ಚೆನ್ನೈ, ಮೇ 3: ಚೆನ್ನೈ ಸೂಪರ್ ಕಿಂಗ್ಸ್(CSK) ವಿರುದ್ಧ ಶನಿವಾರ ಇಲ್ಲಿನ ಚೆಪಾಕ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ, ಮುಂಬೈ ಇಂಡಿಯನ್ಸ್(MI) 8 ವಿಕೆಟ್‌ಗಳ ಹೀನಾಯ ಸೋಲು ಕಾಣುವ ಮೂಲಕ 2026ರ ಐಪಿಎಲ್(IPL 2026)ನ ಪ್ಲೇ-ಆಫ್ ರೇಸ್‌ನಿಂದ ಬಹುತೇಕ ಹೊರಬಿದ್ದಿದೆ. ಇದರ ಬೆನ್ನಲ್ಲೇ ನಾಯಕ ಹಾರ್ದಿಕ್ ಪಾಂಡ್ಯ(Hardik Pandya) ಇದು ನಮ್ಮ ಸೀಸನ್ ಅಲ್ಲ ಎಂದು ಹೇಳಿದರು.
ಪಂದ್ಯದ ಬಳಿಕ ಮಾತನಾಡುವ ವೇಳೆ ರವಿಶಾಸ್ತ್ರಿ ಅವರು ಪಾಂಡ್ಯಗೆ ಇದು ನಿಮ್ಮ ದಿನವಲ್ಲ? ಎಂದು ಕೇಳಿದರು. ಇದಕ್ಕೆ ಉತ್ತರಿಸಿದ ಪಾಂಡ್ಯ, ಇದು ನಮ್ಮ ಸೀಸನ್ ಅಲ್ಲ. ಅವರು(ಚೆನ್ನೈ) ನಮಗಿಂತ ಉತ್ತಮವಾಗಿ ಆಡಿದರು. ಅವರು ಉತ್ತಮವಾಗಿ ಬೌಲಿಂಗ್ ಮಾಡಿದರು, ಉತ್ತಮವಾಗಿ ಫೀಲ್ಡಿಂಗ್ ಮಾಡಿದರು ಮತ್ತು ನಮಗಿಂತ ಉತ್ತಮವಾಗಿ ಬ್ಯಾಟಿಂಗ್ ಮಾಡಿದರು” ಎಂದು ಹಾರ್ದಿಕ್ ಹೇಳಿದರು.
ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಬೌಲಿಂಗ್ ಮಾಡುವಾಗ ಹೆಚ್ಚು ಆಕ್ರಮಣಕಾರಿಯಾಗಿ ಬೌಲಿಂಗ್ ಮಾಡಿದ್ದರೆ ತಂಡಕ್ಕೆ ಲಾಭವಾಗುತ್ತಿತ್ತೇ ಎಂದು ಹೇಳಲಾದ ಪ್ರಶ್ನೆಗೆ ಉತ್ತರಿಸಿದ ಹಾರ್ದಿಕ್, ನಾವು ಎಷ್ಟು ಆಕ್ರಮಣಕಾರಿಯಾಗಿರುತ್ತಿದ್ದೆವು ಎಂದು ನನಗೆ ತಿಳಿದಿಲ್ಲ. ಅವರನ್ನು ಔಟ್ ಮಾಡಲು ನಾವು ಕೆಲವು ಬೆಂಕಿಯ ಚೆಂಡುಗಳನ್ನು ಎಸೆಯಬೇಕಾಗಿತ್ತು ಎಂದು ನಾನು ಭಾವಿಸುತ್ತೇನೆ. ಆದರೆ ಹೌದು, ಅದು, ನಮಗಿದ್ದ ಬೌಲಿಂಗ್ ಆಯ್ಕೆಯಾಗಿತ್ತು, ನಾವು ಅದನ್ನು ಅನುಸರಿಸಿದೆವು ಮತ್ತು ಅವರು ಸ್ಮಾರ್ಟ್ ಕ್ರಿಕೆಟ್ ಆಡಿದರು" ಎಂದು ಪಾಂಡ್ಯ ಹೇಳಿದರು.
21 ವರ್ಷಗಳ ಬಳಿಕ ಧೋನಿಯ ಗನ್ ಪಾಯಿಂಟ್ ಸಂಭ್ರಮಾಚರಣೆ ನೆನಪಿಸಿದ ಕಾರ್ತಿಕ್ ಶರ್ಮಾ
7ನೇ ಸೋಲಿನೊಂದಿಗೆ ಮುಂಬೈ 9ನೇ ಸ್ಥಾನದಲ್ಲೇ ಉಳಿದರೆ, 4ನೇ ಗೆಲುವು ಸಾಧಿಸಿದ ಚೆನ್ನೈ, ಅಂಕಪಟ್ಟಿಯಲ್ಲಿ 6ನೇ ಸ್ಥಾನಕ್ಕೇರಿದೆ. ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮುಂಬೈ 20 ಓವರಲ್ಲಿ 7 ವಿಕೆಟ್‌ಗೆ 159 ರನ್ ಗಳಿಸಿತು. ಸುಲಭ ಗುರಿ ಬೆನ್ನತ್ತಿದ ಚೆನ್ನೈ, 18.1 ಓವರ್‌ಗಳಲ್ಲಿ 2 ವಿಕೆಟ್‌ಗೆ 160 ರನ್ ಬಾರಿಸಿ ಗೆಲುವು ತನ್ನದಾಗಿಸಿಕೊಂಡಿತು.
ಚೇಸಿಂಗ್ ವೇಳೆ ಊರ್ವಿಲ್ ಪಟೇಲ್ 12 ಎಸೆತದಲ್ಲಿ 27 ರನ್ ಸಿಡಿಸಿ, ರನ್ ಗಳಿಕೆಗೆ ವೇಗ ತುಂಬಿದರೆ, ಇಂಪ್ಯಾಕ್ಟ್ ಆಟಗಾರನಾಗಿ ಕ್ರೀಸ್‌ಗಿಳಿದ ಕಾರ್ತಿಕ್ ಶರ್ಮಾ 40 ಎಸೆತದಲ್ಲಿ ಔಟಾಗದೆ 54 ರನ್ ಗಳಿಸಿದರು. ಋತುರಾಜ್ 48 ಎಸೆತದಲ್ಲಿ ಔಟಾಗದೆ 67 ರನ್ ಗಳಿಸಿದರು.
ಸಂಕ್ಷಿಪ್ತ ಸ್ಕೋರ್:
ಮುಂಬೈ 20 ಓವರಲ್ಲಿ 159/7 (ನಮನ್ 57, ರಿಕೆಲ್ಟನ್ 37, ಅನ್ಶುಲ್ 3-32, ನೂರ್ 2-26), ಚೆನ್ನೈ 18.1 ಓವರಲ್ಲಿ 160/2 (ಋತುರಾಜ್ 67*, ಕಾರ್ತಿಕ್ 54*, ಬುಮ್ರಾ 1-20).