ಗುವಾಹಟಿ, ಮಾ.29: ಸೋಮವಾರ (ಮಾ.30) ಗುವಾಹಟಿಯ ಬರ್ಸಾಪರ ಕ್ರಿಕೆಟ್ ಮೈದಾನದಲ್ಲಿ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) 2026 ರ ಪಂದ್ಯ ಸಂಖ್ಯೆ 3 ರಲ್ಲಿ ರಾಜಸ್ಥಾನ್ ರಾಯಲ್ಸ್ (Rajasthan Royals) ಮತ್ತು ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ಮುಖಾಮುಖಿಯಾಗಲಿವೆ. ಈ ಬಾರಿ ಚೆನ್ನೈ ಸೂಪರ್ ಕಿಂಗ್ಸ್(IPL 2026 RR vs CSK Preview) ಪರ ಆಡುತ್ತಿರುವ ಸಂಜು ಸ್ಯಾಮ್ಸನ್, ಮತ್ತು ರಾಜಸ್ಥಾನ್ ಪರ ಆಡಲಿರುವ ರವೀಂದ್ರ ಜಡೇಜಾ ಪಾಲಿಗೆ ಇದು ಭಾವನಾತ್ಮಕ ಪಂದ್ಯ.
ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ಮಹತ್ವದ ಬದಲಾವಣೆಗಳಾಗಿವೆ. 2026ರ ಹರಾಜಿಗೂ ಮುನ್ನ ತನ್ನ ದೀರ್ಘಕಾಲದ ನಾಯಕ ಸಂಜು ಸ್ಯಾಮ್ಸನ್‌ರನ್ನೇ ಚೆನ್ನೈಗೆ ಮಾರಾಟ ಮಾಡಿ, ಜಡೇಜಾ ಹಾಗೂ ಸ್ಯಾಮ್ ಕರನ್‌ರನ್ನು ಖರೀದಿಸಿತ್ತು. ಬಳಿಕ ಸಂಜು ಟಿ20 ವಿಶ್ವಕಪ್‌ನಲ್ಲಿ ಅಬ್ಬರಿಸಿ ಭಾರತಕ್ಕೆ ಕಪ್ ಗೆಲ್ಲಿಸಿಕೊಡಲು ನೆರವಾಗಿದ್ದರು. ಈ ಬಾರಿ ಸಂಜು ಬದಲು ರಿಯಾನ್ ಪರಾಗ್ ನಾಯಕತ್ವ ವಹಿಸಲಿದ್ದಾರೆ. ತಂಡದಲ್ಲಿರುವ ಬಹುತೇಕರು ಯುವ ಆಟಗಾರರು. ವೈಭವ್ ಸೂರ್ಯವಂಶಿ ಮೇಲೆ ಎಲ್ಲರ ಕಣ್ಣಿದ್ದು, ಯಶಸ್ವಿ ಜೈಸ್ವಾಲ್, ಧ್ರುವ್ ಜುರೆಲ್, ಹೆಟ್ಮೇಯರ್ ಯಾವ ರೀತಿ ಪ್ರದರ್ಶನ ನೀಡಲಿದ್ದಾರೆ ಕಾದು ನೋಡಬೇಕಿದೆ. ರವೀಂದ್ರ ಜಡೇಜಾ ಪ್ರದರ್ಶನ ತಂಡಕ್ಕೆ ನಿರ್ಣಾಯಕ.
ಧೋನಿ ಅಲಭ್ಯ
ಸ್ನಾಯು ಸೆಳೆತದಿಂದ ಬಳಲುತ್ತಿರುವ ಎಂ.ಎಸ್ ಧೋನಿ ಅವರು ತಂಡದೊಂದಿಗೆ ಗುವಾಹಟಿಗೆ ಪ್ರಯಾಣ ಬೆಳೆಸಿಲ್ಲ. ಅವರ ಅನುಪಸ್ಥಿತಿಯಲ್ಲಿ ಸ್ಯಾಮ್ಸನ್ ಕೀಪಿಂಗ್ ಜವಾಬ್ದಾರಿ ನಿರ್ವಹಿಸಬಹುದು. ಧೋನಿ ಕನಿಷ್ಠ ಎರಡು ವಾರಗಳ ಕಾಲ ಆಟದಿಂದ ಹೊರಗುಳಿದಿದ್ದಾರೆ. ಧೋನಿ ಅವರ ಅನುಪಸ್ಥಿತಿಯು ದೇಶೀಯ ಟಿ 20 ಗಳಲ್ಲಿ ಪ್ರಭಾವ ಬೀರಿದ 20 ವರ್ಷದ ಎಡಗೈ ಸ್ಪಿನ್ ಆಲ್‌ರೌಂಡರ್ ಪ್ರಶಾಂತ್ ವೀರ್ ಮತ್ತು ಕಾರ್ತಿಕ್ ಶರ್ಮಾ ಅವರಂತಹ ಉದಯೋನ್ಮುಖ ಆಟಗಾರರಿಗೆ ತಂಡದಲ್ಲಿ ಬಾಗಿಲು ತೆರೆಯುವ ಸಾಧ್ಯತೆ ಇದೆ.
ʼ2 ವರ್ಷಗಳ ನಿಷೇಧ ಸಾಕಾಗುವುದಿಲ್ಲʼ: ಐಪಿಎಲ್ ನಿಯಮ ಕಠಿಣಗೊಳಿಸಲು ಬಿಸಿಸಿಐಗೆ ಸುನಿಲ್ ಗವಾಸ್ಕರ್ ಒತ್ತಾಯ
ಡೆವಾಲ್ಡ್ ಬ್ರೆವಿಸ್, ಶಿವಂ ದುಬೆ ಮಧ್ಯಮ ಕ್ರಮಾಂಕದ ಬಲವಾಗಿದ್ದಾರೆ. ನೂರ್ ಅಹ್ಮದ್, ಅಕೀಲ್ ಹೊಸೇನ್, ಮ್ಯಾಟ್ ಹೆನ್ರಿ ಮತ್ತು ಖಲೀಲ್ ಅಹ್ಮದ್ ಅವರ ಬೌಲಿಂಗ್ ದಾಳಿಯು ವೈವಿಧ್ಯತೆ ಮತ್ತು ನಿಯಂತ್ರಣದಿಂದ ಕೂಡಿದೆ.