ಜೈಪುರ, ಮೇ 10: ಶನಿವಾರ ನಡೆದ 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026)ನ 52ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ (Gujarat Titans) ತಂಡ ರಾಜಸ್ಥಾನ್ ರಾಯಲ್ಸ್ (Rajasthan Royals) ವಿರುದ್ಧ 77 ರನ್‌ಗಳ ಸೋಲನ್ನು ಅನುಭವಿಸಿತು. ಈ ಪಂದ್ಯ ಹಲವು ದಾಖಲೆಗೆ ಸಾಕ್ಷಿಯಾಯಿತು. ದಾಖಲೆಯ ಪಟ್ಟಿ ಹೀಗಿದೆ.
ಶುಭಮನ್ ಗಿಲ್ ಮತ್ತು ಸಾಯಿ ಸುದರ್ಶನ್ ಆರ್‌ಆರ್ ವಿರುದ್ಧ ಜಿಟಿ ಪರ ಯಾವುದೇ ವಿಕೆಟ್‌ಗೆ ಅತ್ಯಧಿಕ ಜೊತೆಯಾಟ (118) ನಡೆಸಿದ ದಾಖಲೆ ನಿರ್ಮಿಸಿದರು.
ಶುಭಮನ್ ಗಿಲ್ ಮತ್ತು ಸಾಯಿ ಸುದರ್ಶನ್ ಐಪಿಎಲ್ ಇತಿಹಾಸದಲ್ಲಿ ಎರಡನೇ ಅತಿ ಹೆಚ್ಚು ಶತಕಗಳ ಜೊತೆಯಾಟ (9) ನಡೆಸಿದರು.
ಗುಜರಾತ್ ಟೈಟಾನ್ಸ್ಐ ಪಿಎಲ್ ಇತಿಹಾಸದಲ್ಲಿ ನಾಲ್ಕನೇ ಅತಿ ಹೆಚ್ಚು ಮೊತ್ತ (229) ದಾಖಲಿಸಿತು.
ಗುಜರಾತ್ ಟೈಟಾನ್ಸ್ ಮೊದಲ ಬಾರಿಗೆ ಅತಿ ಹೆಚ್ಚು ರನ್(77)ಗಳ ಅಂತರದ ಜಯ ಸಾಧಿಸಿತು.
ರಶೀದ್ ಖಾನ್ ಐಪಿಎಲ್‌ನಲ್ಲಿ ಮೂರನೇ ಅತ್ಯುತ್ತಮ (4-33) ಬೌಲಿಂಗ್ ಪ್ರದರ್ಶನ ತೋರಿದರು.
ರಶೀದ್ ಖಾನ್ ಐಪಿಎಲ್‌ನಲ್ಲಿ ಸ್ಪಿನ್ನರ್‌ಗಳಲ್ಲಿ ಎರಡನೇ ಅತಿ ಹೆಚ್ಚು 3 ವಿಕೆಟ್ ಗೊಂಚಲು (18) ಪಡೆದ ಸಾಧನೆ ಮಾಡಿದರು.
ವೈಭವ್ ಸೂರ್ಯವಂಶಿ ತಮ್ಮ ಟಿ20 ವೃತ್ತಿಜೀವನದಲ್ಲಿ 100 ಸಿಕ್ಸರ್‌ಗಳನ್ನು ತಲುಪಿದರು.
ಧ್ರುವ್ ಜುರೆಲ್ ಐಪಿಎಲ್ ವೃತ್ತಿಜೀವನದಲ್ಲಿ 50 ಸಿಕ್ಸರ್‌ಗಳನ್ನು ಬಾರಿಸಿದರು.
ಪಂದ್ಯ ಗೆದ್ದು ಎರಡನೇ ಸ್ಥಾನಕ್ಕೇರಿದ ಗುಜರಾತ್
ಗುಜರಾತ್ ತಂಡವು ಟೂರ್ನಿಯಲ್ಲಿ ಏಳನೇ ಜಯದೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಏರಿದೆ. ರಾಯಲ್ಸ್ ತಂಡವು ಐದನೇ ಸ್ಥಾನಕ್ಕೆ ಕುಸಿದಿದೆ. ಕಳೆದ ಎರಡು ವಾರಗಳ ಅವಧಿಯಲ್ಲಿ ಮೊದಲ ಬಾರಿಗೆ ಅಗ್ರ ನಾಲ್ಕು ತಂಡಗಳು ಬದಲಾಗಿವೆ. ಎಸ್‌ಆರ್‌ಹೆಚ್, ಪಿಬಿಕೆಎಸ್, ಆರ್‌ಆರ್ ಮತ್ತು ಆರ್‌ಸಿಬಿ ಮೊದಲ ನಾಲ್ಕು ಸ್ಥಾನಗಳಲ್ಲಿದ್ದವು ಆದರೆ ಈಗ ಜಿಟಿ ತಂಡವು ತಮ್ಮ ವೇಗವನ್ನು ಹೆಚ್ಚಿಸಿಕೊಂಡು ಎರಡನೇ ಸ್ಥಾನವನ್ನು ಪಡೆದುಕೊಂಡಿದೆ.
CSK vs LSG ಪಂದ್ಯಕ್ಕೆ ಹಾಜರಾಗುವ ಅಭಿಮಾನಿಗಳಿಗೆ ಚೆನ್ನೈ ಸೂಪರ್ ಕಿಂಗ್ಸ್ ಮಹತ್ವದ ಸಲಹೆ
ಪಂದ್ಯದಲ್ಲಿ ಟಾಸ್ ಗೆದ್ದ ರಾಜ್ಥಾನ್ ತಂಡವು ಫೀಲ್ಡಿಂಗ್ ಆಯ್ದುಕೊಂಡಿತು. ಆದರೆ ಆಯ್ಕೆಗೆ ತಕ್ಕ ಪ್ರದರ್ಶನ ತೋರುವಲ್ಲಿ ವಿಫಲಾಯಿತು. ಗುಜರಾತ್ ತಂಡವು 4 ವಿಕೆಟ್‌ಗೆ 229 ರನ್‌ಗಳ ಭಾರಿ ಮೊತ್ತ ಗಳಿಸಿತು. ಗುರಿ ಬೆನ್ನಟ್ಟಿದ ರಾಜಸ್ಥಾನ ತಂಡವು ರಶೀದ್ (33ಕ್ಕೆ 4), ಜೇಸನ್ ಹೋಲ್ಡರ್ (13ಕ್ಕೆ 3) ಮತ್ತು ಕಗಿಸೊ ರಬಾಡ (33ಕ್ಕೆ 2) ದಾಳಿಗೆ ತತ್ತರಿಸಿ 16.3 ಓವರ್‌ಗಳಲ್ಲಿ 152 ರನ್‌ಗೆ ಸರ್ವಪತನ ಕಂಡಿತು.
ಸಂಕ್ಷಿಪ್ತ ಸ್ಕೋರು
ಗುಜರಾತ್ ಟೈಟನ್ಸ್: 20 ಓವರ್‌ಗಳಲ್ಲಿ 4 ವಿಕೆಟ್‌ಗೆ 229 (ಸಾಯಿ ಸುದರ್ಶನ್ 55, ಶುಭಮನ್ ಗಿಲ್ 84, ವಾಷಿಂಗ್ಟನ್ ಸುಂದರ್ ಔಟಾಗದೇ 37; ಬ್ರಿಜೇಶ್ ಶರ್ಮಾ 47ಕ್ಕೆ2). ರಾಜಸ್ಥಾನ ರಾಯಲ್ಸ್: 16.3 ಓವರ್‌ಗಳಲ್ಲಿ 152 (ವೈಭವ್ ಸೂರ್ಯವಂಶಿ 36, ಧ್ರುವ್ ಜುರೇಲ್ 24, ರವೀಂದ್ರ ಜಡೇಜ 38; ರಶೀದ್ ಖಾನ್ 33ಕ್ಕೆ4, ಜೇಸನ್ ಹೋಲ್ಡರ್ 12ಕ್ಕೆ3, ಕಗಿಸೊ ರಬಾಡ 33ಕ್ಕೆ2).