ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಸಂಭಾವ್ಯ ಸನ್‌ರೈಸರ್ಸ್ ಹೈದರಾಬಾದ್ ಪ್ಲೇಯಿಂಗ್ XI ಆಯ್ಕೆ ಮಾಡಿದ ಆಕಾಶ್ ಚೋಪ್ರಾ

IPL 2026: ಚೋಪ್ರಾ ಅವರ ಪ್ರಕಾರ, ಎಸ್‌ಆರ್‌ಎಚ್‌ನ ಬೌಲಿಂಗ್‌ನಲ್ಲಿ ಜಯದೇವ್ ಉನಾದ್ಕತ್, ಹರ್ಷಲ್ ಪಟೇಲ್ ಮತ್ತು ಶಿವಂ ಮಾವಿ ಇರುತ್ತಾರೆ. ಜೀಶನ್ ಅನ್ಸಾರಿ ಅಥವಾ ಶಿವಾಂಗ್ ಕುಮಾರ್ ಸ್ಪಿನ್ನರ್ ಆಗಿರುತ್ತಾರೆ. ಮಾವಿ ಹೊಸ ಚೆಂಡಿನೊಂದಿಗೆ ಬೌಲಿಂಗ್ ಮಾಡಬಹುದು, ಆದರೆ ಹರ್ಷಲ್ ಡೆತ್ ಓವರ್‌ ಕವರ್ ಮಾಡಬಹುದು ಎಂದು ಹೇಳಿದ್ದಾರೆ.

ಹೈದರಾಬಾದ್‌, ಮಾ.22: ಭಾರತದ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ 2026 ರ ಐಪಿಎಲ್(IPL 2026) ಋತುವಿನ ಆರಂಭಕ್ಕೂ ಮುನ್ನ ಸನ್‌ರೈಸರ್ಸ್ ಹೈದರಾಬಾದ್(Sunrisers Hyderabad) ಸಂಭಾವ್ಯ ಆಡುವ XI ಅನ್ನು ಆಯ್ಕೆ ಮಾಡಿದ್ದಾರೆ. ಸನ್‌ರೈಸರ್ಸ್ ಹೈದರಾಬಾದ್ ತಂಡವು ಈ ಋತುವಿನ ಆರಂಭಿಕ ಸುತ್ತುಗಳಲ್ಲಿ ನಾಯಕ ಪ್ಯಾಟ್ ಕಮ್ಮಿನ್ಸ್ ಇಲ್ಲದೆ ಆಡಲಿದೆ. ಅವರು ಪ್ರಸ್ತುತ ಸೊಂಟದ ನೋವಿನ ಸಮಸ್ಯೆಯಿಂದ ಚೇತರಿಕೆ ಕಾಣುತ್ತಿದ್ದಾರೆ. ಅವರ ಅನುಪಸ್ಥಿತಿಯಲ್ಲಿ ಇಶಾನ್‌ ಕಿಶನ್‌ ಹಂಗಾಮಿ ನಾಯಕನಾಗಿದ್ದಾರೆ.

ಹೈದರಾಬಾದ್‌ ತಂಡವು 8ನೇ ಕ್ರಮಾಂಕದವರೆಗೆ ಬಲಿಷ್ಠ ಬ್ಯಾಟಿಂಗ್ ಘಟಕವನ್ನು ಹೊಂದಿದೆ ಎಂದು ಚೋಪ್ರಾ ಅಭಿಪ್ರಾಯಪಟ್ಟಿದ್ದಾರೆ. ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ, ಇಶಾನ್ ಕಿಶನ್, ಹೆನ್ರಿಚ್ ಕ್ಲಾಸೆನ್, ನಿತೀಶ್ ಕುಮಾರ್ ರೆಡ್ಡಿ, ಲಿಯಾಮ್ ಲಿವಿಂಗ್‌ಸ್ಟೋನ್ ಮತ್ತು ಅನಿಕೇತ್ ವರ್ಮಾ ಅವರನ್ನೊಳಗೊಂಡ ಅದ್ಭುತ ಬ್ಯಾಟಿಂಗ್ ಲೈನ್‌ಅಪ್ ಇದೆ. ನಂತರ ಬ್ರೈಡನ್ ಕಾರ್ಸೆ ಇದ್ದಾರೆ ಎಂದು ಚೋಪ್ರಾ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡುತ್ತಾ ಹೇಳಿದರು.

ಚೋಪ್ರಾ ಅವರ ಪ್ರಕಾರ, ಎಸ್‌ಆರ್‌ಎಚ್‌ನ ಬೌಲಿಂಗ್‌ನಲ್ಲಿ ಜಯದೇವ್ ಉನಾದ್ಕತ್, ಹರ್ಷಲ್ ಪಟೇಲ್ ಮತ್ತು ಶಿವಂ ಮಾವಿ ಇರುತ್ತಾರೆ. ಜೀಶನ್ ಅನ್ಸಾರಿ ಅಥವಾ ಶಿವಾಂಗ್ ಕುಮಾರ್ ಸ್ಪಿನ್ನರ್ ಆಗಿರುತ್ತಾರೆ. ಮಾವಿ ಹೊಸ ಚೆಂಡಿನೊಂದಿಗೆ ಬೌಲಿಂಗ್ ಮಾಡಬಹುದು, ಆದರೆ ಹರ್ಷಲ್ ಡೆತ್ ಓವರ್‌ ಕವರ್ ಮಾಡಬಹುದು ಎಂದು ಹೇಳಿದ್ದಾರೆ.

ಐಪಿಎಲ್‌ ಟಿಕೆಟ್‌ ಖರೀದಿಸುವಾಗ ಎಚ್ಚರ: ಬೆಂಗಳೂರು ಸೈಬರ್ ಪೊಲೀಸರ ಮನವಿ

ಲಿಯಾಮ್ ಲಿವಿಂಗ್‌ಸ್ಟೋನ್, ಟ್ರಾವಿಸ್ ಹೆಡ್ ಮತ್ತು ಅಭಿಷೇಕ್ ಶರ್ಮಾ ಅವರಂತಹ ಆಟಗಾರರಿಂದ ಓವರ್‌ಗಳನ್ನು ಪಡೆಯುವ ಮೂಲಕ ಎಸ್‌ಆರ್‌ಎಚ್ ತಮ್ಮ ಆಲ್‌ರೌಂಡರ್‌ಗಳನ್ನು ಹೆಚ್ಚು ಬಳಸಿಕೊಳ್ಳುವ ಅಗತ್ಯವಿದೆ ಎಂದು ಚೋಪ್ರಾ ಹೇಳಿದರು. ಈ ಋತುವಿನಲ್ಲಿ ತಂಡಕ್ಕಾಗಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿ ಇಶಾನ್ ಕಿಶನ್ ಮತ್ತು ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿ ಹರ್ಷಲ್ ಪಟೇಲ್ ಅವರನ್ನು ಗುರುತಿಸಿದ್ದಾರೆ.

ಸನ್‌ರೈಸರ್ಸ್ ಹೈದರಾಬಾದ್ ತಂಡವು ಮಾರ್ಚ್ 28 ರಂದು ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ತನ್ನ ಅಭಿಯಾನವನ್ನು ಆರಂಭಿಸಲಿದೆ.

ಆಕಾಶ್‌ ಚೋಪ್ರಾ ಆರಿಸಿದ ಪ್ಲೇಯಿಂಗ್‌ ಇಲೆವೆನ್‌

ಆರಂಭಿಕರು: ಅಭಿಷೇಕ್ ಶರ್ಮಾ, ಟ್ರಾವಿಸ್ ಹೆಡ್.

ಮಧ್ಯಮ ಕ್ರಮಾಂಕ/ಆಲ್ ರೌಂಡರ್‌ಗಳು: ಇಶಾನ್ ಕಿಶನ್ (ವಿ.ಕೀ.), ಹೆನ್ರಿಚ್ ಕ್ಲಾಸೆನ್, ನಿತೀಶ್ ಕುಮಾರ್ ರೆಡ್ಡಿ, ಲಿಯಾಮ್ ಲಿವಿಂಗ್‌ಸ್ಟೋನ್, ಅನಿಕೇತ್ ವರ್ಮಾ.

ಬೌಲರ್‌ಗಳು: ಪ್ಯಾಟ್ ಕಮ್ಮಿನ್ಸ್ (ನಾಯಕ), ಬ್ರೈಡನ್ ಕಾರ್ಸೆ, ಹರ್ಷಲ್ ಪಟೇಲ್, ಜಯದೇವ್ ಉನದ್ಕತ್, ಜೀಶನ್ ಅನ್ಸಾರಿ/ಶಿವಂಗ್ ಕುಮಾರ್/ಶಿವಂ ಮಾವಿ.