ಮುಲ್ಲನ್‌ಪುರ, ಮೇ 30: ಮುಲ್ಲನ್‌ಪುರದಲ್ಲಿ ನಡೆದ ರಾಜಸ್ಥಾನ ರಾಯಲ್ಸ್ ಮತ್ತು ಗುಜರಾತ್ ಟೈಟಾನ್ಸ್(RR vs GT) ನಡುವಿನ ಐಪಿಎಲ್ 2026ರ ಕ್ವಾಲಿಫೈಯರ್ 2(IPL 2026 Qualifier 2) ಪಂದ್ಯದ ಶತಕ ಬಾರಿಸು ಅವಕಾಶವಿದ್ದರೂ ಇದನ್ನೂ ತಪ್ಪಿಸಿಕೊಂಡ ವೈಭವ್ ಸೂರ್ಯವಂಶಿಗೆ ಡಗೌಟ್‌ನಲ್ಲಿ ನಾಯಕ ನಾಯಕ ರಿಯಾನ್ ಪರಾಗ್(Riyan Parag ತರಾಟೆಗೆ ತೆಗೆದುಕೊಂಡ ವಿಡಿಯೊವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕಳೆದ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿಯೂ 3 ರನ್ ಅಂತರದಿಂದ ಶತಕ ವಂಚಿತರಾಗಿದ್ದರು. ಶುಕ್ರವಾರದ ಪಂದ್ಯದಲ್ಲಿಯೂ ನಾಲ್ಕು ರನ್ ಅಂತರದಲ್ಲಿ ಮತ್ತೆ ಶತಕ ತಪ್ಪಿಸಿಕೊಂಡರು. ಔಟ್ ಆಗಿ ಪೆವಿಲಿಯನ್‌ಗೆ ಬಂದ ವೇಳೆ ನಾಯಕ ಪರಾಗ್ ಅವರು ಸೂರ್ಯವಂಶಿಗೆ ನಿಧಾನವಾಗಿ ಆಡಿ ಶತಕ ಬಾರಿಸುವ ಅವಕಾಶವಿದ್ದರೂ ಆತುರದ ಬ್ಯಾಟಿಂಗ್ ನಡೆಸಿದ್ದಕ್ಕೆ ಬೈದರು. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸೂರ್ಯವಂಶಿ ಔಟಾಗುವ ವೇಳೆ ಸುಮಾರು ಮೂರು ಓವರ್ ಕೂಡ ಬಾಕಿ ಇತ್ತು. 47 ಎಸೆತದಲ್ಲಿ 96 ರನ್‌ಗೆ ಔಟಾಗಿ ಮತ್ತೊಮ್ಮೆ ಶತಕದಿಂದ ವಂಚಿತರಾದರು.
ಕ್ವಾಲಿಫೈಯರ್-2 ಪಂದ್ಯಕ್ಕೆ ನೂರಾರು ಅಭಿಮಾನಿಗಳು ‘ಸೂರ್ಯವಂಶಿ’ ಹೆಸರಿನ ಜೆರ್ಸಿಗಳನ್ನು ತೊಟ್ಟು ಕ್ರೀಡಾಂಗಣಕ್ಕೆ ಆಗಮಿಸಿದ್ದೇ ಸಾಕ್ಷಿ. ಇನ್ನು, ವೈಭವ್‌ರ 96 ರನ್ ಇನ್ನಿಂಗ್ಸ್‌ಗೂ ಹಲವು ಕ್ರಿಕೆಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸೋಲಿನ ನಿರಾಶೆ ಆವರಿಸಿದಾಗ ಸೂರ್ಯವಂಶಿ ಆರಂಭದಲ್ಲಿ ತನ್ನ ಭಾವನೆಗಳನ್ನು ತನ್ನ ಕ್ಯಾಪ್‌ನಿಂದ ಮರೆಮಾಡಲು ಪ್ರಯತ್ನಿಸಿದರು, ನಂತರ ಟವಲ್‌ನಿಂದ ಮುಖ ಮುಚ್ಚಿಕೊಂಡರು. ಗಮನಾರ್ಹವಾಗಿ, ಒತ್ತಡದ ಪಂದ್ಯದಲ್ಲಿ ಅಮೋಘ ಇನ್ನಿಂಗ್ಸ್ ಪ್ರದರ್ಶಿಸಿದರು. ಆದರೆ ತಂಡ ಗೆಲುವು ಕಾಣದ ಕಾರಣ ಅವರಿಗೆ ಮತ್ತು ರಾಜಸ್ಥಾನ್ ರಾಯಲ್ಸ್ ಇಬ್ಬರಿಗೂ ದುಃಖ ತರಿಸಿತು.
ಶತಕ ಸಿಡಿಸಿ ಹಲವು ದಾಖಲೆ ಬರೆದ ಶುಭಮನ್ ಗಿಲ್; ದಾಖಲೆ ಪಟ್ಟಿ ಹೀಗಿದೆ
ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ, ಆರಂಭಿಕ ಆಘಾತದ ಹೊರತಾಗಿಯೂ 20 ಓವರಲ್ಲಿ 6 ವಿಕೆಟ್ ನಷ್ಟಕ್ಕೆ 214 ರನ್ ಕಲೆಹಾಕಿತು ಗುಜರಾತ್ ಬೃಹತ್ ಗುರಿಯನ್ನು ಸುಲಭವಾಗಿ ಬೆನ್ನತ್ತಿತು. ನಾಯಕ ಶುಭ್‌ಮನ್ ಗಿಲ್ ಅಮೋಘ ಶತಕ ಸಿಡಿಸಿದರು. ಮೊದಲ ವಿಕೆಟ್‌ಗೆ ಸಾಯಿ ಸುದರ್ಶನ್ ಜೊತೆ 12.5 ಓವರಲ್ಲಿ 167 ರನ್ ಜೊತೆಯಾಟವಾಡಿದರು. 32 ಎಸೆತದಲ್ಲಿ 58 ರನ್ ಗಳಿಸಿದ ಸುದರ್ಶನ್ ಕಳೆದ ಪಂದ್ಯದಂತೆ ಈ ಪಂದ್ಯದಲ್ಲೂ ಹಿಟ್ ವಿಕೆಟ್ ಆಗಿ ಔಟಾದರು. ಆದರೆ ಗಿಲ್ ಅಬ್ಬರ ನಿಲ್ಲಲಿಲ್ಲ. 53 ಎಸೆತದಲ್ಲಿ 15 ಬೌಂಡರಿ, 3 ಸಿಕ್ಸರ್‌ನೊಂದಿಗೆ 104 ರನ್ ಸಿಡಿಸಿದರು.