ಲಕ್ನೋ, ಎ.2: ಬುಧವಾರ ನಡೆದಿದ್ದ ಐಪಿಎಲ್(IPL 2026) ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್(LSG vs DC) ತಂಡ ಲಕ್ನೋ ಸೂಪರ್‌ಜೈಂಟ್ಸ್ ವಿರುದ್ಧ 6 ವಿಕೆಟ್ ಅಂತರದ ಗೆಲುವು ಸಾಧಿಸುವ ಮೂಲಕ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ಜತೆಗೆ ಅಂಕಪಟ್ಟಿಯಲ್ಲಿಯೂ(IPL 2026 updated points table) ಉತ್ತಮ ಸ್ಥಾನ ಗಳಿಸಿತು.
ಡೆಲ್ಲಿ ತಂಡ ಈ ಗೆಲುವಿನೊಂದಿಗೆ ಸದ್ಯ ಮೂರನೇ ಸ್ಥಾನದಲ್ಲಿದೆ. ಈ ಹಿಂದೆ ಮೂರನೇ ಸ್ಥಾನದಲ್ಲಿದ್ದ ಮುಂಬೈ ಇಂಡಿಯನ್ಸ್ ನಾಲ್ಕನೇ ಸ್ಥಾನಕ್ಕೆ ಕುಸಿದಿದೆ. ಪಂಜಾಬ್ ಕಿಂಗ್ಸ್ 5ನೇ ಸ್ಥಾನಿಯಾಗಿದೆ. ಅಗ್ರ ಎರಡು ಸ್ಥಾನಗಳಲ್ಲಿ ಯಾವುದೇ ಬದಲಾವಣೆ ಸಂಭವಿಸಿಲ್ಲ. ರಾಜಸ್ಥಾನ್ ರಾಯಲ್ಸ್ ಅಗ್ರಸ್ಥಾನ ಪಡೆದಿದ್ದರೆ, ಆರ್‌ಸಿಬಿ ದ್ವಿತೀಯ ಸ್ಥಾನಿಯಾಗಿದೆ.
ಪಂದ್ಯದ ಬಗ್ಗೆ ಹೇಳುವುದಾದರೆ ಏಕನಾ ಕ್ರೀಡಾಂಗಣದಲ್ಲಿ ನಡೆದಿದ್ದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಲಕ್ನೋ ತಂಡ 141 ರನ್‌ಗೆ ಸರ್ವಪತನ ಕಂಡಿತು. ಗುರಿ ಬೆನ್ನಟ್ಟಿದ ಡೆಲ್ಲಿ ತಂಡ ಆರಂಭಿಕ ಆಘಾತದ ಹೊರತಾಗಿಯೂ 17.1 ಓವರ್‌ಗಳಲ್ಲಿ 4 ವಿಕೆಟ್‌ಗೆ 144 ರನ್ ಬಾರಿಸಿ ಗೆಲುವು ದಾಖಲಿಸಿತು.
ಇಂದಿನ ಪಂದ್ಯ
ಗುರುವಾರದ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಮತ್ತು ಕೋಲ್ಕತಾ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾಗಲಿವೆ. ಕೆಕೆಆರ್ ಮುಂಬೈ ಇಂಡಿಯನ್ಸ್ ವಿರುದ್ಧ ಆರು ವಿಕೆಟ್‌ಗಳಿಂದ ಸೋತರೆ, ಸನ್‌ರೈಸರ್ಸ್ ತಂಡ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಆರು ವಿಕೆಟ್‌ಗಳ ಸೋಲನ್ನು ಅನುಭವಿಸಿತ್ತು.
IPL 2026: DC vs LSG ಪಂದ್ಯದಲ್ಲಿ ಗಂಟೆಗೆ 150 ಕಿಮಿ ವೇಗದಲ್ಲಿ ಬೌಲ್ ಮಾಡಿದ ಪ್ರಿನ್ಸ್ ಯಾದವ್ ಯಾರು?
ಬ್ಯಾಟಿಂಗ್‌ನಲ್ಲಿ ಹೆಚ್ಚು ಪ್ರಾಬಲ್ಯ ಹೊಂದಿರುವ ಎರಡು ತಂಡಗಳು ಪರಸ್ಪರ ಮುಖಾಮುಖಿಯಾಗಲು ಕಾಯುತ್ತಿರುವುದರಿಂದ, ಗುರುವಾರ ಅಭಿಮಾನಿಗಳು ಸಾಕಷ್ಟು ಬೌಂಡರಿಗಳು ಮತ್ತು ಸಿಕ್ಸರ್‌ಗಳನ್ನು ನಿರೀಕ್ಷಿಸಬಹುದು.
ಸಂಭಾವ್ಯ ಆಡುವ ಬಳಗ
ಕೋಲ್ಕತಾ ನೈಟ್ ರೈಡರ್ಸ್: ಅಜಿಂಕ್ಯ ರಹಾನೆ (ನಾಯಕ), ಫಿನ್ ಅಲೆನ್, ಕ್ಯಾಮೆರಾನ್ ಗ್ರೀನ್, ಆಂಗ್ಕ್ರಿಶ್ ರಘುವಂಶಿ (ವಿ.ಕೀ.), ರಿಂಕು ಸಿಂಗ್, ರಮಣದೀಪ್ ಸಿಂಗ್, ಅನುಕುಲ್ ರಾಯ್, ಸುನಿಲ್ ನರೈನ್, ವರುಣ್ ಚಕ್ರವರ್ತಿ, ವೈಭವ್ ಅರೋರಾ, ಬ್ಲೆಸ್ಸಿಂಗ್ ಮುಜರಬಾನಿ.
ಇಂಪ್ಯಾಕ್ಟ್ ಪ್ಲೇಯರ್: ಕಾರ್ತಿಕ್ ತ್ಯಾಗಿ.
ಸನ್‌ರೈಸರ್ಸ್ ಹೈದರಾಬಾದ್: ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ, ಇಶಾನ್ ಕಿಶನ್ (ನಾಯಕ/ ವಿ.ಕೀ.), ನಿತೀಶ್ ಕುಮಾರ್ ರೆಡ್ಡಿ, ಹೆನ್ರಿಚ್ ಕ್ಲಾಸೆನ್, ಸಲೀಲ್ ಅರೋರಾ, ಅನಿಕೇತ್ ವರ್ಮಾ, ಹರ್ಷ್ ದುಬೆ, ಹರ್ಷಲ್ ಪಟೇಲ್, ಜಯದೇವ್ ಉನಾದ್ಕತ್, ಈಶಾನ್ ಮಾಲಿಂಗ.
ಇಂಪ್ಯಾಕ್ಟ್ ಪ್ಲೇಯರ್: ಡೇವಿಡ್ ಪೇನ್.