ಅಹಮದಾಬಾದ್, ಮೇ 30: 19ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್(IPL 2026 Final)ಗೆ ತೆರೆ ಬೀಳುವ ಸಮಯ ಬಂದಿದೆ. ಭಾನುವಾರ ವಿಶ್ವದ ಅತಿ ದೊಡ್ಡ ನರೇಂದ್ರ ಮೋದಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುವ ಫೈನಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಆರ್‌ಸಿಬಿ(Royal Challengers Bengaluru) ಹಾಗೂ ಮಾಜಿ ಚಾಂಪಿಯನ್ ಗುಜರಾತ್ ಟೈಟಾನ್ಸ್(Gujarat Titans) ಮುಖಾಮುಖಿಯಾಗಲಿವೆ. ಈ ಪಂದ್ಯಕ್ಕೆ ಸದ್ಯ ಮಳೆ ಭೀತಿ ಇರದೇ ಇದ್ದರೂ ಕೂಡ ಒಂದೊಮ್ಮೆ ಅಕಾಲಿಕ ಮಳೆಯಾದರೆ ಪಂದ್ಯದ ಮಳೆ ನಿಯಮ ಹೇಗಿದೆ ಎಂಬ ವರದಿ ಇಲ್ಲಿದೆ.
ಲೀಗ್ ಹಂತದ, ಎಲಿಮಿನೇಟರ್ ಹಾಗೂ ಕ್ವಾಲಿಫೈಯರ್‌ನ ಯಾವುದೇ ಪಂದ್ಯಕ್ಕೂ ಮೀಸಲು ದಿನ ಇರಲಿಲ್ಲ. ಆದರೆ ಫೈನಲ್ ಪಂದ್ಯಕ್ಕೆ ಮೀಸಲು(Reserve day) ದಿನ ಇದೆ. ಪೂರ್ಣ ಪಂದ್ಯ ನಡೆಸಲು ಹೆಚ್ಚುವರಿ 120 ನಿಮಿಷಗಳನ್ನು ನೀಡಲಾಗಿದೆ. ಈ ಸಮಯದಲ್ಲಿಯೂ ಪಂದ್ಯ ನಡೆಯದೇ ಹೋದರೆ ಆಗ ಡಕ್ವರ್ತ್ ನಿಯದ ಅನುಸಾರ ಓವರ್ ಕಡಿತಗೊಳಿಸಿ ಪಂದ್ಯ ನಡೆಸುವ ನಿರ್ಣಾಯಕ್ಕೆ ಬರಲಾಗುತ್ತದೆ. ಈ ವೇಳೆಯೂ ಪಂದ್ಯ ನಡೆಯದೇ ಇದ್ದರೆ ಪಂದ್ಯವನ್ನು ಮೀಸಲ ದಿನಕ್ಕೆ ಮುಂದೂಡಲಾಗುತ್ತದೆ. ಒಂದೊಮ್ಮೆ ಮೀಸಲು ದಿನದ ಮೊದಲಿನ ದಿನ ಪಂದ್ಯ ಅರ್ಧಕ್ಕೆ ನಿಂತಿದ್ದರೆ, ಅಲ್ಲಿಂದಲೇ ಮರುದಿನ ಪಂದ್ಯ ಆರಂಭಿಸಲಾಗುತ್ತದೆ.
ಮೀಸಲು ದಿನಕ್ಕೂ ಮಳೆ ಬಂದರೆ?
ಮೀಸಲು ದಿನವೂ ಮಳೆ ಬಂದರೆ ಫಲಿತಾಂಶ ಹೇಗೆ ನಿರ್ಧರಿಸಲಾಗುತ್ತದೆ ಎನ್ನುವ ಪ್ರಶ್ನೆ ಕ್ರಿಕೆಟ್ ಅಭಿಮಾನಿಗಳಿಗೆ ಕಾಡುವುದು ಸಹಜ. ಇದಕ್ಕೂ ಬಿಸಿಸಿಐ ಉತ್ತರ ನೀಡಿದೆ. ಒಂದು ವೇಳೆ ಮೀಸಲು ದಿನದಂದೂ ಕೂಡ ಮಳೆ ಅಡ್ಡಿ ಪಡಿಸಿದರೆ ಸೂಪರ್ ಓವರ್ಗೆ ಅವಕಾಶವಿದೆ. ಇದಕ್ಕೂ ಕೂಡ ಮಳೆ ಅನುವು ಮಾಡಿಕೊಡದೇ ಇದ್ದಾಗ ಅಂತಿಮವಾಗಿ ಲೀಗ್ ಹಂತದ ಅಂಕಪಟ್ಟಿಯಲ್ಲಿ ಯಾರು ಮುಂದಿರುತ್ತಾರೋ ಆ ತಂಡವನ್ನು ವಿಜಯೀ ಎಂದು ಘೋಷಿಸಲಾಗುತ್ತದೆ.
ಶತಕ ವಂಚಿತ ಸೂರ್ಯವಂಶಿಗೆ ರಿಯಾನ್ ಪರಾಗ್ ತರಾಟೆ; ವಿಡಿಯೊ ವೈರಲ್
ಆಗ ಆರ್‌ಸಿಬಿ ಚಾಂಪಿಯನ್ ಪಟ್ಟ ಅಲಂಕರಿಸಲಿದೆ. ಏಕೆಂದರೆ ಲೀಗ್ ಹಂತದ ಅಂಕಪಟ್ಟಿಯಲ್ಲಿ ಅಗ್ರಸ್ಥಾನಿಯಾಗಿತ್ತು. ಗುಜರಾತ್ ಎರಡನೇ ಸ್ಥಾನಿಯಾಗಿತ್ತು. ಅಚ್ಚರಿ ಎಂದರೆ ಲೀಗ್ ಹಂತದಲ್ಲಿ ಉಭಯ ತಂಡಗಳು ತಲಾ 18 ಅಂಕ ಪಡೆದಿದ್ದರೂ ರನ್ ರೇಟ್‌ನಲ್ಲಿ ಆರ್‌ಸಿಬಿ ಮುಂದಿತ್ತು.
ದಿಗ್ಗಜರ ಸಾಲಿಗೆ ಸೇರಲಿದ್ದಾರಾ ಪಾಟೀದಾರ್
ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಇದುವರೆಗೆ ಇಬ್ಬರು ನಾಯಕರುಗಳು ಮಾತ್ರ, ತಮ್ಮ ತಂಡಗಳನ್ನು ಸತತ ಎರಡು ಬಾರಿ ಚಾಂಪಿಯನ್ ಮಾಡಿದ್ದಾರೆ. ಅದು ಎಂ.ಎಸ್. ಧೋನಿ (2010 ಮತ್ತು 2011) ಹಾಗೂ ರೋಹಿತ್ ಶರ್ಮಾ (2019, 2020)ರಲ್ಲಿ ಈ ಸಾಧನೆ ಮಾಡಿದ್ದಾರೆ. ಇದೀಗ ಫೈನಲ್ ತಲುಪಿರುವ ಆರ್‌ಸಿಬಿ ತಂಡವು ಇನ್ನೊಂದು ಪಂದ್ಯ ಗೆದ್ದರೆ, ಪಾಟಿದಾರ್ ಅವರು ದಿಗ್ಗಜ ನಾಯಕರ ಸಾಲಿಗೆ ಸೇರಲಿದ್ದಾರೆ.