ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಪಂಜಾಬ್‌ ಕಿಂಗ್ಸ್‌ ಗೆಲುವಿನ ಬಳಿಕ ಅಂಕಪಟ್ಟಿಯಲ್ಲಿ ಮಹತ್ವದ ಬದಲಾವಣೆ

IPL 2026 Points Table: ಪಂಜಾಬ್‌ ಪರ ಏಕಾಂಗಿ ಬ್ಯಾಟಿಂಗ್‌ ಹೋರಾಟ ನಡೆಸಿದ ಪದಾರ್ಪಣ ಪಂದ್ಯವಾಡಿದ ಕೂಪರ್ ಕಾನೋಲಿ, ಸೊಗಸಾದ ಸಿಕ್ಸರ್‌ ಮತ್ತು ಬೌಂಡರಿಗಳ ಮೂಲಕ ಚೊಚ್ಚಲ ಐಪಿಎಲ್‌ ಅರ್ಧಶತಕ ಸಿಡಿಸಿ ಮಿಂಚಿದರು. ಕೊನೆಯ ತನಕ ಅಜೇಯವಾಗಿ ಬ್ಯಾಟಿಂಗ್‌ ನಡೆಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.

Vijaykumar Vyshak

ಮುಲ್ಲನ್‌ಪುರ, ಏ.1: ಮಂಗಳವಾರ ರಾತ್ರಿ ನಡೆದಿದ್ದ ಐಪಿಎಲ್‌ ಪಂದ್ಯದಲ್ಲಿ ಪಂಜಾಬ್‌ ಕಿಂಗ್ಸ್‌(PBKS vs GT) ತಂಡ ಗುಜರಾತ್‌ ಟೈಟಾನ್ಸ್‌ ವಿರುದ್ಧ 3 ವಿಕೆಟ್‌ಗಳ ಅಂತರದ ಗೆಲುವು ಸಾಧಿಸಿತು. ಈ ಗೆಲುವಿನೊಂದೊಂದಿಗೆ ಪಂಜಾಬ್‌ ಅಂಪಟ್ಟಿಯಲ್ಲಿ(IPL 2026 Points Table) ಖಾತೆ ತೆರೆದಿದೆ. ಸದ್ಯ ಪಂಜಾಬ್‌ 2 ಅಂಕದೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ.

ರಾಜಸ್ಥಾನ್‌ ರಾಯಲ್ಸ್‌ ತಂಡ ಅಗ್ರಸ್ಥಾನ ಪಡೆದಿದೆ. ಉಳಿದಂತೆ ಆರ್‌ಸಿಬಿ ಮತ್ತು ಮುಂಬೈ ಇಂಡಿಯನ್ಸ್‌ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿದೆ. ಚೆನ್ನೈ ಸೂಪರ್‌ ಕಿಂಗ್ಸ್‌ ಕೊನೆಯ ಹತ್ತನೇ ಸ್ಥಾನದಲ್ಲಿದೆ. ಇಂದಿನ ಪಂದ್ಯದಲ್ಲಿ ಲಕ್ನೋ ಸೂಪರ್‌ ಜೈಂಟ್ಸ್‌ ಮತ್ತು ಡೆಲ್ಲಿ ಕ್ಯಾಪಿಟಲ್ಸ್‌ ತಂಡಗಳು ಮುಖಾಮುಖಿಯಾಗಲಿವೆ.

ಪಂಜಾಬ್‌ಗೆ 3 ವಿಕೆಟ್‌ ಅಂತರದ ಗೆಲುವು

ಮಹಾರಾಜ ಯಾದವೀಂದ್ರ ಸಿಂಗ್ ಅಂತರರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ಮಂಗಳವಾರ ನಡೆದಿದ್ದ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ನೆಡೆಸಿದ ಗುಜರಾತ್ ಟೈಟಾನ್ಸ್ , ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 162 ರನ್‌ ಬಾರಿಸಿತು, ಜಬಾಬಿತ್ತ ಪಂಜಾಬ್‌ ಕಿಂಗ್ಸ್‌ 19.1 ಓವರ್‌ಗಳಲ್ಲಿ 7 ವಿಕೆಟ್‌ಗೆ165 ರನ್‌ ಗಳಿಸಿ ಗೆಲುವಿನ ಶುಭಾರಂಭ ಮಾಡಿತು.

ಪಂಜಾಬ್‌ ಪರ ಏಕಾಂಗಿ ಬ್ಯಾಟಿಂಗ್‌ ಹೋರಾಟ ನಡೆಸಿದ ಪದಾರ್ಪಣ ಪಂದ್ಯವಾಡಿದ ಕೂಪರ್ ಕಾನೋಲಿ, ಸೊಗಸಾದ ಸಿಕ್ಸರ್‌ ಮತ್ತು ಬೌಂಡರಿಗಳ ಮೂಲಕ ಚೊಚ್ಚಲ ಐಪಿಎಲ್‌ ಅರ್ಧಶತಕ ಸಿಡಿಸಿ ಮಿಂಚಿದರು. ಕೊನೆಯ ತನಕ ಅಜೇಯವಾಗಿ ಬ್ಯಾಟಿಂಗ್‌ ನಡೆಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. 44 ಎಸೆತ ಎದುರಿಸಿದ ಅವರು ತಲಾ 5 ಸಿಕ್ಸರ್‌ ಮತ್ತು ಬೌಂಡರಿ ನೆರವಿನಿಂದ 72* ರನ್‌ ಬಾರಿಸಿದರು. ಗುಜರಾತ್‌ ತಂಡದ ಬೌಲರ್‌ಗಳು ಒಟ್ಟಾರೆ 14 ಸಿಕ್ಸರ್‌ಗಳನ್ನು ಹೊಡೆಸಿಕೊಂಡರು.

PBKS vs GT: 11 ಎಸೆತ ಎಸೆದು ಅನಪೇಕ್ಷಿತ ದಾಖಲೆ ಬರೆದ ಅರ್ಶ್‌ದೀಪ್‌ ಸಿಂಗ್‌

24 ಎಸೆತ ಎದುರಿಸಿದ ಪ್ರಭ್‌ಸಿಮ್ರನ್‌ 4 ಸಿಕ್ಸರ್‌ ಮತ್ತು ಒಂದು ಬೌಂಡರಿ ನೆರವಿನಿಂದ 37 ರನ್‌ ಗಳಿಸಿದರು. ನಾಯಕ ಶ್ರೇಯಸ್‌ ಅಯ್ಯರ್‌, ಕೈಗೆ ಚೆಂಡು ತಗುಲಿದ ಬಳಿಕ ನೋವಿನ ಮಧ್ಯೆ ಬಿರುಸಿನ ಬ್ಯಾಟಿಂಗ್‌ಗೆ ಮುಂದಾಗಿ ಕ್ಯಾಚ್‌ ನೀಡಿ 18 ರನ್‌ಗೆ ಔಟಾದರು.

ಗುಜರಾತ್‌ ಪರ ಶುಭಮನ್ ಗಿಲ್ (39 ರನ್) ಹಾಗೂ ಜೋಸ್ ಬಟ್ಲರ್ (38 ರನ್) ಗಳಿಸಿದರು. ಗ್ಲೆನ್‌ ಫಿಲಿಪ್ಸ್‌ 25 ರನ್‌ ಗಳಿಸಿದರು. ವಾಷಿಂಗ್ಟನ್‌ ಸುಂದರ್‌(18), ಶಾರೂಖ್‌ ಖಾನ್‌(4) ನಿರೀಕ್ಷಿತ ಬ್ಯಾಟಿಂಗ್‌ ನಡೆಸುವಲ್ಲಿ ವಿಫಲರಾದರು. ಪಂಜಾಬ್‌ ಪರ ಕನ್ನಡಿಗ ಪಂಜಾಬ್ ಕಿಂಗ್ಸ್ ಪರ ಉತ್ತಮ ದಾಳಿ ನಡೆಸಿದ ವಿಜಯಕುಮಾರ್ ವೈಶಾಕ್ 3 ವಿಕೆಟ್ ಹಾಗೂ ಯುಜ್ವೆಂದರ್ ಚಹಾಲ್ 2 ವಿಕೆಟ್ ಪಡೆದು ಮಿಂಚಿದರು. ಅನುಭವಿ ಅರ್ಶ್‌ದೀಪ್‌ ಸಿಂಗ್‌ ದುಬಾರಿಯಾದರು.