ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Hardik Pandya: ಆರ್‌ಸಿಬಿ ಪಂದ್ಯಕ್ಕೂ ಮುನ್ನ ಮುಂಬೈ ತಂಡ ಸೇರಿದ ಹಾರ್ದಿಕ್‌ ಪಾಂಡ್ಯ

IPL 2026: ಕೊನೆಯ ಮೂರು ಪಂದ್ಯಗಳಲ್ಲಿ, ಮುಂಬೈ ಇಂಡಿಯನ್ಸ್ ಮೇ 14 ರಂದು ಪಂಜಾಬ್ ಕಿಂಗ್ಸ್, ಮೇ 20 ರಂದು ಈಡನ್ ಗಾರ್ಡನ್ಸ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಮೇ 24 ರಂದು ಮುಂಬೈನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಎದುರಿಸಲಿದೆ.

Hardik Pandya

ರಾಯ್ಪುರ, ಮೇ 8: ಭಾನುವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು(Royal Challengers Bengaluru) ವಿರುದ್ಧ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್(IPL 2026) ಪಂದ್ಯಕ್ಕೂ ಮುನ್ನ ನಾಯಕ ಹಾರ್ದಿಕ್ ಪಾಂಡ್ಯ(Hardik Pandya) ರಾಯ್‌ಪುರದಲ್ಲಿ ತಮ್ಮ ಮುಂಬೈ ಇಂಡಿಯನ್ಸ್ ತಂಡದ ಸಹ ಆಟಗಾರರೊಂದಿಗೆ ಸೇರಿಕೊಂಡಿದ್ದಾರೆ.

ಬೆನ್ನುನೋವಿನ ಸಮಸ್ಯೆಯಿಂದಾಗಿ ಪಾಂಡ್ಯ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಮುಂಬೈ ತಂಡದ ಕೊನೆಯ ಪಂದ್ಯವನ್ನು ತಪ್ಪಿಸಿಕೊಂಡಿದ್ದರು. ಅವರ ನೋವು ಸ್ವಲ್ಪ ಮಟ್ಟಿಗೆ ಕಾಡುತ್ತಿದೆ ಎಂದು ಹೇಳಲಾಗುತ್ತಿದ್ದು, ಎಲ್‌ಎಸ್‌ಜಿ ವಿರುದ್ಧದ ಪಂದ್ಯಕ್ಕೆ ಅವರಿಗೆ ವಿಶ್ರಾಂತಿ ನೀಡುವಂತೆ ಸೂಚಿಸಲಾಯಿತು. "ರಾಯ್‌ಪುರಕ್ಕೆ ಭೇಟಿ ನೀಡಿದೆ" ಎಂದು ಎಂಐ ಗುರುವಾರ ಪಾಂಡ್ಯ ಅವರ ಫೋಟೋ ಜೊತೆಗೆ 'ಎಕ್ಸ್' ನಲ್ಲಿ ಬರೆದಿದ್ದಾರೆ.

ಶಹೀದ್ ವೀರ್ ನಾರಾಯಣ್ ಸಿಂಗ್ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಪೂರ್ಣ ಪ್ರಮಾಣದ ತರಬೇತಿ ಅವಧಿಯನ್ನು ನಿಗದಿಪಡಿಸಲಾಗಿದ್ದು, ಪಾಂಡ್ಯ ಶುಕ್ರವಾರ ನೆಟ್‌ನಲ್ಲಿ ತರಬೇತಿ ಪಡೆಯುವ ಸಾಧ್ಯತೆಯಿದೆ. ಏಳು ಸೋಲುಗಳು ಮತ್ತು ಮೂರು ಜಯಗಳೊಂದಿಗೆ, ಮುಂಬೈ ಇಂಡಿಯನ್ಸ್ ಪಾಯಿಂಟ್ಸ್ ಪಟ್ಟಿಯಲ್ಲಿ ಒಂಬತ್ತನೇ ಸ್ಥಾನದಲ್ಲಿದೆ ಮತ್ತು ತನ್ನ ಸಣ್ಣ ಪ್ಲೇಆಫ್ ಆಸೆಯನ್ನು ಜೀವಂತವಾಗಿರಿಸಿಕೊಳ್ಳಲು ಉಳಿದಿರುವ ಪ್ರತಿಯೊಂದು ಪಂದ್ಯವನ್ನು ಹೊಡ್ಡ ಅಂತರದಿಂದ ಗೆಲ್ಲುವ ಅಗತ್ಯವಿದೆ.



ಈ ವರ್ಷದ ಐಪಿಎಲ್‌ನಲ್ಲಿ ಆರ್‌ಸಿಬಿ ಈಗಾಗಲೇ ಒಮ್ಮೆ ಮುಂಬೈ ಇಂಡಿಯನ್ಸ್ ತಂಡವನ್ನು ಸೋಲಿಸಿದೆ (ಏಪ್ರಿಲ್ 12 ರಂದು ವಾಂಖೆಡೆ ಕ್ರೀಡಾಂಗಣದಲ್ಲಿ ಎಂಐ ತಂಡವು 18 ರನ್‌ಗಳಿಂದ ಸೋತಿದೆ).

ಕೊನೆಯ ಮೂರು ಪಂದ್ಯಗಳಲ್ಲಿ, ಮುಂಬೈ ಇಂಡಿಯನ್ಸ್ ಮೇ 14 ರಂದು ಪಂಜಾಬ್ ಕಿಂಗ್ಸ್, ಮೇ 20 ರಂದು ಈಡನ್ ಗಾರ್ಡನ್ಸ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಮೇ 24 ರಂದು ಮುಂಬೈನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಎದುರಿಸಲಿದೆ.

ಟಿ20 ನಾಯಕತ್ವದಿಂದ ಸೂರ್ಯಕುಮಾರ್‌ಗೆ ಕೊಕ್‌ ಸಾಧ್ಯತೆ; ಅಯ್ಯರ್‌ ಮೇಲೆ ಆಯ್ಕೆ ಸಮಿತಿ ಒಲವು

ಮುಂಬೈ ಇಂಡಿಯನ್ಸ್ ತಂಡವು ಉಳಿದಿರುವ ಎಲ್ಲ ಪಂದ್ಯಗಳನ್ನು ಗೆದ್ದರೆ, ಮತ್ತು ಮೂರು ತಂಡಗಳಿಗಿಂತ ಹೆಚ್ಚು ತಂಡಗಳು 14 ಅಂಕಗಳೊಂದಿಗೆ ಲೀಗ್ ಹಂತವನ್ನು ಮುಗಿಸದಿದ್ದರೆ, ಅಗ್ರ ನಾಲ್ಕು ಸ್ಥಾನಗಳಲ್ಲಿ ಸ್ಥಾನ ಪಡೆಯುವ ಮೂಲಕ ಐಪಿಎಲ್ 2026 ರ ಪ್ಲೇಆಫ್‌ಗೆ ಅರ್ಹತೆ ಪಡೆಯುತ್ತದೆ. 10 ತಂಡಗಳ ಈ ಸ್ಪರ್ಧೆಯಲ್ಲಿ ಪ್ಲೇ ಆಫ್‌ಗೆ 14 ಅಂಕ ಸಾಕಾಗುವುದಿಲ್ಲ. ಐಪಿಎಲ್‌ನ ಕಳೆದ ನಾಲ್ಕು ಋತುಗಳಲ್ಲಿ (ಇದು 10 ತಂಡಗಳ ಟೂರ್ನಮೆಂಟ್ ಆಗಿ ಮಾರ್ಪಟ್ಟ ನಂತರ), 14 ಅಂಕಗಳೊಂದಿಗೆ ಲೀಗ್ ಹಂತವನ್ನು ಮುಗಿಸಿದ ತಂಡವು ಒಮ್ಮೆ ಮಾತ್ರ ಅಗ್ರ ನಾಲ್ಕರಲ್ಲಿ ಸ್ಥಾನ ಪಡೆದಿತ್ತು. 2014 ರಲ್ಲಿ ಆರ್‌ಸಿಬಿ.