ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಇನ್ನು ಮುಂದೆ ದಾಖಲೆಗಳನ್ನು ಬೆನ್ನಟ್ಟುವುದಿಲ್ಲ, ಪ್ರತಿ ಕ್ಷಣವನ್ನು ಆನಂದಿಸಲು ಪ್ರಯತ್ನಿಸುತ್ತಿದ್ದೇನೆ; ಪಂದ್ಯದ ಬಳಿಕ ಕೊಹ್ಲಿ ಭಾವುಕ

IPL 2026: ಕಳೆದ ಎರಡು ಪಂದ್ಯಗಳಲ್ಲಿ ಶೂನ್ಯ ಸುತ್ತಿದ್ದ ವಿರಾಟ್‌ ಕೊಹ್ಲಿ ಈ ಪಂದ್ಯದಲ್ಲಿ ಶತಕ ಬಾರಿಸಲೆಂದೇ ಪಣತೊಟ್ಟು ಬಂದಂತಿತ್ತು. ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್‌ ನಡೆಸಿದ ಕೊಹ್ಲಿ, ಪ್ರತಿ ಹೊಡೆತವನ್ನು ಆನಂದಿಸುತ್ತಲೇ ಇದ್ದರು. 60 ಎಸೆತಗಳಲ್ಲಿ ಅಜೇಯ 105 ರನ್ ಗಳಿಸಿದರು.

Virat Kohli

ರಾಯ್ಪುರ, ಮೇ 14: 'ನಾನು ಇನ್ನು ಮುಂದೆ ದಾಖಲೆಗಳ ಗೀಳನ್ನು ಹೊಂದಿಲ್ಲ ಮತ್ತು ಬದಲಿಗೆ ಕ್ರಿಕೆಟ್‌ನಲ್ಲಿ ಇನ್ನೂ ಉಳಿದಿರುವ ಪ್ರತಿ ಕ್ಷಣವನ್ನು ಆನಂದಿಸಲು ಪ್ರಯತ್ನಿಸುತ್ತಿದ್ದೇನೆ' ಇದು ದಿಗ್ಗಜ ಬ್ಯಾಟರ್‌ ವಿರಾಟ್‌ ಕೊಹ್ಲಿ(Virat Kohli) ಬುಧವಾರ ನೆಡೆದಿದ್ಧ ಐಪಿಎಲ್‌(IPL 2026) ಪಂದ್ಯದ ಬಳಿಕ ಹೇಳಿದ ಮಾತು. ಕೊಹ್ಲಿಯ ಈ ಮಾತುಗಳು ರಾಯ್ಪುರದಲ್ಲಿ ನೆರದಿದ್ದ ಅಭಿಮಾನಿಗಳನ್ನು ಒಂದು ಕ್ಷಣ ಭಾವುಕರನ್ನಾಗಿಸಿತು.

ಕೋಲ್ಕತಾ ನೈಟ್‌ ರೈಡರ್ಸ್‌ ವಿರುದ್ಧ ಶತಕ ಬಾರಿಸಿದ ವಿರಾಟ್‌ ಕೊಹ್ಲಿ, ಪಂದ್ಯದ ಬಳಿಕ ಮಾತನಾಡುವ ವೇಳೆ, "ಇಷ್ಟೆಲ್ಲಾ ಆದ ಮೇಲೂ ನನಗೆ ಬ್ಯಾಟಿಂಗ್ ಅಂದ್ರೆ ತುಂಬಾ ಇಷ್ಟ. ಅದೇ ನನ್ನ ಮೂಲ ಭಾವನೆ" ಎಂದು ಹೇಳಿದರು.

"ಈ ಮಟ್ಟದಲ್ಲಿ ಆಡುತ್ತಿರುವುದು ಎಂತಹ ಗೌರವ. ವಿಶ್ವದ ಅತ್ಯುತ್ತಮ ಆಟಗಾರರೊಂದಿಗೆ ಸ್ಪರ್ಧಿಸುತ್ತಿರುವುದು ಎಂತಹ ಗೌರವ. ನನ್ನ ಜೀವನದುದ್ದಕ್ಕೂ ನಾನು ಮಾಡಿದ್ದು ಇದನ್ನೇ. ಕ್ರಿಕೆಟ್ ನನಗೆ ನಿಜವಾಗಿಯೂ ಇಷ್ಟವಾದ ವಿಷಯ."

"ನಾನು ಫೀಲ್ಡಿಂಗ್ ಮಾಡುತ್ತಿರಲಿ ಅಥವಾ ಬ್ಯಾಟಿಂಗ್ ಮಾಡುತ್ತಿರಲಿ, ಮೈದಾನದಲ್ಲಿ ನನ್ನ ಹೃದಯ ಮತ್ತು ಆತ್ಮವನ್ನು ನೀಡುತ್ತೇನೆ, ಏಕೆಂದರೆ ಅದು ಒಂದು ದಿನ ಕೊನೆಗೊಳ್ಳುತ್ತದೆ."

"ನಾನು ಮೈದಾನದಲ್ಲಿರುವ ಪ್ರತಿ ದಿನವನ್ನು ಸದುಪಯೋಗಪಡಿಸಿಕೊಳ್ಳಲು ಮತ್ತು ನನ್ನನ್ನು ಆನಂದಿಸಲು ಮತ್ತು ಒತ್ತಡದ ಸಂದರ್ಭಗಳನ್ನು ಎದುರು ನೋಡಲು ಬಯಸುತ್ತೇನೆ." ಎಂದು ಕೊಹ್ಲಿ ಹೇಳಿದರು.



ಕಳೆದ ಎರಡು ಪಂದ್ಯಗಳಲ್ಲಿ ಶೂನ್ಯ ಸುತ್ತಿದ್ದ ವಿರಾಟ್‌ ಕೊಹ್ಲಿ ಈ ಪಂದ್ಯದಲ್ಲಿ ಶತಕ ಬಾರಿಸಲೆಂದೇ ಪಣತೊಟ್ಟು ಬಂದಂತಿತ್ತು. ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್‌ ನಡೆಸಿದ ಕೊಹ್ಲಿ, ಪ್ರತಿ ಹೊಡೆತವನ್ನು ಆನಂದಿಸುತ್ತಲೇ ಇದ್ದರು. 60 ಎಸೆತಗಳಲ್ಲಿ ಅಜೇಯ 105 ರನ್ ಗಳಿಸಿದರು. ಅದರಲ್ಲಿ 11 ಬೌಂಡರಿಮತ್ತು 3 ಸಿಕ್ಸರ್‌ ಇದ್ದವು. 2008ರಿಂದ ಟೂರ್ನಿಯಲ್ಲಿ ಆಡುತ್ತಿರುವ ಅವರು 9ನೇ ಶತಕ ದಾಖಲಿಸಿದರು.

Virat Kohli: ಒಂದು ಶತಕ, ಹಲವು ದಾಖಲೆ ಬರೆದ ವಿರಾಟ್‌ ಕೊಹ್ಲಿ

ಸಂಕ್ಷಿಪ್ತ ಸ್ಕೋರು

ಕೋಲ್ಕತ್ತ ನೈಟ್ ರೈಡರ್ಸ್: 20 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 192 (ಕ್ಯಾಮರಾನ್ ಗ್ರೀನ್ 32, ಅಂಗಕ್ರಿಷ್ ರಘುವಂಶಿ 71, ರಿಂಕು ಸಿಂಗ್ ಔಟಾಗದೇ 49, ಭುವನೇಶ್ವರ್ ಕುಮಾರ್ 12ಕ್ಕೆ1, ಜೋಶ್ ಹೇಝಲ್‌ವುಡ್ 25ಕ್ಕೆ1, ರಸಿಕ್ ಸಲಾಮ್ 28ಕ್ಕೆ1). ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು: 19.1 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 194 (ವಿರಾಟ್ ಕೊಹ್ಲಿ ಅಜೇಯ 105, ದೇವದತ್ತ ಪಡಿಕ್ಕಲ್ 39, ರಜತ್ ಪಾಟೀದಾರ್ 11, ಕಾರ್ತಿಕ್ ತ್ಯಾಗಿ 32ಕ್ಕೆ3, ಸುನಿಲ್ ನಾರಾಯಣ್ 31ಕ್ಕೆ1).