ರಾಯ್ಪುರ, ಮೇ 9: ಹಾಲಿ ಚಾಂಪಿಯನ್ ಆರ್‌ಸಿಬಿ ತಂಡ ಈ ಬಾರಿ ಐಪಿಎಲ್‌ನಲ್ಲಿ ತನ್ನ ಎರಡನೇ ತವರು ರಾಯ್ಪುರದ ಶಹೀದ್ ವೀರ್ ನಾರಾಯಣ್ ಸಿಂಗ್ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಮೊದಲ ಪಂದ್ಯವನ್ನಾಡಲು ಸಜ್ಜಾಗಿದೆ. ಭಾನುವಾರ (ಮೇ 10) ಮುಂಬೈ ಇಂಡಿಯನ್ಸ್ ವಿರುದ್ಧ ಆಡಲಿದೆ. ಕಳೆದ ಪಂದ್ಯದಲ್ಲಿ ಸೋಲು ಕಂಡಿದ್ದ ಆರ್‌ಸಿಬಿ ಮತ್ತೆ ಗೆಲುವಿನ ಹಳಿಗೆ ಮರಳುವ ವಿಶ್ವಾಸದಲ್ಲಿದೆ.
ಮುಂಬೈನ ವಾಂಖೆಡೆ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದಿದ್ದ ಇತ್ತಂಡಗಳ ಮೊದಲ ಮುಖಾಮುಖಿಯಲ್ಲಿ ಆರ್‌ಸಿಬಿ ಗೆಲುವು ಸಾಧಿಸಿತ್ತು. ಈ ಸೋಲಿಗೆ ಮುಂಬೈ ಸೇಡು ತೀರಿಸಿಕೊಂಡೀತೇ ಎನ್ನುವುದು ಪಂದ್ಯದ ಕೌತುಕ. ಸತತ ಸೋಲಿನಿಂದ ಮುಂಬೈ ಚೇತರಿಸಿಕೊಂಡಿರುವ ಕಾರಣ ಆರ್‌ಸಿಬಿಗೆ ಕಠಿಣ ಸವಾಲು ಎದುರಾಗುವ ಸಾಧ್ಯತೆ ಇದೆ.
ಅಲ್ಲದೆ ಅಂದು ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಗಾಯಗೊಂಡು ಅರ್ಧದಲ್ಲೇ ಪಂದ್ಯದಿಂದ ಹೊರ ನಡೆದಿದ್ದ ರೋಹಿತ್ ಶರ್ಮ ಸಂಪೂರ್ಣ ಚೇತರಿಕೆ ಕಂಡು ಮತ್ತೆ ತಂಡಕ್ಕೆ ಮರಳಿದ್ದಾರೆ. ಕಳೆದ ಲಖನೌ ಸೂಪರ್ ಜೈಂಟ್ಸ್ ವಿರುದ್ಧ 44 ಎಸೆತಗಳಲ್ಲಿ 84 ರನ್ ಗಳಿಸಿದ್ದರು. ಹಾರ್ದಿಕ್ ಪಾಂಡ್ಯ ಕೂಡ ಪಂದ್ಯದಲ್ಲಿ ಆಡುವ ಮೂಲಕ ಮತ್ತೆ ನಾಯಕತ್ವ ವಹಿಸಿಕೊಳ್ಳಲಿದ್ದಾರೆ.
ಆರಂಭಿಕ ಹಂತದಲ್ಲಿ ಉತ್ತಮ ಬ್ಯಾಟಿಂಗ್ ಮತ್ತು ಬೌಲಿಂಗ್ ಪ್ರದರ್ಶನದ ಮೂಲಕ ಸತತ ಗೆಲುವು ಕಂಡಿದ್ದ ಆರ್‌ಸಿಬಿ ಇದೀಗ ಸತತ ಸೋಲು ಕಾಣುತ್ತಿದೆ. ಜಿತೇಶ್ ಶರ್ಮಾ ಅವರ ಬ್ಯಾಟ್ ಇದುವರೆಗೂ ಸದ್ದು ಮಾಡಿಲ್ಲ. ರೊಮಾರಿಯೊ ಶೆಫರ್ಡ್ ನಿರೀಕ್ಷಿತ ಪ್ರದರ್ಶನ ತೋರುತ್ತಿಲ್ಲ. ಫಿಲ್ ಸಾಲ್ಟ್ ಗಾಯಗೊಂಡು ಅಲಭ್ಯರಾದ ಕಾರಣ ಅವರ ಸ್ಥಾನಕ್ಕೆ ಇದುವರೆಗೂ ಸೂಕ್ತ ಆಟಗಾರ ಸಿಕ್ಕಿಲ್ಲ. ಬೆಥಲ್ ಸಿಕ್ಕ ಅವಕಾಶ ಬಳಸಿಕೊಳ್ಳುತ್ತಿಲ್ಲ.
ರೋಹಿತ್ ಶರ್ಮಾರ 3 ಕೋಟಿಯ ವಾಚ್ ದೋಚಲು ಯತ್ನಿಸಿದ ಅಭಿಮಾನಿ; ವಿಡಿಯೊ ವೈರಲ್
ಮುಖಾಮುಖಿ
ಆಡಿದ ಪಂದ್ಯಗಳು 35
ಮುಂಬೈ ಗೆಲುವು; 19
ಆರ್‌ಸಿಬಿ ಗೆಲುವು; 15
ಸಂಭಾವ್ಯ ತಂಡಗಳು
ಮುಂಬೈ ಇಂಡಿಯನ್ಸ್: ರಿಯಾನ್ ರಿಕಲ್ಟನ್(ವಿ.ಕೀ.), ನಮನ್ ಧೀರ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ವಿಲ್ ಜಾಕ್ಸ್, ಹಾರ್ದಿಕ್ ಪಾಂಡ್ಯ, ಕಾರ್ಬಿನ್ ಬಾಷ್, ದೀಪಕ್ ಚಾಹರ್, ಜಸ್ಪ್ರೀತ್ ಬುಮ್ರಾ, ಎಎಮ್ ಗಜನ್ಫರ್, ರಘು ಶರ್ಮಾ
ಇಂಪ್ಯಾಕ್ಟ್ ಪ್ಲೇಯರ್: ರೋಹಿತ್ ಶರ್ಮ.
ಆರ್‌ಸಿಬಿ: ಜಾಕೋಬ್ ಬೆಥೆಲ್, ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್ (ನಾಯಕ), ಜಿತೇಶ್ ಶರ್ಮಾ (ವಿ.ಕೀ.), ಕೃನಾಲ್ ಪಾಂಡ್ಯ, ರೊಮಾರಿಯೋ ಶೆಫರ್ಡ್, ಭುವನೇಶ್ವರ್ ಕುಮಾರ್, ಸುಯಶ್ ಶರ್ಮಾ, ರಾಸಿಖ್ ಸಲಾಮ್ ದಾರ್, ಜೋಶ್ ಹ್ಯಾಜಲ್‌ವುಡ್.
ಇಂಪ್ಯಾಕ್ಟ್ ಪ್ಲೇಯರ್: ಟಿಮ್ ಡೇವಿಡ್.