ಮುಂಬಯಿ, ಎ. 17: ಗುರುವಾರ ರಾತ್ರಿ ನಡೆದಿದ್ದ ಐಪಿಎಲ್(IPL 2026)ನ 24ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಪಂಜಾಬ್ ಕಿಂಗ್ಸ್(MI vs PBKS) ತಂಡ 7 ವಿಕೆಟ್ ಅಂತರದ ಗೆಲವು ಸಾಧಿಸಿತು. ಈ ಗೆಲುವಿನೊಂದಿಗೆ ಪಂಜಾಬ್ ತಂಡ ಅಂಕಪಟ್ಟಿ(IPL 2026 Points Table)ಯಲ್ಲಿ ಆರ್‌ಸಿಬಿಯನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿತು.
ಪಂಜಾಬ್ ಸದ್ಯ 9 ಅಂಕದೊಂದಿಗೆ ಅಗ್ರಸ್ಥಾನಿಯಾಗಿದ್ದರೆ, ಆರ್‌ಸಿಬಿ 8 ಅಂಕ ಪಡೆದು 2ನೇ ಸ್ಥಾನಿಯಾಗಿದೆ. ರಾಜಸ್ಥಾನ್ ರಾಯಲ್ಸ್(8) ಮೂರನೇ ಸ್ಥಾನದಲ್ಲಿದೆ. ಪಂಜಾಬ್ ವಿರುದ್ಧ ಸೋತ ಮುಂಬೈ ಇಂಡಿಯನ್ಸ್(2) 9ನೇ ಸ್ಥಾನದಲ್ಲಿದೆ. ಕೆಕೆಆರ್ ಕೊನೆಯ ಸ್ಥಾನದಲ್ಲಿದೆ.
ಮಿಡ್-ಟೇಬಲ್ ಹೋರಾಟವು ಅಷ್ಟೇ ಜಟಿಲವಾಗಿದೆ, ಸನ್‌ರೈಸರ್ಸ್ ಹೈದರಾಬಾದ್, ಡೆಲ್ಲಿ ಕ್ಯಾಪಿಟಲ್ಸ್, ಗುಜರಾತ್ ಟೈಟಾನ್ಸ್, ಲಖನೌ ಸೂಪರ್ ಜೈಂಟ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಎಲ್ಲವೂ ತಲಾ ನಾಲ್ಕು ಅಂಕಗಳನ್ನು ಗಳಿಸಿವೆ. ಸನ್‌ರೈಸರ್ಸ್ ಹೈದರಾಬಾದ್ ಪ್ರಸ್ತುತ ರನ್‌ರೇಟ್ ನಾಲ್ಕನೇ ಸ್ಥಾನದಲ್ಲಿದೆ, ಡೆಲ್ಲಿ ಕ್ಯಾಪಿಟಲ್ಸ್, ಗುಜರಾತ್ ಟೈಟಾನ್ಸ್, ಲಕ್ನೋ ಸೂಪರ್ ಜೈಂಟ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಸತತವಾಗಿ ಕ್ರಮವಾಗಿ ನಂತರದ ಸ್ಥಾನದಲ್ಲಿವೆ.
GT vs KKR: ಉತ್ಸಾಹಿ ಗುಜರಾತ್ ಟೈಟಾನ್ಸ್‌ಗೆ ಹತಾಶ ಕೆಕೆಆರ್ ಸವಾಲು
ಆರೆಂಜ್ ಕ್ಯಾಪ್
ಆರೆಂಜ್ ಕ್ಯಾಪ್ ವಿಭಾಗದಲ್ಲಿ ಯಾವುದೇ ಬದಲಾವಣೆ ಸಂಭವಿಸಿಲ್ಲ. ಈ ಹಿಂದಿನಂತೆ ಆರ್‌ಸಿಬಿಯ ವಿರಾಟ್ ಕೊಹ್ಲಿ ಅಗ್ರಸ್ಥಾನದಲ್ಲಿದ್ದಾರೆ. ಅವರು ಆಡಿದ 5 ಪಂದ್ಯಗಳಿಂದ 228 ರನ್ ಬಾರಿಸಿದ್ದಾರೆ. 224 ರನ್ ಬಾರಿಸಿರುವ ಸನ್‌ರೈಸರ್ಸ್ ಹೈದರಾಬಾದ್ ತಂಡದ ಹೆನ್ರಿಚ್ ಕ್ಲಾಸೆನ್ ಎರಡನೇ ಸ್ಥಾನದಲ್ಲಿದ್ದಾರೆ. ಗುಜರಾತ್ ಟೈಟಾನ್ಸ್ ತಂಡದ ವೇಗಿ ಪ್ರಸಿದ್ಧ್ ಕೃಷ್ಣ ಪರ್ಪಲ್ ಕ್ಯಾಪ್ ಹೊಂದಿದ್ದಾರೆ. ಅವರು 10 ವಿಕೆಟ್ ಕೆಡವಿದ್ದಾರೆ.
ಇಂದಿನ ಪಂದ್ಯ
ಇಂದು(ಶುಕ್ರವಾರ) ನಡೆಯುವ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಮತ್ತು ಕೋಲ್ಕತಾ ನೈಟ್ ರೈಡರ್ಸ್ ಮುಖಾಮುಖಿಯಾಗಲಿವೆ. ಈ ಪಂದ್ಯ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂ(Narendra Modi Stadium)ನಲ್ಲಿ ನಡೆಯಲಿದೆ. ಅಜಿಂಕ್ಯ ರಹಾನೆ ಪಡೆಗೆ ಪ್ಲೇ ಆಫ್ ಆಸೆ ಜೀವಂತವಿರಿಸಬೇಕಿದ್ದರೆ ಈ ಪಂದ್ಯದಲ್ಲಿ ಗೆಲುವು ಅತ್ಯಗತ್ಯ.
ಮುಖಾಮುಖಿ
ಉಭಯ ತಂಡಗಳ ಮುಖಾಮುಖಿ ದಾಖಲೆ ನೋಡುವಾಗ ಗುಜರಾತ್ ಟೈಟಾನ್ ಬಲಿಷ್ಠವಾಗಿದೆ. ಈವರೆಗೆ ಆಡಿದ 4 ಪಂದ್ಯಗಳ ಪೈಕಿ 3 ಪಂದ್ಯ ಗೆದ್ದಿದೆ. ಕೆಕೆಆರ್ ಕೇವಲ ಒಂದು ಪಂದ್ಯ ಮಾತ್ರ ಜಯಿಸಿದೆ.
ಸಂಭಾವ್ಯ ತಂಡಗಳು
ಗುಜರಾತ್ ಟೈಟಾನ್ಸ್: ಸಾಯಿ ಸುದರ್ಶನ್, ಶುಬ್ಮನ್ ಗಿಲ್ (ನಾಯಕ), ಜೋಸ್ ಬಟ್ಲರ್ (ವಿ.ಕೀ.), ವಾಷಿಂಗ್ಟನ್ ಸುಂದರ್, ಗ್ಲೆನ್ ಫಿಲಿಪ್ಸ್, ರಾಹುಲ್ ತೆವಾಟಿಯಾ,, ರಶೀದ್ ಖಾನ್, ಕಗಿಸೊ ರಬಾಡ, ಮೊಹಮ್ಮದ್ ಸಿರಾಜ್, ಅಶೋಕ್ ಶರ್ಮಾ, ಪ್ರಸಿದ್ಧ್ ಕೃಷ್ಣ
ಇಂಪ್ಯಾಕ್ಟ್ ಪ್ಲೇಯರ್: ಶಾರುಖ್ ಖಾನ್
ಕೋಲ್ಕತ್ತಾ ನೈಟ್ ರೈಡರ್ಸ್: ಫಿನ್ ಅಲೆನ್, ಅಜಿಂಕ್ಯ ರಹಾನೆ (ನಾಯಕ), ಕ್ಯಾಮರೂನ್ ಗ್ರೀನ್, ಆಂಗ್ಕ್ರಿಶ್ ರಘುವಂಶಿ (ವಿ.ಕೀ.), ರೋವ್ಮನ್ ಪೊವೆಲ್, ರಿಂಕು ಸಿಂಗ್, ರಮಣದೀಪ್ ಸಿಂಗ್, ಅನುಕುಲ್ ರಾಯ್, ಸುನಿಲ್ ನರೈನ್, ವರುಣ್ ಚಕ್ರವರ್ತಿ, ಕಾರ್ತಿಕ್ ತ್ಯಾಗಿ
ಇಂಪ್ಯಾಕ್ಟ್ ಆಟಗಾರ: ವೈಭವ್ ಅರೋರಾ