ಅಹಮದಾಬಾದ್, ಮೇ 11: ಮಂಗಳವಾರ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) 2026 ರ 56ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ (GT) ತಂಡವು ಸನ್‌ರೈಸರ್ಸ್ ಹೈದರಾಬಾದ್ (SRH) ವಿರುದ್ಧ ಸೆಣಸಲಿದೆ. ಪ್ಲೇ ಆಫ್ ಸ್ಥಾನ ಭದ್ರಪಡಿಸಿಕೊಳ್ಳಲು ಇತ್ತಂಡಗಳಿಗೂ ಗೆಲುವು ಅತ್ಯಗತ್ಯ.
ಗುಜರಾತ್ ಟೈಟಾನ್ಸ್ ತಂಡವು 11 ಪಂದ್ಯಗಳನ್ನು ಆಡಿದ್ದು, ಇದುವರೆಗೆ ಏಳು ಗೆಲುವುಗಳನ್ನು ಕಂಡಿದೆ. ಶುಭಮನ್ ಗಿಲ್ ಮತ್ತು ತಂಡವು ಪ್ರಸ್ತುತ ಪಾಯಿಂಟ್ ಪಟ್ಟಿಯಲ್ಲಿ 3 ನೇ ಸ್ಥಾನದಲ್ಲಿದೆ. ಕಳೆದ ನಾಲ್ಕು ಪಂದ್ಯಗಳಲ್ಲಿ ಗೆಲುವು ಸಾಧಿಸಿ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಏತನ್ಮಧ್ಯೆ, ಸನ್‌ರೈಸರ್ಸ್ ಹೈದರಾಬಾದ್ ತಂಡವು ಅಂಕಪಟ್ಟಿಯಲ್ಲಿ 2 ನೇ ಸ್ಥಾನದಲ್ಲಿದೆ. ಪ್ಯಾಟ್ ಕಮ್ಮಿನ್ಸ್ ಪಡೆ ಕಳೆದ ಏಳು ಪಂದ್ಯಗಳಲ್ಲಿ ಆರರಲ್ಲಿ ಗೆದ್ದಿದ್ದಾರೆ. ಇತ್ತಂಡಗಳು ಕೂಡ 14 ಅಂಕಗಳಿಸಿರುವ ಕಾರಣ ಮಂಗಳವಾರದ ಪಂದ್ಯದಲ್ಲಿ ಗೆದ್ದ ತಂಡ 16 ಅಂಕದೊಂದಿಗೆ ಬಹುತೇಕ ಪ್ಲೇ ಆಫ್‌ನಲ್ಲಿ ಸ್ಥಾನವೊಂದನ್ನು ಖಚಿತಪಡಿಸಿಕೊಳ್ಳಲಿದೆ.
ಪಿಚ್ ರಿಪೋರ್ಟ್
ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಮೊದಲ ಮೂರು ಪಂದ್ಯಗಳು ಅದ್ಭುತ ಬ್ಯಾಟಿಂಗ್ ಮೇಲ್ಮೈಗಳನ್ನು ಕಂಡವು. ಆದಾಗ್ಯೂ, ಕಳೆದ ಕೆಲವು ಪಂದ್ಯಗಳಲ್ಲಿ ಪಿಚ್‌ಗಳು ಗಣನೀಯವಾಗಿ ನಿಧಾನಗೊಂಡಿವೆ. ಐದು ಪಂದ್ಯಗಳಲ್ಲಿ ಮೂರು ಪಂದ್ಯಗಳನ್ನು ಚೇಗಸಿಂಗ್ ನಡೆಸಿದ ತಂಡಗಳು ಬೆನ್ನಟ್ಟಿ ಗೆದ್ದಿವೆ. ಟಾಸ್ ಗೆದ್ದ ನಾಯಕ ಬೌಲಿಂಗ್ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ಈ ಪಂದ್ಯದಲ್ಲಿಯೂ ಟಾಸ್ ಗೆದ್ದ ತಂಡ ಚೇಸಿಂಗ್‌ಗೆ ಹೆಚ್ಚಿನ ಒತ್ತು ನೀಡುವ ಸಾಧ್ಯತೆ ಇದೆ.
ಮುಂಬೈ ವಿರುದ್ಧ ಅಸಭ್ಯ ರೀತಿಯ ಸಂಭ್ರಮಾರಣೆ ಮಾಡಿದ ಟಿಮ್ ಡೇವಿಡ್; ವಿಡಿಯೊ ವೈರಲ್
ಮುಖಾಮುಖಿ
ಇತ್ತಂಡಗಳು ಈವರೆಗಿನ ಐಪಿಎಲ್‌ನಲ್ಲಿ 7 ಬಾರಿ ಮುಖಾಮುಖಿಯಾಗಿವೆ. ಈ ಪೈಕಿ ಗುಜರಾತ್ ಗರಿಷ್ಠ 5 ಪಂದ್ಯ ಗೆದ್ದಿದೆ. ಸನ್‌ರೈಸರ್ಸ್ ಕೇವಲ ಒಂದು ಪಂದ್ಯ ಮಾತ್ರ ಗೆದ್ದಿದೆ. ಒಂದು ಪಂದ್ಯ ಫಲಿತಾಂಶ ಕಂಡಿಲ್ಲ. ಬಲಾಬಲದ ಲೆಕ್ಕಾಚಾರ ನೋಡುವಾಗ ನಾಳಿನ ಪಂದ್ಯದಲ್ಲಿ ಗುಜರಾತ್ ಫೇವರಿಟ್ ಆಗಿ ಗೋಚರಿಸಿದೆ.
ಸಂಭಾವ್ಯ ತಂಡಗಳು
ಗುಜರಾತ್ ಟೈಟಾನ್ಸ್ (ಜಿಟಿ): ಸಾಯಿ ಸುದರ್ಶನ್, ಶುಬ್ಮನ್ ಗಿಲ್ (ಸಿ), ಜೋಸ್ ಬಟ್ಲರ್ (ಡಬ್ಲ್ಯುಕೆ), ವಾಷಿಂಗ್ಟನ್ ಸುಂದರ್, ಜೇಸನ್ ಹೋಲ್ಡರ್, ರಾಹುಲ್ ತೆವಾಟಿಯಾ, ನಿಶಾಂತ್ ಸಿಂಧು, ರಶೀದ್ ಖಾನ್, ಅರ್ಷದ್ ಖಾನ್, ಕಗಿಸೊ ರಬಾಡ, ಮೊಹಮ್ಮದ್ ಸಿರಾಜ್.
ಇಂಪ್ಯಾಕ್ಟ್ ಪ್ಲೇಯರ್: ಸಾಯಿ ಕಿಶೋರ್.
ಸನ್‌ರೈಸರ್ಸ್ ಹೈದರಾಬಾದ್ (SRH): ಅಭಿಷೇಕ್ ಶರ್ಮಾ, ಟ್ರಾವಿಸ್ ಹೆಡ್, ಇಶಾನ್ ಕಿಶನ್ (ವಿ.ಕೀ.), ಹೆನ್ರಿಚ್ ಕ್ಲಾಸೆನ್, ನಿತೀಶ್ ಕುಮಾರ್ ರೆಡ್ಡಿ, ಸಲೀಲ್ ಅರೋರಾ, ಸ್ಮರಣ್ ರವಿಚಂದ್ರನ್, ಪ್ಯಾಟ್ ಕಮಿನ್ಸ್ (ನಾಯಕ), ಶಿವಂಗ್ ಕುಮಾರ್, ಎಶಾನ್ ಮಾಲಿಂಗ, ಸಾಕಿಬ್ ಹುಸೇನ್.
ಇಂಪ್ಯಾಕ್ಟ್ ಪ್ಲೇಯರ್: ಹರ್ಷ್ ದುಬೆ.