ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IPL playoffs Race: ಗುಜರಾತ್‌ ಸೋಲಿನಿಂದ ಆರ್‌ಸಿಬಿಗೆ ಅಗ್ರಸ್ಥಾನಕ್ಕೇರುವ ಅವಕಾಶ

ಇನ್ನೊಂದು ಲೆಕ್ಕಾಚಾರದ ಪ್ರಕಾರ ಆರ್‌ಸಿಬಿ ಎರಡು ಪಂದ್ಯಗಳ ಪೈಕಿ ಒಂದು ಪಂದ್ಯ ಗೆದ್ದರೆ, ಆಗ ಗುಜರಾತ್‌ ಕೊನೆಯ ಪಂದ್ಯ ಸೋಲಬೇಕು. ಇನ್ನೊಂದೆಡೆ ಪಂಜಾಬ್‌ ಕಿಂಗ್ಸ್‌ ಉಳಿದ ಎರಡು ಪಂದ್ಯಗಳ ಪೈಕಿ ಒಂದನ್ನು ಸೋಲಬೇಕು. ಪಂಜಾಬ್‌ ಕೂಡ 17 ಅಂಕ ಹೊಂದಿದೆ. ಆರ್‌ಸಿಬಿಯಂತೆ ಉಳಿದ ಎರಡು ಪಂದ್ಯ ಗೆದ್ದರೆ ತಂಡದ ಅಂಕ 21 ಆಗಲಿದೆ.

ಬೆಂಗಳೂರು: ಗುಜರಾತ್‌ ಟೈಟಾನ್ಸ್‌(GT) ತಂಡ ಲಕ್ನೋ ವಿರುದ್ಧ ಸೋಲು ಕಂಡ ಕಾರಣದಿಂದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು(RCB) ತಂಡಕ್ಕೆ ಅಗ್ರಸ್ಥಾನಕ್ಕೇರುವ ಅವಕಾಶವೊಂದು ಲಭಿಸಿದೆ. ಆರ್‌ಸಿಬಿ ಇಂದು ನಡೆಯುವ ಹೈದರಾಬಾದ್‌ ವಿರುದ್ಧ ಗೆದ್ದರೆ ಅಗ್ರಸ್ಥಾನಕ್ಕೇರಲಿದೆ. ಜತೆಗೆ ಲಕ್ನೋ(LSG) ವಿರುದ್ಧದ ಕೊನೆಯ ಪಂದ್ಯ ಕೂಡ ಗೆದ್ದರೆ ಆರ್‌ಬಿಸಿ ಅಗ್ರಸ್ಥಾನವನ್ನು(IPL playoffs Race) ತನ್ನದಾಗಿಸಿಕೊಳ್ಳಲಿದೆ. ಇಲ್ಲಿಯೂ ಒಂದು ಲೆಕ್ಕಾಚಾರವಿದೆ.

ಸದ್ಯ ಗುಜರಾತ್‌ 13 ಪಂದ್ಯಗಳಿಂದ 18 ಅಂಕಗಳಿಸಿ ಅಗ್ರಸ್ಥಾನದಲ್ಲಿದೆ. ಆರ್‌ಸಿಬಿ 12 ಪಂದ್ಯಗಳಿಂದ 17 ಅಂಕ ಪಡೆದು ದ್ವಿತೀಯ ಸ್ಥಾನದಲ್ಲಿದೆ. ಇಂದು ಹೈದರಾಬಾದ್‌ ಗೆದ್ದರೆ 19 ಅಂಕ ಗಳಿಸಿ ಅಗ್ರಸ್ಥಾನಕ್ಕೇರಲಿದೆ. ಒಂದೊಮ್ಮೆ ಗುಜರಾತ್‌ ಕೊನೆಯ ಪಂದ್ಯದಲ್ಲಿ ಗೆದ್ದರೆ 20 ಅಂಕ ಆಗಲಿದೆ. ಆದರೆ ಆರ್‌ಸಿಬಿಗೆ ಇನ್ನೊಂದು ಪಂದ್ಯ ಬಾಕಿ ಇರುವ ಕಾರಣ ಆ ಪಂದ್ಯವನ್ನು ಗೆದ್ದರೆ 21 ಅಂಕ ಆಗಲಿದೆ. ಹೀಗಾಗಿ ಆರ್‌ಸಿಬಿಗೆ ಅಗ್ರಸ್ಥಾನ ಪಡೆಯಲು ಹೆಚ್ಚು ಅವಕಾಶವಿದೆ.

ಇನ್ನೊಂದು ಲೆಕ್ಕಾಚಾರದ ಪ್ರಕಾರ ಆರ್‌ಸಿಬಿ ಎರಡು ಪಂದ್ಯಗಳ ಪೈಕಿ ಒಂದು ಪಂದ್ಯ ಗೆದ್ದರೆ, ಆಗ ಗುಜರಾತ್‌ ಕೊನೆಯ ಪಂದ್ಯ ಸೋಲಬೇಕು. ಇನ್ನೊಂದೆಡೆ ಪಂಜಾಬ್‌ ಕಿಂಗ್ಸ್‌ ಉಳಿದ ಎರಡು ಪಂದ್ಯಗಳ ಪೈಕಿ ಒಂದನ್ನು ಸೋಲಬೇಕು. ಪಂಜಾಬ್‌ ಕೂಡ 17 ಅಂಕ ಹೊಂದಿದೆ. ಆರ್‌ಸಿಬಿಯಂತೆ ಉಳಿದ ಎರಡು ಪಂದ್ಯ ಗೆದ್ದರೆ ತಂಡದ ಅಂಕ 21 ಆಗಲಿದೆ. ಹೀಗಾಗಿ ಆರ್‌ಸಿಬಿಗೆ ಅಗ್ರಸ್ಥಾನಕ್ಕೇರಬೇಕಾದರೆ ಪಂಜಾಬ್‌ ಕೂಡ ಒಂದು ಪಂದ್ಯ ಸೋಲಬೇಕು. ಇಲ್ಲವಾದಲ್ಲಿ ಆರ್‌ಸಿಬಿ ಉತ್ತಮ ರನ್‌ರೇಟ್‌ ಕಾಯ್ದುಕೊಳ್ಳಬೇಕು. ಆಗ ಪಂಜಾಬ್‌ ಎರಡು ಪಂದ್ಯ ಗೆದ್ದರೂ ರನ್‌ರೇಟ್‌ ಆಧಾರದಲ್ಲಿ ಆರ್‌ಸಿಬಿಗೆ ಅಗ್ರಸ್ಥಾನ ಉಳಿಸಿಕೊಳ್ಳಬಹುದು.