲಕ, ದಿಗ್ಗಜ ಸಚಿನ್‌ ತೆಂಡೂಲ್ಕರ್‌(Sachin Tendulkar) ಅವರ ದಾಖಲೆಯೊಂದನ್ನು ಹಿಂದಿಕ್ಕಿದ್ದಾರೆ. ಪಂದ್ಯದಲ್ಲಿ 37 ರನ್‌ ಬಾರಿಸುತ್ತಿದ್ದಂತೆ ಐಪಿಎಲ್‌ನಲ್ಲಿ ಅತಿ ವೇಗವಾಗಿ 2 ಸಾವಿರ ರನ್‌ ಪೂರೈಸಿದ ಭಾರತದ ಮೂರನೇ ಹಾಗೂ ಒಟ್ಟಾರೆಯಾಗಿ 5ನೇ ಬ್ಯಾಟರ್‌ ಎನಿಸಿಕೊಂಡರು. ದಾಖಲೆ ಕ್ರಿಸ್ ಗೇಲ್(48 ಇನಿಂಗ್ಸ್‌) ಹೆಸರಿನಲ್ಲಿದೆ.

ಸಚಿನ್‌ ತೆಂಡೂಲ್ಕರ್‌ 63 ಇನಿಂಗ್ಸ್‌ನಲ್ಲಿ ಈ ದಾಖಲೆ ನಿರ್ಮಿಸಿದ್ದರು. ಇದೀಗ ಜೈಸ್ವಾಲ್‌ 62 ಇನಿಂಗ್ಸ್‌ನಲ್ಲಿ ಈ ಗುರಿ ತಲುಪಿ ಸಚಿನ್‌ ಅವರನ್ನು ಹಿಂದಿಕ್ಕಿದ್ದಾರೆ. ಭಾರತೀಯ ದಾಖಲೆ ಋತುರಾಜ್‌ ಗಾಯಕ್ವಾಡ್‌(57 ಇನಿಂಗ್ಸ್‌) ಹೆಸರಿನಲ್ಲಿದೆ. ಕನ್ನಡಿಗ ಕೆ.ಎಲ್‌ ರಾಹುಲ್‌(60 ಇನಿಂಗ್ಸ್‌) ದ್ವಿತೀಯ ಸ್ಥಾನದಲ್ಲಿದ್ದಾರೆ.

ಐಪಿಎಲ್‌ನಲ್ಲಿ ಅತಿ ವೇಗದ 2 ಸಾವಿರ ರನ್‌

ಕ್ರಿಸ್‌ ಗೇಲ್‌-48 ಇನಿಂಗ್ಸ್‌

ಶಾನ್‌ ಮಾರ್ಷ್‌-52 ಇನಿಂಗ್ಸ್‌

ಋತುರಾಜ್‌ ಗಾಯಕ್ವಾಡ್‌- 57 ಇನಿಂಗ್ಸ್‌

ಕೆ.ಎಲ್‌ ರಾಹುಲ್‌-60 ಇನಿಂಗ್ಸ್‌

ಯಶಸ್ವಿ ಜೈಸ್ವಾಲ್‌- 62 ಇನಿಂಗ್ಸ್‌

ಗುಜರಾತ್‌ ವಿರುದ್ಧದ ಪಂದ್ಯದಲ್ಲಿ 2 ರನ್‌ ಗಳಿಸಿದ್ದ ವೇಳೆ ಜಾಸ್‌ ಬಟ್ಲರ್‌ ಅವರಿಂದ ಕ್ಯಾಚ್‌ ಕೈಚೆಲ್ಲಿ ಜೀವದಾನ ಪಡೆದ ಯಶಸ್ವಿ ಜೈಸ್ವಾಲ್‌ ಈ ಅವಕಾಶವನ್ನು ಎರಡೂ ಕೈಗಳಿಂದ ಬಾಚಿ ಅಮೋಘ ಅಜೇಯ ಅರ್ಧಶತಕ ಬಾರಿಸಿದರು. 40 ಎಸೆತ ಎದುರಿಸಿದ ಜೈಸ್ವಾಲ್‌ 70* ರನ್‌ ಗಳಿಸಿದರು. ಇವರ ಈ ಇನಿಂಗ್ಸ್‌ನಲ್ಲಿ 9 ಬೌಂಡರಿ ಮತ್ತು 2 ಸಿಕ್ಸರ್‌ ಒಳಗೊಂಡಿತ್ತು.



ಸವಾಯಿ ಮಾನ್ಸಿಂಗ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಗುಜರಾತ್‌ 4 ವಿಕೆಟ್‌ ನಷ್ಟಕ್ಕೆ 209 ರನ್‌ ಕಲೆ ಹಾಕಿತು. ಗುರಿ ಬೆನ್ನಟ್ಟಿದ ರಾಜಸ್ಥಾನ್‌ 15.5 ಓವರ್‌ಗಳಲ್ಲಿ ಕೇವಲ 2 ವಿಕೆಟ್‌ಗೆ 212 ರನ್‌ ಬಾರಿಸಿ ಅಧಿಕಾರಯುತ ಗೆಲುವು ದಾಖಲಿಸಿತು. ಈ ಗೆಲುವಿನಿಂದಿಗೆ ರಾಜಸ್ಥಾನ್‌ ತಂಡದ ಪ್ಲೇ-ಆಫ್‌ ಆಸೆ ಜೀವಂತವಾಗಿದೆ.

ಇದನ್ನೂ ಓದಿ IPL 2025: ಸೂರ್ಯವಂಶಿ ಶತಕ ಕಂಡು ವೀಲ್‌ ಚೇರ್‌ನಿಂದ ಎದ್ದು ಸಂಭ್ರಮಿಸಿದ ದ್ರಾವಿಡ್‌