ಲಖನೌ, ಮೇ 14: ಶುಕ್ರವಾರ ನಡೆಯುವ ಇಂಡಿಯನ್ ಪ್ರೀಮಿಯರ್ ಲೀಗ್(IPL 2026) ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್(LSG vs RCB) ತಂಡವು ಚೆನ್ನೈ ಸೂಪರ್ ಕಿಂಗ್ಸ್ ಸವಾಲು ಎದುರಿಸಲಿದೆ. ಪಂದ್ಯಕ್ಕೆ ಏಕಾನಾ ಕ್ರಿಕೆಟ್ ಕ್ರೀಡಾಂಗಣ ಅಣಿಯಾಗಿದೆ. ಪ್ಲೇ ಆಫ್ ಯೋಜನೆಯಲ್ಲಿರುವ ಚೆನ್ನೈಗೆ ಇದು ಗೆಲ್ಲಲೇ ಬೇಕಾದ ಪಂದ್ಯ.
ಎಲ್‌ಎಸ್‌ಜಿ ತಂಡವು ಈಗಾಗಲೇ ಟೂರ್ನಿಯಿಂದ ಹೊರಬಿದ್ದಿದೆ. ಈ ಋತುವಿನ ಆರಂಭದಲ್ಲಿ ಸಿಎಸ್‌ಕೆ ತಂಡದ ವಿರುದ್ಧ ಸೋಲು ಕಂಡಿತ್ತು. ಚೆಪಾಕ್‌ನಲ್ಲಿ ನಡೆದ ಪಂದ್ಯದಲ್ಲಿ ಐದು ವಿಕೆಟ್‌ಗಳ ಸೋಲನ್ನು ಅನುಭವಿಸಿದ್ದರು. ಇದೀಗ ಅವರು ಏಕಾನಾದಲ್ಲಿ ಬಲವಾದ ಪ್ರದರ್ಶನ ನೀಡುವ ಮೂಲಕ ಸಿಎಸ್‌ಕೆ ವಿರುದ್ಧ ಸೇಡು ತೀರಿಸುವ ಕಾತರದಲ್ಲಿದೆ.
ಮತ್ತೊಂದೆಡೆ, ಸಿಎಸ್‌ಕೆ 11 ಪಂದ್ಯಗಳಿಂದ ಆರು ಗೆಲುವುಗಳೊಂದಿಗೆ ಅಂಕಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. ಐಪಿಎಲ್ 2026 ರ ಋತುವಿನಲ್ಲಿ ಕಳಪೆ ಆರಂಭದ ನಂತರ, ಋತುರಾಜ್ ಗಾಯಕ್ವಾಡ್ ನೇತೃತ್ವದ ತಂಡವು ಉತ್ತಮ ಸ್ಥಾನದಲ್ಲಿದೆ ಮತ್ತು ಪ್ಲೇಆಫ್ ಸ್ಥಾನಕ್ಕಾಗಿ ತೀವ್ರವಾಗಿ ಹೋರಾಡುತ್ತಿದೆ.
ಧೋನಿ ಆಡುವ ಸಾಧ್ಯತೆ
ಸ್ನಾಯು ಸೆಳೆತದ ಕಾರಣದಿಂದ ಈ ಬಾರಿಯ ಐಪಿಎಲ್‌ನಲ್ಲಿ ಒಂದೂ ಪಂದ್ಯವನ್ನಾಡದ ದಿಗ್ಗಜ ಎಂ.ಎಸ್ ಧೋನಿ ಮೊದಲ ಪಂದ್ಯವನ್ನಾಡುವ ನಿರೀಕ್ಷೆಯಲ್ಲಿದ್ದಾರೆ. ಅವರು ತಂಡದ ಜತೆಗೆ ಲಖನೌಗೆ ಪ್ರಯಾಣಿಸಿದ್ದಾರೆ. ಹೀಗಾಗಿ ಲಖನೌ ಎದುರಿನ ಪಂದ್ಯದಲ್ಲಿ ಧೋನಿ ಆಡುವ ಸಾಧ್ಯತೆ ಅಧಿಕವಾಗಿದೆ.
ಪಿಚ್ ರಿಪೋರ್ಟ್
ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕಾನಾ ಕ್ರಿಕೆಟ್ ಕ್ರೀಡಾಂಗಣದ ಪಿಚ್ ಈ ಬಾರಿ ಕೇವಲ ಬೌಲರ್‌ಗಳಿಗಷ್ಟೇ ನೆರವಾಗಿದೆ. ಆಡಿದ ಎಲ್ಲ ಪಂದ್ಯಗಳು ಲೋ ಸ್ಕೋರ್. ಪಿಚ್ ಕಡಿಮೆ ಬೌನ್ಸ್ ಹೊಂದಿದ್ದು, ಇದು ಬ್ಯಾಟರ್‌ಗಳಿಗೆ ಕಷ್ಟಕರವಾಗಿರುತ್ತದೆ. ಸ್ಪಿನ್ ಸ್ನೇಹಿಯಾಗಿರುವುದರಿಂದ ಸ್ಪಿನ್ನರ್‌ಗಳು ಮೇಲುಗೈ ಸಾಧಿಸಬಹುದು.
IPL 2026: ಆರ್‌ಸಿಬಿ ವಿರುದ್ಧ ಸೋತರೂ ಇನ್ನೂ ಇದೆ ಕೆಕೆಆರ್‌ಗೆ ಪ್ಲೇ-ಆಫ್ ಅವಕಾಶ
ಮುಖಾಮುಖಿ
ಆಡಿದ ಪಂದ್ಯಗಳು- 07
ಲಖನೌ ಜಯ- 03
ಸಿಎಸ್‌ಕೆ ಜಯ-03
ಫಲಿತಾಂಶವಿಲ್ಲ- 01
ಸಂಭಾವ್ಯ ತಂಡಗಳು
ಲಕ್ನೋ ಸೂಪರ್ ಜೈಂಟ್ಸ್ (LSG): ಮಿಚೆಲ್ ಮಾರ್ಷ್, ಜೋಶ್ ಇಂಗ್ಲಿಸ್, ನಿಕೋಲಸ್ ಪೂರನ್, ರಿಷಭ್ ಪಂತ್ (c & wk), ಏಡೆನ್ ಮಾರ್ಕ್ರಾಮ್, ಅಕ್ಷತ್ ರಘುವಂಶಿ, ಹಿಮ್ಮತ್ ಸಿಂಗ್, ಶಹಬಾಜ್ ಅಹ್ಮದ್, ಮೊಹಮ್ಮದ್ ಶಮಿ, ದಿಗ್ವೇಶ್ ಸಿಂಗ್ ರಾಠಿ, ಪ್ರಿನ್ಸ್ ಯಾದವ್
ಇಂಪ್ಯಾಕ್ಟ್ ಆಟಗಾರ: ಅವೇಶ್ ಖಾನ್.
ಚೆನ್ನೈ ಸೂಪರ್ ಕಿಂಗ್ಸ್ (CSK): ಸಂಜು ಸ್ಯಾಮ್ಸನ್ (ವಿ.ಕೀ.), ಋತುರಾಜ್ ಗಾಯಕ್ವಾಡ್ (ನಾಯಕ), ಉರ್ವಿಲ್ ಪಟೇಲ್, ಕಾರ್ತಿಕ್ ಶರ್ಮಾ, ಡೆವಾಲ್ಡ್ ಬ್ರೆವಿಸ್, ಶಿವಂ ದುಬೆ, ಅಕೇಲ್ ಹೊಸೈನ್, ಅನ್ಶುಲ್ ಕಾಂಬೋಜ್, ನೂರ್ ಅಹ್ಮದ್, ಮ್ಯಾಟ್ ಹೆನ್ರಿ / ಸ್ಪೆನ್ಸರ್ ಜಾನ್ಸನ್, ಮುಖೇಶ್ ಚೌಧರಿ.
ಇಂಪ್ಯಾಕ್ಟ್ ಪ್ಲೇಯರ್: ಪ್ರಶಾಂತ್ ವೀರ್.