ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಐಪಿಎಲ್‌ ಮಿನಿ ಹರಾಜಿನಲ್ಲಿ ಕರ್ನಾಟಕದ 17 ಆಟಗಾರರು; ಯಾರಿಗೆ ಸಿಗಲಿದೆ ಅದೃಷ್ಟ?

IPL 2026 auction live: ಮಿನಿ ಹರಾಜಿನಲ್ಲಿ ವಿದೇಶಿ ಕ್ರಿಕೆಟಿಗರಿಗೆ ಎಷ್ಟೇ ಮೊತ್ತದ ಬಿಡ್​ ಆದರೂ ಗರಿಷ್ಠ 18 ಕೋಟಿ ರೂ. ಮಾತ್ರ ಗಳಿಸಲಿದ್ದಾರೆ. ಬಿಸಿಸಿಐನ ಮಿನಿ ಹರಾಜು ನಿಯಮಾವಳಿ ಇದಕ್ಕೆ ಕಾರಣವಾಗಿದೆ. ಬಿಡ್​ ಆದ ಹೆಚ್ಚುವರಿ ಮೊತ್ತವನ್ನು ಬಿಸಿಸಿಐ ಆಟಗಾರರ ಕಲ್ಯಾಣ ನಿಧಿಯಾಗಿ ಬಳಸಿಕೊಳ್ಳಲಿದೆ.

mayank agarwal and abhinav manohar

ಅಬುಧಾಬಿ, ಡಿ.16 ಐಪಿಎಲ್ (IPL 2026)​ 19ನೇ ಆವೃತ್ತಿಗೆ ಪೂರ್ವಭಾವಿಯಾಗಿ ಆಟಗಾರರ ಮಿನಿ ಹರಾಜು (mini-auction) ಪ್ರಕ್ರಿಯೆ(IPL 2026 auction live) ಆರಂಭಕ್ಕೆ ಇನ್ನು ಕೆಲವೇ ಗಂಟೆಗಳು ಮಾತ್ರ ಬಾಕಿ ಉಳಿದಿವೆ. ಅಬುಧಾಬಿ(Abu Dhabi)ಯಲ್ಲಿ ನಡೆಯುವ ಮಿನಿ ಹರಾಜಿನಲ್ಲಿ 31 ವಿದೇಶಿಯರ ಸಹಿತ ಒಟ್ಟು 77 ಆಟಗಾರರನ್ನು ಖರೀದಿಸಲು ಅವಕಾಶವಿದೆ. 369 ಆಟಗಾರರ ಪೈಪೋಟಿಯಲ್ಲಿ ಮಹಾರಾಜ ಟ್ರೋಫಿ ಹಾಗೂ ಕೆಎಸ್​ಸಿಎ ಟೂರ್ನಿಗಳಲ್ಲಿ ಉತ್ತಮ ಪ್ರದರ್ಶನ ನೀಡಿರುವ ರಾಜ್ಯದ ಉದಯೋನ್ಮುಖ ಆಟಗಾರರು ಸೇರಿ ಒಟ್ಟು 17 ಕ್ರಿಕೆಟಿಗರು ಈ ಬಾರಿ ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದಾರೆ. ಹರಾಜು ಭಾರತೀಯ ಕಾಲಮಾನ ಮಧ್ಯಾಹ್ನ 2.30 ಆರಂಭವಾಗಲಿದೆ.

ಕರ್ನಾಟಕದ ಆಟಗಾರರು

ಕರ್ನಾಟಕ ತಂಡದ ನಾಯಕ ಮಯಾಂಕ್​ ಅಗರ್ವಾಲ್​ (75 ಲಕ್ಷ ರೂ.) ಗರಿಷ್ಠ ಮೂಲಬೆಲೆ ಹೊಂದಿರುವ ಕನ್ನಡಿಗ ಎನಿಸಿದ್ದಾರೆ. ಕಳೆದ ಬಾರಿ ಅವರು ಆರ್​ಸಿಬಿ ಪರ ಆಡಿದ್ದರು. ಅಭಿನವ್​ ಮನೋಹರ್​, ವಿದ್ಯಾಧರ್​ ಪಾಟೀಲ್​, ವಿದ್ವತ್​ ಕಾವೇರಪ್ಪ, ಕೆಎಲ್​ ಶ್ರೀಜಿತ್, ಯಶ್​ ರಾಜ್​ ಪೂಂಜಾ, ಅಭಿಲಾಷ್​ ಶೆಟ್ಟಿ, ಮನ್ವಂತ್​ ಕುಮಾರ್​, ಮನೋಜ್​ ಭಾಂಡಗೆ, ಪ್ರವಿಣ್​ ದುಬೆ, ಮ್ಯಾಕ್ನೀಲ್​ ನೂರಾನ್ಹಾ, ಶುಭಾಂಗ್​ ಹೆಗ್ಡೆ, ಶ್ರೀವತ್ಸ ಆಚಾರ್ಯ , ಹಾರ್ದಿಕ್​ ರಾಜ್​, ಮಾಧವ್​ ಬಜಾಜ್​, ತಲಾ 30 ಲಕ್ಷ ರೂ. ಮೂಲಬೆಲೆ ಹೊಂದಿದ್ದಾರೆ.

ಇದನ್ನೂ ಓದಿ IPL 2026: ಮಾರ್ಚ್ 26 ರಿಂದ ಐಪಿಎಲ್ ಆರಂಭ; ಮೇ 31ಕ್ಕೆ ಫೈನಲ್‌

ಎಷ್ಟೇ ಬಿಡ್​ ಆದರೂ ಸಿಗುವುದು ಗರಿಷ್ಠ 18 ಕೋಟಿ ರೂ.

ಮಿನಿ ಹರಾಜಿನಲ್ಲಿ ವಿದೇಶಿ ಕ್ರಿಕೆಟಿಗರಿಗೆ ಎಷ್ಟೇ ಮೊತ್ತದ ಬಿಡ್​ ಆದರೂ ಗರಿಷ್ಠ 18 ಕೋಟಿ ರೂ. ಮಾತ್ರ ಗಳಿಸಲಿದ್ದಾರೆ. ಬಿಸಿಸಿಐನ ಮಿನಿ ಹರಾಜು ನಿಯಮಾವಳಿ ಇದಕ್ಕೆ ಕಾರಣವಾಗಿದೆ. ಬಿಡ್​ ಆದ ಹೆಚ್ಚುವರಿ ಮೊತ್ತವನ್ನು ಬಿಸಿಸಿಐ ಆಟಗಾರರ ಕಲ್ಯಾಣ ನಿಧಿಯಾಗಿ ಬಳಸಿಕೊಳ್ಳಲಿದೆ.

ಹರಾಜಿನ ಮೊದಲ 5 ಸೆಟ್​ಗಳು

ಸೆಟ್​1 (ಬ್ಯಾಟರ್ಸ್​): ಕ್ಯಾಮರಾನ್​ ಗ್ರೀನ್​, ಡೇವಿಡ್​ ಮಿಲ್ಲರ್, ಡೆವೊನ್​ ಕಾನ್​ವೇ, ಜೇಕ್​ ಫ್ರೇಸರ್​ ಮೆಕ್​ಗುರ್ಕ್​,​ (ತಲಾ 2 ಕೋಟಿ ಮೂಲಬೆಲೆ), ಪೃಥ್ವಿ ಶಾ, ಸರ್ಫರಾಜ್‌​ ಖಾನ್ (ತಲಾ 75 ಲಕ್ಷ).

ಸೆಟ್​2 (ಆಲ್ರೌಂಡರ್ಸ್​): ವೆಂಕಟೇಶ್​ ಅಯ್ಯರ್​, ಲಿವಿಂಗ್​ಸ್ಟೋನ್​, ರಚಿನ್​ ರವೀಂದ್ರ, ಗಸ್​ ಅಟ್ಕಿನ್​ಸನ್​, ವಾನಿಂದು ಹಸರಂಗ (ತಲಾ 2 ಕೋಟಿ), ವಿಯಾನ್​ ಮಿಲ್ಡರ್​ (1 ಕೋಟಿ), ದೀಪಕ್​ ಹೂಡಾ (75 ಲಕ್ಷ).

ಸೆಟ್​3 (ವಿಕೆಟ್​ ಕೀಪರ್ಸ್​): ಜೇಮಿ ಸ್ಮಿತ್, ಫಿನ್​ ಅಲೆನ್​, ಬೆನ್​ ಡಕೆಟ್​​ (ತಲಾ 2 ಕೋಟಿ), ರಹಮಾನುಲ್ಲ ಗುರ್ಬಜ್​ (1.5 ಕೋಟಿ), ಕ್ವಿಂಟನ್​ ಡಿಕಾಕ್, ಜಾನಿ ಬೇರ್​ಸ್ಟೋ, (ತಲಾ 1 ಕೋಟಿ), ಕೆಎಸ್​ ಭರತ್​ (75 ಲಕ್ಷ).

ಸೆಟ್​4 (ವೇಗಿಗಳು): ಅನ್ರಿಚ್​ ನೋರ್ಜೆ, ಗೆರಾಲ್ಡ್​ ಕೋಟ್​ಜೀ, ಜೇಕಬ್​ ಡಫಿ, ಮ್ಯಾಟ್​ ಹೆನ್ರಿ, ಮಥೀಶ ಪಥಿರಣ (ತಲಾ 2 ಕೋಟಿ), ಸ್ಪೆನ್ಸರ್​ ಜಾನ್ಸನ್​ (1.5 ಕೋಟಿ), ಆಕಾಶ್​ದೀಪ್​, ಜಲ್ಲಾಕ್​ ಫಾರೂಖಿ (ತಲಾ 1 ಕೋಟಿ), ಶಿವಂ ಮಾವಿ (75 ಲಕ್ಷ).

ಸೆಟ್​5 (ಸ್ಪಿನ್ನರ್ಸ್​): ಮುಜೀಬ್​ ರೆಹಮಾನ್​, ಮಹೀಶ್​ ತೀಕ್ಷಣ, ರವಿ ಬಿಷ್ಣೋಯಿ, ಅಕೀಲ್​ ಹೊಸೈನ್​, (ತಲಾ 2 ಕೋಟಿ), ರಾಹುಲ್​ ಚಹರ್​ (1 ಕೋಟಿ).