ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

GT vs CSK: ಗುಜರಾತ್‌ ವಿರುದ್ಧದ ಕೊನೆಯ ಪಂದ್ಯದಲ್ಲಾದರೂ ಆಡಲಿದ್ದಾರಾ ಧೋನಿ?

IPL 2026: ಗಾಯದ ಮತ್ತು ಫಿಟ್ನೆಸ್‌ ಸಮಸ್ಯೆಯಿಂದ ಹಾಲಿ ಆವೃತ್ತಿಯ ಐಪಿಎಲ್‌ನಲ್ಲಿ ಇದುವರೆಗೂ ಒಂದೂ ಪಂದ್ಯವಾಡದ ಧೋನಿ ಇದೀಗ ಕೊನೆಯ ಪಂದ್ಯದಲ್ಲಾದರೂ ಆಡಲಿದ್ದಾರಾ ಎಂಬ ಕುತೂಹಲ ಅಭಿಮಾನಿಗಳದ್ದಾಗಿದೆ. ಒಂದೊಮ್ಮೆ ಧೋನಿ ಈ ಪಂದ್ಯದಲ್ಲಿ ಇಂಪ್ಯಾಕ್ಟ್‌ ಆಟಗಾರನಾಗಿ ಆಡಿ ವಿದಾಯ ಹೇಳಿದರೂ ಅಚ್ಚರಿಯಿಲ್ಲ.

GT vs CSK

ಅಹಮದಾಬಾದ್‌, ಮೇ 21: ಇಂದು(ಗುರುವಾರ) ನಡೆಯುವ ಐಪಿಎಲ್‌(IPL 2026) ಪಂದ್ಯದಲ್ಲಿ ಈಗಾಗಲೇ ಪ್ಲೇ-ಆಫ್‌ ಸ್ಥಾನ ಖಚಿತಪಡಿಸಿಕೊಂಡಿರುವ ಗುಜರಾತ್‌ ಟೈಟಾನ್ಸ್‌(GT vs CSK) ತಂಡ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ಆಡಲಿದೆ. ಚೆನ್ನೈಗಿದು ಮಾಡು ಇಲ್ಲವೇ ಮಡಿ ಪಂದ್ಯ. 13 ಪಂದ್ಯಗಳಲ್ಲಿ 12 ಅಂಕ ಗಳಿಸಿರುವ ತಂಡ ಈ ಪಂದ್ಯದಲ್ಲಿ ಗೆದ್ದರಷ್ಟೇ ಪ್ಲೇ-ಆಫ್‌ ರೇಸ್‌ನಲ್ಲಿ ಉಳಿದುಕೊಳ್ಳಲಿದೆ. ಒಂದು ವೇಳೆ ಸೋತರೆ ತಂಡ ರೇಸ್‌ನಿಂದ ಅಧಿಕೃತವಾಗಿ ಹೊರಬೀಳಲಿದೆ. ಇತ್ತೀಚೆಗೆ ಚೆನ್ನೈನಲ್ಲಿ ನಡೆದಿದ್ದ ಉಭಯ ತಂಡಗಳ ನಡುವಿನ ಮುಖಾಮುಖಿಯಲ್ಲಿ ಗುಜರಾತ್‌ 8 ವಿಕೆಟ್‌ನಿಂದ ಗೆದ್ದಿತ್ತು.

ಕೊನೆಯ ಪಂದ್ಯದಲ್ಲಾದರೂ ಆಡಲಿದ್ದಾರಾ ಧೋನಿ?

ಗಾಯದ ಮತ್ತು ಫಿಟ್ನೆಸ್‌ ಸಮಸ್ಯೆಯಿಂದ ಹಾಲಿ ಆವೃತ್ತಿಯ ಐಪಿಎಲ್‌ನಲ್ಲಿ ಇದುವರೆಗೂ ಒಂದೂ ಪಂದ್ಯವಾಡದ ಧೋನಿ ಇದೀಗ ಕೊನೆಯ ಪಂದ್ಯದಲ್ಲಾದರೂ ಆಡಲಿದ್ದಾರಾ ಎಂಬ ಕುತೂಹಲ ಅಭಿಮಾನಿಗಳದ್ದಾಗಿದೆ. ಒಂದೊಮ್ಮೆ ಧೋನಿ ಈ ಪಂದ್ಯದಲ್ಲಿ ಇಂಪ್ಯಾಕ್ಟ್‌ ಆಟಗಾರನಾಗಿ ಆಡಿ ವಿದಾಯ ಹೇಳಿದರೂ ಅಚ್ಚರಿಯಿಲ್ಲ.

KKR vs MI: ತಂಡದ ಸಂಪೂರ್ಣ ವೈಫಲ್ಯಕ್ಕೆ ಕಳಪೆ ಫೀಲ್ಡಿಂಗ್‌ ಕಾರಣ; ಹಾರ್ದಿಕ್‌ ಪಾಂಡ್ಯ

ಪಿಚ್‌ ರಿಪೋರ್ಟ್‌

ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂ ಪಂದ್ಯಾವಳಿಯ ಆರಂಭದಲ್ಲಿ ಕೆಲವು ಅದ್ಭುತ ಪಿಚ್‌ಗಳನ್ನು ನಿರ್ಮಿಸಿತು. ಬ್ಯಾಟರ್‌ಗಳಿಗೆ ಹೆಚ್ಚಿನ ನೆರವು ಉಂಟು ಮಾಡಿತ್ತು. ಆದರೆ ಇತ್ತೀಚಿನ ಪಂದ್ಯಗಳಲ್ಲಿ ಅಂಕಗಳು ಗಣನೀಯವಾಗಿ ಕುಸಿದಿವೆ. ಮೊದಲ ಇನ್ನಿಂಗ್ಸ್‌ನ ಸರಾಸರಿ ಮೊತ್ತ ಸುಮಾರು 162 ಆಗಿದೆ. ಹೀಗಾಗಿ ಟಾಸ್ ಗೆದ್ದ ನಾಯಕ ಮೊದಲು ಬೌಲಿಂಗ್ ಮಾಡಲು ಬಯಸುತ್ತಾರೆ. ಪಂದ್ಯಕ್ಕೆ ಯಾವುದೇ ಮಳೆ ಭೀತಿ ಇಲ್ಲದ ಕಾರಣ ಪಂದ್ಯ ಸಂಪೂರ್ಣವಾಗಿ ನಡೆಯಲಿದೆ.

ಮುಖಾಮುಖಿ

ಆಡಿದ ಪಂದ್ಯಗಳು-09

ಗುಜರಾತ್‌ ಗೆಲುವು- 05

ಸಿಎಸ್‌ಕೆ ಗೆಲುವು-04

ಗುಜರಾತ್ ಟೈಟಾನ್ಸ್ (ಜಿಟಿ):

ಶುಭಮನ್ ಗಿಲ್ (ನಾಯಕ), ಬಿ ಸಾಯಿ ಸುದರ್ಶನ್, ಜೋಸ್ ಬಟ್ಲರ್ (ವಿ.ಕೀ.), ಜೇಸನ್ ಹೋಲ್ಡರ್, ವಾಷಿಂಗ್ಟನ್ ಸುಂದರ್, ನಿಶಾಂತ್ ಸಿಂಧು, ರಶೀದ್ ಖಾನ್, ಅರ್ಷದ್ ಖಾನ್, ಕಗಿಸೊ ರಬಾಡ, ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್.

ಇಂಪ್ಯಾಕ್ಟ್‌ ಆಟಗಾರ: ರಾಹುಲ್ ತೆವಾಟಿಯಾ.

ಚೆನ್ನೈ ಸೂಪರ್ ಕಿಂಗ್ಸ್ (CSK)

ಸಂಜು ಸ್ಯಾಮ್ಸನ್ (ವಿ.ಕೀ.), ಋತುರಾಜ್ ಗಾಯಕ್ವಾಡ್ (ನಾಯಕ), ಉರ್ವಿಲ್ ಪಟೇಲ್, ಡೆವಾಲ್ಡ್ ಬ್ರೆವಿಸ್, ಶಿವಂ ದುಬೆ, ಪ್ರಶಾಂತ್ ವೀರ್, ಅಕೇಲ್ ಹೊಸೈನ್, ಅನ್ಶುಲ್ ಕಾಂಬೋಜ್, ಸ್ಪೆನ್ಸರ್ ಜಾನ್ಸನ್, ನೂರ್ ಅಹ್ಮದ್, ಮುಖೇಶ್ ಚೌಧರಿ.

ಇಂಪ್ಯಾಕ್ಟ್ ಪ್ಲೇಯರ್: ಕಾರ್ತಿಕ್ ಶರ್ಮಾ.