ಚೆನ್ನೈ, ಮೇ 17: ಐದು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡವು 2026 ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ನ 63 ನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ (SRH) ತಂಡವನ್ನು ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಎದುರಿಸಲಿದೆ. ಈ ಪಂದ್ಯ ಸೋಮವಾರ ನಡೆಯಲಿದೆ. ಈ ಪಂದ್ಯ ಇತ್ತಂಡಗಳ ಪ್ಲೇ-ಆಫ್ ಭವಿಷ್ಯ ನಿರ್ಧರಿಸಲಿದೆ.
ಸಿಎಸ್‌ಕೆ ತಂಡವು 12 ಪಂದ್ಯಗಳಲ್ಲಿ ಆರು ಗೆಲುವುಗಳು ಮತ್ತು ಅಷ್ಟೇ ಸೋಲುಗಳೊಂದಿಗೆ ಪಾಯಿಂಟ್ಸ್ ಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದ್ದಾರೆ. ಕಳೆದ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಹೀನಾಯ ಸೋಲು ತಂಡದ ಪ್ಲೇ-ಆಫ್ ಲೆಕ್ಕಾಚಾರವನ್ನು ತಲೆಕೆಳಗೆ ಮಾಡಿತ್ತು. ಸ್ಪರ್ಧೆಯಲ್ಲಿ ಜೀವಂತವಾಗಿರಲು ಈ ನಿರ್ಣಾಯಕ ಪಂದ್ಯದಲ್ಲಿ ಅವರಿಗೆ ಗೆಲುವು ಅಗತ್ಯವಾಗಿದೆ.
ಮತ್ತೊಂದೆಡೆ, ಸನ್‌ರೈಸರ್ಸ್ ಹೈದರಾಬಾದ್ ತಂಡ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಕೇವಲ 86 ರನ್‌ಗಳಿಗೆ ಆಲೌಟ್ ಆಗಿ ಸೋತಿತು. 12 ಪಂದ್ಯಗಳಲ್ಲಿ ಏಳು ಗೆಲುವುಗಳೊಂದಿಗೆ ಅವರು ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಸಿಎಸ್‌ಕೆ ವಿರುದ್ಧದ ಪಂದ್ಯದಲ್ಲಿ ಅವರು ಗೆದ್ದರೆ, ಅವರ ಅರ್ಹತೆ ಪಡೆಯುವ ಸಾಧ್ಯತೆಗಳು ಗಮನಾರ್ಹವಾಗಿ ಹೆಚ್ಚಾಗುತ್ತವೆ.
ಪಿಚ್ ರಿಪೋರ್ಟ್
ಚೆನ್ನೈನ ಐಕಾನಿಕ್ ಎಂಎ ಚಿದಂಬರಂ ಕ್ರೀಡಾಂಗಣವು ಐಪಿಎಲ್ 2026 ರಲ್ಲಿ ಇದುವರೆಗೆ ಆರು ಪಂದ್ಯಗಳನ್ನು ಆಯೋಜಿಸಿದೆ ಮತ್ತು ಪಂದ್ಯಗಳು ಸಾಕಷ್ಟು ಹೆಚ್ಚಿನ ಸ್ಕೋರಿಂಗ್ ಆಗಿವೆ. ಆರು ಪಂದ್ಯಗಳಲ್ಲಿ, ನಾಲ್ಕು ಪಂದ್ಯಗಳನ್ನು ಚೇಸಿಂಗ್ ತಂಡವು ಗೆದ್ದಿದೆ. ಇಲ್ಲ ಆಟ ಸಾಗಿದಂತೆ ಪಿಚ್ ಬ್ಯಾಟಿಂಗ್‌ಗೆ ಉತ್ತಮಗೊಳ್ಳುತ್ತದೆ. ಹೀಗಾಗಿ ಟಾಸ್ ಕೂಡ ನಿರ್ಣಾಯಕ.
ಮುಖಾಮುಖಿ
ಇತ್ತಂಡಗಳು ಈವರೆಗೆ ಐಪಿಎಲ್ ಟೂರ್ನಿಯಲ್ಲಿ 24 ಬಾರಿ ಮುಖಾಮುಖಿಯಾಗಿವೆ. ಈ ಪೈಕಿ ಸಿಎಸ್‌ಕೆ ತಂಡ 16 ಬಾರಿ ಗೆಲುವು ಸಾಧಿಸಿದೆ. ಹೈದರಾಬಾದ್ 8 ಪಂದ್ಯ ಗೆದ್ದಿದೆ. ಆದರೆ ಈ ಬಾರಿ ಸಿಎಸ್‌ಕೆಗಿಂತ ಹೈದರಾಬಾದ್ ಬಲಿಷ್ಠವಾಗಿದೆ.
ಸಂಭಾವ್ಯ ತಂಡಗಳು
ಚೆನ್ನೈ ಸೂಪರ್ ಕಿಂಗ್ಸ್ (CSK): ಸಂಜು ಸ್ಯಾಮ್ಸನ್ (ವಿ.ಕೀ.), ಋತುರಾಜ್ ಗಾಯಕ್ವಾಡ್ (ನಾಯಕ), ಉರ್ವಿಲ್ ಪಟೇಲ್, ಕಾರ್ತಿಕ್ ಶರ್ಮಾ / MS ಧೋನಿ, ಡೆವಾಲ್ಡ್ ಬ್ರೆವಿಸ್, ಪ್ರಶಾಂತ್ ವೀರ್, ಅನ್ಶುಲ್ ಕಾಂಬೋಜ್, ನೂರ್ ಅಹ್ಮದ್, ಸ್ಪೆನ್ಸರ್ ಜಾನ್ಸನ್, ಮುಖೇಶ್ ಚೌಧರಿ, ಗುರ್ಜಪ್ನೀತ್ ಸಿಂಗ್.
ಇಂಪ್ಯಾಕ್ಟ್ ಪ್ಲೇಯರ್: ಶಿವಂ ದುಬೆ.
ಸನ್‌ರೈಸರ್ಸ್ ಹೈದರಾಬಾದ್ (SRH): ಅಭಿಷೇಕ್ ಶರ್ಮಾ, ಇಶಾನ್ ಕಿಶನ್ (wk), ಹೆನ್ರಿಚ್ ಕ್ಲಾಸೆನ್, ಸಲೀಲ್ ಅರೋರಾ, ನಿತೀಶ್ ಕುಮಾರ್ ರೆಡ್ಡಿ, ಸ್ಮರಣ್ ರವಿಚಂದ್ರನ್, ಪ್ಯಾಟ್ ಕಮಿನ್ಸ್ (c), ಶಿವಂಗ್ ಕುಮಾರ್, ಈಶಾನ್ ಮಾಲಿಂಗ, ಸಾಕಿಬ್ ಹುಸೇನ್, ಪ್ರಫುಲ್ ಹಿಂಗೆ.
ಇಂಪ್ಯಾಕ್ಟ್ ಪ್ಲೇಯರ್: ಟ್ರಾವಿಸ್ ಹೆಡ್.