ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಗುಜರಾತ್‌ ಸವಾಲಿಗೆ ಮುಂಬೈ ಸಜ್ಜು; ಸೋತರೆ ಪಾಂಡ್ಯ ಪಡೆಯ ಪ್ಲೇ ಆಫ್​ ಹಾದಿ ಕಠಿಣ

IPL 2026: ಗುಜರಾತ್‌ ತಂಡ ಬ್ಯಾಟಿಂಗ್‌ ಮತ್ತು ಬೌಲಿಂಗ್‌ ವಿಭಾಗದಲ್ಲಿ ಬಲಿಷ್ಠವಾಗಿದೆ. ನಾಯಕ ಶುಭಮನ್‌ ಗಿಲ್‌, ಸಾಯಿ ಸುದರ್ಶನ್‌, ಜಾಸ್‌ ಬಟ್ಲರ್‌ ತಂಡದ ಪ್ರಮುಖ ಬ್ಯಾಟರ್‌ಗಳಾಗಿದ್ದಾರೆ. ಬೌಲಿಂಗ್‌ನಲ್ಲಿ ರಬಾಡ ಮತ್ತು ಕನ್ನಡಿಗ ಪ್ರಸಿದ್ದ್‌ ಕೃಷ್ಣ ಎದುರಾಳಿಗಳನ್ನು ಕಟ್ಟಿ ಹಾಕುವ ಸಾಮರ್ಥ್ಯ ಹೊಂದಿದ್ದಾರೆ.

Gujarat Titans vs Mumbai Indians

ಅಹಮದಾಬಾದ್‌, ಎ.19: ಕಳೆದ ಪಂದ್ಯದಲ್ಲಿ ತವರಿನಲ್ಲೇ ಗೆಲುವು ಕಂಡಿರುವ ಗುಜರಾತ್‌ ಟೈಟಾನ್ಸ್‌(MI vs GT)​ ಮತ್ತೊಂದು ಪಂದ್ಯವನ್ನಾಡಲು ಸಜ್ಜಾಗಿದೆ. ಎದುರಾಳಿ ಸತತವಾಗಿ ಸೋಲಿನಿಂದ ಕಂಗೆಟ್ಟಿರುವ ಮುಂಬೈ ಇಂಡಿಯನ್ಸ್​. ಪ್ಲೇ ಆಫ್​ ಆಸೆ ಜೀವಂತವಿರಿಸಬೇಕಿದ್ದರೆ ಮುಂಬೈಗೆ ಇದು ಮಸ್ಟ್​ ವಿನ್​ ಗೇಮ್​ ಆಗಿದೆ.

ಮುಂಬೈ ಅಗ್ರ ಕ್ರಮಾಂಕವನ್ನು ಹೆಚ್ಚು ಅವಲಂಬಿಸಿದೆ. ಮಧ್ಯಮ ಕ್ರಮಾಂಕದಲ್ಲಿ ಸೂರ್ಯಕುಮಾರ್‌ ಯಾದವ್‌, ತಿಲಕ್‌ ವರ್ಮಾ ಬ್ಯಾಟಿಂಗ್​ ಮೇಲೆ ಹೆಚ್ಚು ನಂಬಿಕೆ ಇಡುವಂತಿಲ್ಲ. ಏಕೆಂದರೆ ಇದುವರೆಗಿನ ಪ್ರದರ್ಶನ ನೋಡಿದರೆ ತಿಳಿಯುತ್ತದೆ. ಬೌಲಿಂಗ್‌ ವಿಭಾಗವಂತೂ ಶೋಚನೀಯವಾಗಿದೆ. ಜಸ್‌ಪ್ರೀತ್‌ ಬುಮ್ರಾ ಇದುವರೆಗೂ ಒಂದು ವಿಕೆಟ್‌ ಪಡೆದಿಲ್ಲ. ಬೌಲ್ಟ್‌ ಕೂಡ ಕ್ಲಿಕ್‌ ಆಗಿಲ್ಲ. ತಂಡದ ಪ್ರದರ್ಶನ ಕಂಡು ನಾಯಕ ಪಾಂಡ್ಯ ಈಗಾಗಲೇ ಆಟಗಾರರಿಗೆ ಎಚ್ಚರಿಕೆಯನ್ನು ನೀಡಿದ್ದಾರೆ. ಇನ್ನೊಂದೆಡೆ ತಂಡದಲ್ಲಿ ಜೋಶ್​ ಕಾಣುತ್ತಿಲ್ಲ. ನಾಯಕ ಹಾರ್ದಿಕ್​ ಪಾಂಡ್ಯ ಕೂಡ ಗಂಭೀರವಾಗಿ ಆಡುತ್ತಿಲ್ಲ. ಅವರ ವರ್ತನೆಗಳೇ ವಿಚಿತ್ರವಾಗಿ ಗೋಚರಿಸಿದೆ.

ಗುಜರಾತ್‌ ತಂಡ ಬ್ಯಾಟಿಂಗ್‌ ಮತ್ತು ಬೌಲಿಂಗ್‌ ವಿಭಾಗದಲ್ಲಿ ಬಲಿಷ್ಠವಾಗಿದೆ. ನಾಯಕ ಶುಭಮನ್‌ ಗಿಲ್‌, ಸಾಯಿ ಸುದರ್ಶನ್‌, ಜಾಸ್‌ ಬಟ್ಲರ್‌ ತಂಡದ ಪ್ರಮುಖ ಬ್ಯಾಟರ್‌ಗಳಾಗಿದ್ದಾರೆ. ಬೌಲಿಂಗ್‌ನಲ್ಲಿ ರಬಾಡ ಮತ್ತು ಕನ್ನಡಿಗ ಪ್ರಸಿದ್ದ್‌ ಕೃಷ್ಣ ಎದುರಾಳಿಗಳನ್ನು ಕಟ್ಟಿ ಹಾಕುವ ಸಾಮರ್ಥ್ಯ ಹೊಂದಿದ್ದಾರೆ.

ಪಿಚ್​ ರಿಪೋರ್ಟ್​

ವಿಶ್ವದ ಅತಿ ದೊಡ್ಡ ಕ್ರೀಡಾಂಗಣ, ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂ ನೇರ ಬೌಂಡರಿಗಳಿಗೆ ಸರಾಸರಿ 75 ಮೀಟರ್ ಮತ್ತು ಚದರ ಗಡಿಗಳಿಗೆ 60 ಮೀಟರ್ ಉದ್ದವನ್ನು ಹೊಂದಿದೆ. ಚೇಸಿಂಗ್​ ನಡೆಸಿದ ತಂಡಗಳು ಹೆಚ್ಚಾಗಿ ಗೆದ್ದಿವೆ. ಇಲ್ಲಿ ದಾಖಲಾದ ಗರಿಷ್ಠ ಒತ್ತ 233 ರನ್​. ಮುಂಬೈ ಮತ್ತು ಗುಜರಾತ್ ನಡುವಣ ಪಂದ್ಯದಲ್ಲಿ ಈ ಮೊತ್ತ ದಾಖಲಾಗಿತ್ತು.

2027ರ ವಿಶ್ವಕಪ್ ವರೆಗೆ ಅಜಿತ್‌ ಅಗರ್ಕರ್ ಅಧಿಕಾರಾವಧಿ ವಿಸ್ತರಣೆ ಸಾಧ್ಯತೆ

ಮುಖಾಮುಖಿ

ಉಭಯ ತಂಡಗಳ ಐಪಿಎಲ್​ ಇತಿಹಾಸ ನೋಡುವಾಗ ಗುಜರಾತ್‌​ ಬಲಿಷ್ಠವಾಗಿದೆ. ಇದುವರೆಗೆ 8 ಪಂದ್ಯಗಳನ್ನು ಆಡಿ 5 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಮುಂಬೈ​ ಕೇವಲ 3 ಪಂದ್ಯ ಮಾತ್ರ ಗೆದ್ದಿದೆ.

ಸಂಭಾವ್ಯ ತಂಡಗಳು

ಗುಜರಾತ್ ಟೈಟಾನ್ಸ್

ಶುಭಮನ್ ಗಿಲ್ (ನಾಯಕ), ಬಿ. ಸಾಯಿ ಸುದರ್ಶನ್, ಜೋಸ್ ಬಟ್ಲರ್ (ವಿ.ಕೀ.), ವಾಷಿಂಗ್ಟನ್ ಸುಂದರ್, ಗ್ಲೆನ್ ಫಿಲಿಪ್ಸ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಕಗಿಸೊ ರಬಾಡಾ, ಅಶೋಕ್ ಶರ್ಮಾ, ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್.

ಇಂಪ್ಯಾಕ್ಟ್ ಪ್ಲೇಯರ್: ಶಾರುಖ್ ಖಾನ್.

ಮುಂಬೈ ಇಂಡಿಯನ್ಸ್

ಕ್ವಿಂಟನ್ ಡಿ ಕಾಕ್ (ವಿ.ಕೀ.), ಸೂರ್ಯಕುಮಾರ್ ಯಾದವ್, ನಮನ್ ಧೀರ್, ತಿಲಕ್ ವರ್ಮಾ, ಶೆರ್ಫೇನ್ ರುದರ್ಫೋರ್ಡ್, ಹಾರ್ದಿಕ್ ಪಾಂಡ್ಯ (ನಾಯಕ), ಮಯಾಂಕ್ ರಾವತ್, ಮಿಚೆಲ್ ಸ್ಯಾಂಟ್ನರ್, ಶಾರ್ದೂಲ್ ಠಾಕೂರ್, ಅಶ್ವನಿ ಕುಮಾರ್, ಜಸ್ಪ್ರೀತ್ ಬುಮ್ರಾ.

ಇಂಪ್ಯಾಕ್ಟ್ ಪ್ಲೇಯರ್: ಅಲ್ಲಾ ಘಜನ್ಫರ್.