ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ದಂಡದ ಶಿಕ್ಷೆ ತಪ್ಪಿಸಲು ಕ್ಯಾಮೆರಾಮೆನ್ ಶೂಗಳನ್ನು ಎರವಲು ಪಡೆದ ಶ್ರೇಯಸ್ ಅಯ್ಯರ್

Shreyas Iyer borrows cameraman's shoes: ಸದ್ಯ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಶ್ರೇಯಸ್ ಅಯ್ಯರ್ ಅವರ ಬ್ಯಾಟಿಂಗ್ ಹಾಗೂ ಅವರ ನಾಯಕತ್ವದ ಗುಣಗಳನ್ನು ಕಂಡಂತಹ ಕ್ರಿಕೆಟ್ ಅಭಿಮಾನಿಗಳು ಹಾಗೂ ಕ್ರಿಕೆಟ್ ಪರಿಣಿತರು ಶ್ರೇಯಸ್ ಅಯ್ಯರ್ ಅವರು ಮುಂಬರುವ ದಿನಗಳಲ್ಲಿ ಭಾರತ ಕ್ರಿಕೆಟ್ ತಂಡದ ಬಿಳಿ ಚೆಂಡಿನ ನಾಯಕರಾಗಬೇಕು ಎಂಬ ಮುಕ್ತವಾದ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

Shreyas Iyer borrows cameraman's shoes

ಮುಲ್ಲನ್‌ಪುರ, ಎ.21: ಪ್ರಿಲ್ 19 ರಂದು ಮುಲ್ಲನ್‌ಪುರದ ನ್ಯೂ ಪಿಸಿಎ ಕ್ರೀಡಾಂಗಣದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಪಂಜಾಬ್‌ ಕಿಂಗ್ಸ್‌(PBKS vs LSG) ತಂಡದ ನಾಯಕ ಶ್ರೇಯಸ್ ಅಯ್ಯರ್(Shreyas Iyer) ಅವರು ಪಂದ್ಯದ ಪ್ರಸ್ತುತಿ ಸಮಾರಂಭಕ್ಕೆ ತೆರಳುವ ಮೊದಲು ಕ್ಯಾಮೆರಾಮನ್‌ನಿಂದ ಶೂಗಳನ್ನು ಎರವಲು ಪಡೆದ ವಿಡಿಯೊವೊಂದು ಭಾರೀ ವೈರಲ್‌ ಆಗಿದೆ.

ಪಂದ್ಯದ ನಂತರ, ಶ್ರೇಯಸ್ ಚಪ್ಪಲಿ ಧರಿಸಿ ಮೈದಾನದಲ್ಲಿ ಓಡಾಡುತ್ತಿರುವುದು ಕಂಡುಬಂದಿತು. ಬಿಸಿಸಿಐ ಶಿಷ್ಟಾಚಾರದ ಪ್ರಕಾರ, ಆಟಗಾರರು ಚಪ್ಪಲಿ ಅಥವಾ ತೋಳಿಲ್ಲದ ಜೆರ್ಸಿಯಲ್ಲಿ ಪಂದ್ಯದ ನಂತರದ ಪ್ರಸ್ತುತಿಗಳಿಗೆ ಹಾಜರಾಗುವುದನ್ನು ನಿಷೇಧಿಸಲಾಗಿದೆ ಮತ್ತು ನಿಯಮಗಳನ್ನು ಉಲ್ಲಂಘಿಸಿದರೆ ಗಣನೀಯ ದಂಡ ವಿಧಿಸಬಹುದು.

ಪಂದ್ಯದ ನಂತರದ ಪ್ರಸ್ತುತಿಯಲ್ಲಿ ತನ್ನ ಕರ್ತವ್ಯಗಳ ಬಗ್ಗೆ ಎಚ್ಚರಿಸಲ್ಪಟ್ಟ ನಂತರ ಅಯ್ಯರ್ ಹತ್ತಿರದ ಕ್ಯಾಮೆರಾಮನ್‌ನಿಂದ ಶೂಗಳನ್ನು ಎರವಲು ಪಡೆಯುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.

ಸದ್ಯ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಶ್ರೇಯಸ್ ಅಯ್ಯರ್ ಅವರ ಬ್ಯಾಟಿಂಗ್ ಹಾಗೂ ಅವರ ನಾಯಕತ್ವದ ಗುಣಗಳನ್ನು ಕಂಡಂತಹ ಕ್ರಿಕೆಟ್ ಅಭಿಮಾನಿಗಳು ಹಾಗೂ ಕ್ರಿಕೆಟ್ ಪರಿಣಿತರು ಶ್ರೇಯಸ್ ಅಯ್ಯರ್ ಅವರು ಮುಂಬರುವ ದಿನಗಳಲ್ಲಿ ಭಾರತ ಕ್ರಿಕೆಟ್ ತಂಡದ ಬಿಳಿ ಚೆಂಡಿನ ನಾಯಕರಾಗಬೇಕು ಎಂಬ ಮುಕ್ತವಾದ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.



ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ಪಂಜಾಬ್ ಕಿಂಗ್ಸ್ ತಂಡ, ಪ್ರಿಯಾಂಶ್ ಆರ್ಯ ಮತ್ತು ಕೂಪರ್ ಕೊನೊಲಿ ಜೋಡಿಯ 182 ರನ್‌ಗಳ ಅದ್ಭುತ ಜತೆಯಾಟದ ನೆರವಿನಿಂದ 7 ವಿಕೆಟ್‌ಗೆ 254 ಬೃಹತ್‌ ಮೊತ್ತ ಕಲೆಹಾಕಿತು. ಬೃಹತ್‌ ಮೊತ್ತವನ್ನು ಒಂದು ಹಂತದ ವರೆಗೆ ದಿಟ್ಟ ಬ್ಯಾಟಿಂಗ್‌ ಮೂಲಕ ಬೆನ್ನಟಿಕೊಂಡು ಬಂದ ಲಖನೌ, ಅಂತಿಮವಾಗಿ 5 ವಿಕೆಟ್‌ಗೆ 200 ರನ್‌ ಗಳಿಸಲಷ್ಟೇ ಶಕ್ತವಾಯಿತು. 6 ಪಂದ್ಯಗಳಲ್ಲಿ 5ನೇ ಗೆಲುವು ಸಾಧಿಸಿದ ಶ್ರೇಯಸ್ ಅಯ್ಯರ್‌ ಪಡೆ ಅಂಕಪಟ್ಟಿಯಲ್ಲಿ ತನ್ನ ಅಗ್ರಸ್ಥಾನವನ್ನು ಮತಷ್ಟು ಗಟ್ಟಿಗೊಳಿಸಿತು. ಲಖನೌ 4ನೇ ಸೋಲು ಕಂಡಿತು.

ಆಫ್ಘಾನ್‌ ಟೆಸ್ಟ್‌ ಸರಣಿಯಿಂದ ಗಿಲ್‌, ಬುಮ್ರಾಗೆ ವಿಶ್ರಾಂತಿ ಸಾಧ್ಯತೆ

ಬಿರುಸಿನ ಬ್ಯಾಟಿಂಗ್‌ ನಡೆಸಿದ ಪ್ರಿಯಾಂಶ್ ಆರ್ಯ ಕೇಲವ 37 ಎಸೆತಗಳಿಂದ ಸೊಗಸಾದ 9 ಸಿಕ್ಸರ್‌ ಮತ್ತು 4 ಬೌಂಡರಿ ಸಿಡಿಸಿ 93 ರನ್‌ ಬಾರಿಸಿದರು. ಕೇವಲ 7 ರನ್‌ ಅಂತರದಿಂದ ಶತಕ ವಂಚಿತರಾದರು. ಇವರ ಜತೆಗಾರ ಕೊನೋಲಿ 7 ಸಿಕ್ಸರ್‌ ಮತ್ತು 8 ಬೌಂಡರಿ ನೆರವಿನಿಂದ 87 ರನ್‌ ಕಲೆಹಾಕಿದರು. ಕೆಲ ಕ್ರಮಾಂಕದಲ್ಲಿ ಮಾರ್ಕಸ್‌ ಸ್ಟೋಯಿನಿಸ್‌ 29 ರನ್‌ ಬಾರಿಸಿ ತಂಡದ ಬೃಹತ್‌ ಮೊತ್ತಕ್ಕೆ ನೆರವಾಗಿದ್ದರು.